Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಕೆಲವು ಗೊಂದಲ ಸೃಷ್ಟಿಯಾಗಿದೆ. ಇದನ್ನು ಬಗೆಹರಿಸಿಕೊಳ್ಳಲು ಉಭಯ ನಾಯಕರು ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದರು.
ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಸಿಟ್ಟಿನಿಂದಲೇ ಉತ್ತರಿಸಿದ ಅವರು, ಏನು ಕೊಟ್ಟ ಮಾತು? ಹೈಕಮಾಂಡ್ ಹೇಳಿದ್ದನ್ನು ಮಾಡುತ್ತೇವೆ ಎಂದು ಹೇಳಿದ ಮೇಲೆ ಕೊಟ್ಟ ಮಾತಿನಂತೆ ಎಂಬ ಪ್ರಶ್ನೆ ಎಲ್ಲಿ ಬಂರು ಎಂದರು.
ಕಾವೇರಿ ನಿವಾಸದಲ್ಲಿ ಸಭೆ ಬಳಿಕ ಇಬ್ಬರು ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಒಗ್ಗಟ್ಟಿನ ಮಂತ್ರ ಸಾರಿದ್ರು. ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾಧ್ಯಮದವರು ಕೊಟ್ಟ ಮಾತಿನ ಬಗ್ಗೆ ಪ್ರಶ್ನೆ ಮಾಡಿದ್ರು. ಈ ಪ್ರಶ್ನೆ ಕೇಳ್ತಿದ್ದಂತೆ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದಾರೆ.
ಏನ್ ಕೊಟ್ಟ ಮಾತು ಎಂದು ಗರಂ ಆದ ಸಿದ್ದರಾಮಯ್ಯ ಅವ್ರು, ಹೈಕಮಾಂಡ್ ಹೇಳಿದ್ದಂತೆ ಅಂತ ಹೇಳಿಲ್ವಾ? ಮತ್ತೇನು ಎನ್ನುತ್ತಾ ಸಿಟ್ಟಿನಲ್ಲಿ ನುಡಿದಿದ್ದಾರೆ. ಯಾವ ಶಾಸಕರು ಕೂಡ ಸರ್ಕಾರ ವಿರುದ್ಧ ಇಲ್ಲ ಎಂದು ಸಿದ್ದರಾಮಯ್ಯ ಕೊಂಚ ಗರಂ ಆಗಿ ನುಡಿದಿದ್ದಾರೆ. ಇದೇ ವೇಳೆ ಡಿಕೆಶಿ ನಕ್ಕು ಸುಮ್ಮನಾದ್ರು.