Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಂದ ಬಳಿಕ ಜನರ ಯೋಚನಾ ಲಹರಿ ಬದಲಾಗುತ್ತಿದೆ. ಅದರಲ್ಲೂ ಸಾಮಾಜಿಕ ಮಾಧ್ಯಮದಲ್ಲಂತೂ ಫೋಟೋ, ಸ್ಥಳ, ಊರು, ವ್ಯಕ್ತಿಗಳನ್ನು ಗುರುತೇ ಸಿಗದಂತೆ ಮಾಡಲಾಗುತ್ತಿದೆ. ಕಂಡಿದ್ದೆಲ್ಲವೂ ನಿಜವೆನೋ ಎಂಬಂತೆ ಎಡಿಟ್ ಮಾಡಲು ಈ ತಂತ್ರಜ್ಞಾನದಲ್ಲಿ ಅವಕಾಶ ಇದೆ.
ಮನರಂಜನಾ ಉದ್ದೇಶದಿಂದ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ಸ್ಯಾಂಡಲ್‌ವುಡ್ ಸ್ಟಾರ್ಸ್ ಭೇಟಿ ಮಾಡಿದರೆ ಹೇಗಿರುತ್ತದೆ ಎಂಬ ಝಲಕ್‌ನ್ಜು ಎಐ ಮೂಲಕ ತೋರಿಸಲಾಗಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಬೆಂಗಳೂರು ಕೇಂದ್ರ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಅವರನ್ನು ನೋಡಲು ಸ್ಯಾಂಡಲ್‌ವುಡ್ ಪ್ರಮುಖ ಸ್ಟಾರ್ ನಟರು ಹೋದರೆ ಹೇಗಿರುತ್ತದೆ. ಹೀಗೊಂದು ಕಲ್ಪನೆಯಡಿ ಎಐ ತಂತ್ರಜ್ಞಾನ, ನಟರ ಪೋಟೋ ಬಳಸಿ ಕಾಲ್ಪನಿಕ ದೃಶ್ಯಗಳನ್ನು ಎಡಿಟ್ ಮಾಡಿ ಕಟ್ಟಿಕೊಡಲಾಗಿದೆ. ಇದಕ್ಕೆ ದರ್ಶನ್ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ true_kannada_media ಹ್ಯಾಂಡಲ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ನಟ ದರ್ಶನ್ ಅವರು ವಿಡಿಯೋದಲ್ಲಿ ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಕಾಣಿಸಿಕೊಂಡಿದ್ದಾರೆ. ಜೈಲಿಗೆ ದರ್ಶನ್ ಅವರ ಭೇಟಿಗೆ ಇವರೆಲ್ಲರೂ ತೆರಳಿರುವಂತೆ ಫೋಟೋಗಳನ್ನು ರಚಿಸಿ ವಿಡಿಯೋ ಮಾಡಲಾಗಿದೆ.
ನಿಜವಾಗಿಯೂ ಈ ಶಿವಣ್ಣ, ಯಶ್ ಮತ್ತು ಸುದೀಪ್ ಅವರು ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ತೆರಳಿದ್ದಾರೇನೋ ಎಂಬಂತೆ ನೈಜ ರೀತಿಯಲ್ಲಿ ವಿಡಿಯೋ ಮೂಡಿ ಬಂದಿದ್ದು, ಎಲ್ಲರನ್ನೂ ಸೆಳೆಯುತ್ತಿದೆ. ಜೈಲಿಗೆ ಭೇಟಿ ನೀಡಿದಾಗ ವಿವಿಧ ಹಣ್ಣುಗಳ ಚೀಲವನ್ನು ಒಳಗಿನಿಂದ ಜಾಲರಿ ಮೂಲಕ ನಟ ದರ್ಶನ್ ಪಡೆದುಕೊಳ್ಳುತ್ತಾರೆ. ಕೆಲ ಹೊತ್ತು ನಾಲ್ವರೂ ನಿಂತು ಮಾತನಾಡುತ್ತಾರೆ. ಜೈಲಿನ ಒಳಗೆ ಕೇರ್ ಬೋರ್ಡ್ ಆಡುವುದು, ಜೈಲಿನ ಒಳಗೆ ಮುದ್ದೆ ಊಟ ಎಲ್ಲರೂ ಕೂಡಿ ಮಾಡುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಸಾಲದೆಂಬಂತೆ ಜೈಲಿನ ಒಳಗೆ ಕೆಲವು ಕಾಲ ದರ್ಶನ್ ಜತೆ ಕಳೆದು ಕೊನೆಗೆ ಮರಳುವಾಗ ದರ್ಶನ್ ಅವರತ್ತ ಕೈ ಬೀಸುವ ಸಹಜ ದೃಶ್ಯಗಳನ್ನು ಎಐ ಮೂಲಕ ಕಟ್ಟಿಕೊಡಲಾಗಿದೆ.
