Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಹಣ ಇದ್ದರೆ ಎಲ್ಲರು ಜೊತೆಯಾಗಿ ಇರುತ್ತಾರೆ.. ಹಣವಿಲ್ಲದೆ ಬದುಕು ನಡೆಯೋದಿಲ್ಲ. ಆದ್ರೆ ಸಿಕ್ಕ ಕೆಲ್ಸ ಶಾಶ್ವತ ಅಲ್ವೇ ಅಲ್ಲ. ದೊಡ್ಡ ಉದ್ಯೋಗದಲ್ಲಿರುವವರು ಕೂಡ ಏಕಾಏಕಿ ಕೆಲ್ಸ ಕಳೆದುಕೊಂಡು ಮನೆಯಲ್ಲಿರುವ ಸ್ಥಿತಿ ಇದೆ. ಆಗ ಕುಟುಂಬಸ್ಥರ ಧೈರ್ಯ, ಸಾಂತ್ವಾನ ಬಹಳ ಮುಖ್ಯ. ಕೆಲ್ಸ ಕಳೆದುಕೊಂಡ ನೋವು, ಆಘಾತದ ಮಧ್ಯೆ ಕುಟುಂಬಸ್ಥರ ತಾತ್ಸಾರ ಮನುಷ್ಯನನ್ನು ಕುಗ್ಗಿಸುತ್ತೆ. ಕೆಲ್ಸ ಕಳೆದುಕೊಂಡ ವ್ಯಕ್ತಿ ಮತ್ತೆ ಹೊಸ ಕೆಲ್ಸ ಹುಡುಕಿಕೊಂಡು ಬದುಕು ನಡೆಸಬೇಕೆಂದ್ರೆ ಕುಟುಂಬಸ್ಥರ ಬೆಂಬಲ ಅತ್ಯಗತ್ಯವಾಗುತ್ತದೆ.
ಆದ್ರೆ ಎಲ್ಲ ಪಾಲಕರಿಂದ ಇದನ್ನು ಬಯಸೋದು ಕಷ್ಟ. ಕೆಲ ಪಾಲಕರು ಮಕ್ಕಳಿಗಿಂತ ಮಕ್ಕಳ ಕೆಲ್ಸ, ಹಣವನ್ನು ಪ್ರೀತಿಸ್ತಾರೆ. ಕೆಲ್ಸ ಕಳೆದುಕೊಂಡಾಗ ಪಾಲಕರ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದನ್ನು ಕಂಟೆಂಟ್ ಕ್ರಿಯೆಟರ್ ಒಬ್ಬರು ಹೇಳಿದ್ದಾರೆ. ಅವ್ರ ವಿಡಿಯೋ ವೈರಲ್ ಆಗಿದೆ.
ನಿರ್ದೇಶಕ ದಯಾಳ್ ತಮ್ಮ ಇನ್ಸ್ಟಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಕೆಲ್ಸದಲ್ಲಿದ್ದಾಗ, ಅಮ್ಮ ಇನ್ನೆರಡು ರೊಟ್ಟಿ ಹೆಚ್ಚು ಹಾಕಿಕೊಳ್ಳುವಂತೆ ಒತ್ತಾಯ ಮಾಡ್ತಿದ್ದರು. ಅದೇ ಕೆಲ್ಸ ಕಳೆದುಕೊಂಡು ಮನೆಗೆ ಬಂದಾಗ ರೊಟ್ಟಿ ಕೇಳೋರಿಲ್ಲ. ಬಾಯ್ಬಿಟ್ಟು ಎರಡು ರೊಟ್ಟಿ ಹೆಚ್ಚು ಬೇಕು ಅಂತ ಕೇಳಿದ್ರೆ, ಅಪ್ಪ ಎಲ್ಲರ ಮುಂದೆ ಅಪಹಾಸ್ಯ ಮಾಡಿದ್ರು. ಇನ್ನರೆಡು ರೊಟ್ಟಿ ಬೇಕಂತೆ ಹಾಕು ಅಂದ್ರು. ಉದ್ಯೋಗ ಕಳೆದುಕೊಂಡ ನೋವಿಗಿಂತ ಇದು ಮತ್ತಷ್ಟು ನೋವು ನೀಡುತ್ತದೆ ಅಂತ ತಮ್ಮ ದುಃಖ ತೋಡಿಕೊಂಡಿದ್ದಾರೆ.
ನಿಮ್ಮ ಬಳಿ ಹಣವಿದ್ದಾಗ, ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ. ನಿಮ್ಮ ಕುಟುಂಬವೂ ಸಹ. ನಿಮ್ಮ ಬಳಿ ಏನೂ ಇಲ್ಲದಿದ್ದಾಗ ನಿಮ್ಮ ಮನೆಯವರೂ ನಿಮ್ಮನ್ನು ವಿಭಿನ್ನವಾಗಿ ನೋಡ್ತಾರೆ ಅಂತ ದಯಾಳ್ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://www.instagram.com/reel/DReCIlHimr5/?igsh=NjJ4OGZ5M2p3d282