Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮನೆಯೊಳಗೆ ಚಪ್ಪಲಿ ತರುವ ಅಭ್ಯಾಸ ನಿಮಗೂ ಇದೆಯೇ? ಹಾಗಾದರೆ ನೀವು ಈ ವಿಷಯವನ್ನು ತಿಳಿಯಬೇಕು. ಹಿಂದೆ ಚಪ್ಪಲಿಗಳನ್ನು ಮನೆಯ ಹೊರಗೆ ಇಡುವ ಸಂಪ್ರದಾಯವಿತ್ತು. ನಮ್ಮ ಜೊತೆಯೇ ಊರು ತಿರುಗಿ ಬಂದರೂ ಕೂಡ ನಮ್ಮ ಪಾದರಕ್ಷೆಗಳಿಗೆ ಮನೆಯೊಳಕ್ಕೆ ಪ್ರವೇಶವಿರಲಿಲ್ಲ. ಆದರೆ ಕಾಲ ಬದಲಾದಂತೆ, ಸಣ್ಣ ಮನೆಯಿರುವವರು, ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವ ಜನ, ಬಾಡಿಗೆಯ ಮನೆಯಲ್ಲಿ ಇರುವವರು ತಮ್ಮ ಚಪ್ಪಲಿಗಳನ್ನು ಮನೆಯ ಒಳಗೆ ಸಣ್ಣ ಜಾಗ ಮಾಡಿ ಇಡುತ್ತಿದ್ದರು. ಈಗ ಇದೆಲ್ಲಾ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ವಾಸ್ತು ಪ್ರಕಾರ ಮನೆಯ ಈ ಜಾಗಗಳಲ್ಲಿ ಚಪ್ಪಲಿ, ಷೂ ಧರಿಸಬೇಡಿ, ಇಲ್ಲವಾದರೆ ಅದರಿಂದ ಹಾನಿಯೇ ಹೆಚ್ಚು.
ಸ್ಟೋರ್ ರೂಂನಲ್ಲಿ ನಾವು ನಮ್ಮ ಅತ್ಯವಶ್ಯಕ, ಸಾಮಾನು ಸರಂಜಾಮುಗಳನ್ನು ಇಡುತ್ತೇವೆ. ಈ ಜಾಗ ಊಟ ಮಾಡುವ ಸ್ಥಳದಂತೆ ಶುಚಿಯಾಗಿಟ್ಟುಕೊಂಡಿರುತ್ತೇವೆ. ಅಡುಗೆ ಸಾಮಾನುಗಳನ್ನು ಅವಶ್ದಯವಾಗಿ ಇಲ್ಲಿ ಇಟ್ಟುಕೊಂಡಿರುತೇವೆ. ಹಾಗಾಗಿ ಮನೆಯಲ್ಲಿ ಇದು ತುಂಬಾ ಶುಭ ಸ್ಥಾನವಾಗಿರುತ್ತದೆ. ಹಾಗಾಗಿ ಈ ಜಾಗದಲ್ಲಿ ಚಪ್ಪಲಿ, ಷೂ ಹಾಕಿಕೊಳ್ಳಬಾರದು ಅಥವಾ ಇಡಬಾರದು.
ಅಡುಗೆ ಮನೆಯೆಂದರೆ ಅಡುಗೆ ಮಾಡುವ, ಊಟ ಮಾಡುವ ಸ್ಥಳ. ಅದನ್ನು ಅತ್ಯಂತ ಶುಚಿಯಾಗಿಟ್ಟುಕೊಳ್ಳಬೇಕು. ಇದು ನಮ್ಮ ಆರೋಗ್ಯವನ್ನು ಕಾಪಾಡುವ ಸ್ಥಳ. ಹಾಗಾಗಿ ಈ ಜಾಗದಲ್ಲಿ ಚಪ್ಪಲಿ/ ಷೂ ಇಡುವುದಕ್ಕೆ/ ಹಾಕಿಕೊಳ್ಳುವುದಕ್ಕೆ ಬಳಸಬೇಡಿ.
ಪೂಜಾ ಮಂದಿರ ಎಂಬುದು ನಿಮ್ಮ ಇಡೀ ಪರಿವಾರದ ಶಾಂತಿ ನೆಮ್ಮದಿಯನ್ನು ಕಾಪಾಡುವ ಸ್ಥಳ. ಸಕಾರಾತ್ಮಕತೆ ಇಲ್ಲಿ ಸದಾ ಚಿಲುಮೆಯಂತೆ ಪುಟಿಯುತ್ತಿರುತ್ತದೆ. ಹಾಗಾಗಿಯೇ ಪವಿತ್ರ ಪೂಜಾ ಮಂದಿರವನ್ನ ಯಾರೂ ತಾನೆ ಚಪ್ಪಲಿ/ ಷೂ ಇಡುವುದಕ್ಕೆ/ ಹಾಕಿಕೊಳ್ಳುವುದಕ್ಕೆ ಬಳಸುವುದಿಲ್ಲ. ಒಂದು ವೇಳೆ ನೀವು ಪೂಜಾ ಮಂದಿರದಲ್ಲಿ ಚಪ್ಪಲಿ ಹಾಕಿಕೊಳ್ಳುವುದಕ್ಕೆ ಶುರು ಮಾಡಿದರೆ ಅದರಿಂದ ದೇವರು ಕೋಪ ಮಾಡಿಕೊಳ್ಳುತ್ತಾರೆ
ತಿಜೋರಿ ಜಾಗ ಅಂದರೆ ಹಣ ಇಡುವ ಸ್ಥಳ. ಇದು ನಿಜಕ್ಕೂ ಬಹಳ ಸ್ಥಳ ಮಹಾತ್ಮೆ ಹೊಂದಿರುವ ಜಾಗ. ಧನ ದೇವತೆ ಲಕ್ಷ್ಮಿಯ ವಾಸ ಸ್ಥಳ ಇದು. ಇಲ್ಲಿ ಧನ ಲಕ್ಷ್ಮೀ ಸದಾ ತನ್ನ ಕೃಪೆ ತೋರುತ್ತಿರುತ್ತಾಳೆ. ಹಾಗಾಗಿ ವಾಸ್ತು ಶಾಸ್ತ್ರದ ಪ್ರಕಾರ ತಿಜೋರಿ ಜಾಗದ ಆಸುಪಾಸಿನಲ್ಲಿ ಚಪ್ಪಲಿ ಬಿಡಬಾರದು ಅಥವಾ ಹಾಕಿಕೊಳ್ಳಬಾರದು. ಹಾಗೆ ಮಾಡಿದರೆ ಲಕ್ಷ್ಮಿ ದೇವಿಗೆ ಅಪಮಾನ ಮಾಡಿದಂತಾಗುತ್ತದೆ.
https://www.newsics.com/2025/11/29/6000-airbus-flights-grounded-indigo-air-india-flights-delayed/