ಜೈಲಿನಲ್ಲಿ ಒಬ್ಬ ಕೈದಿಯನ್ನು ಭೇಟಿ ಮಾಡಲು ಸ್ನೇಹಿತರು ಹೋದರೆ ಏನೆಲ್ಲ ಆಗುತ್ತದೆ. ಅವರು ಒಟ್ಟಿಗೆ ಹೇಗೆಲ್ಲ ಕಾಣಬಹುದು ಎಂಬ ಪರಿಕಲ್ಪನೆಯನ್ನು ಇಲ್ಲಿ ಎಐನಿಂದ ಸೃಷ್ಟಿಸಲಾಗಿದೆ.
ಸಾಕಷ್ಟು ಮೆಚ್ಚುಗೆ ಕಮೆಂಟ್‌ಗಳು ಈ ವಿಡಿಯೋಗೆ ಬಂದಿವೆ. ಒಂದೇ ದಿನದಲ್ಲಿ 2.74 ಲಕ್ಷ ಲೈಕ್ಸ್‌ಗಳು, ನೂರಾರು ಕಮೆಂಟ್‌ಗಳು ಬಂದಿವೆ.
ಈ ವಿಡಿಯೋವಲ್ಲದೆ ಸ್ಯಾಂಡಲ್‌ವುಡ್‌ನ ಅಪ್ಪು, ಶಿವಣ್ಣ, ದರ್ಶನ್, ಯಶ್, ಸುದೀಪ್, ಧ್ರುವ ಸರ್ಜಾ, ರಿಶಬ್ ಶೆಟ್ಟಿ ಹೀಗೆ ಹಲವರ ಗುಂಪು ಮಕ್ಕಳಂತೆ ನಲಿದಾಡುತ್ತಾ, ಆಟವಾಡುವುದು, ಒಂದೇ ಬೈಕ್‌ನಲ್ಲಿ ತೆರಳುವುದು, ಕಾಫಿ ಅಂಗಡಿ ಮುಂದೆ ಬೈಕ್ ನಿಲ್ಲಿಸಿ ಗುಂಪಾಗಿ ಹರಟೆ ಹೊಡೆಯುವುದು, ಮಳೆಯಲ್ಲಿ ನೆನೆಯುವುದನ್ನು ಇದೇ ಎಐ ಮೂಲಕ ಕಟ್ಟಿಕೊಡಲಾಗಿದೆ.
ಅಪ್ಪು ಅವರಿಗೆ ಹೃದಯಾಘಾತವಾದ ಸಂದರ್ಭ, ಚಿತ್ರರಂಗದ ಸ್ನೇಹಿತರು ಆತಂಕದಲ್ಲಿ ಆಸ್ಪತ್ರೆಯತ್ತ ದೌಡಾಯಿಸುವುದು ಸೇರಿದಂತೆ ಸಿನಿಮಾ ರಂಗದವರ ಕುರಿತ ಒಂದಷ್ಟು ನೈಜ ಘಟನೆಗಳಿಗೆ ಸಂಬಂಧಿಸಿದ ಘಟನೆಗಳಿಗೆ ಎಐ ಟಚ್ ಕೊಡಲಾಗಿದೆ. ಕಾಲ್ಪನಿಕ ದೃಶ್ಯಗಳ ಹೆಸರಿನಲ್ಲಿ ಪೋಸ್ಟ್ ಮಾಡಲಾಗಿದೆ.
https://www.instagram.com/reel/DRjN39SknOA/?igsh=MXhnNHNta3dkdTBleQ==