Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಪತಿ- ಪತ್ನಿಯರ ಸಂಬಂಧದಲ್ಲಿ ವಿಶ್ವಾಸಹೀನತೆಯ ವೀಡಿಯೊವೊಂದು ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ನಿಯೊಬ್ಬಳು ಬಾತ್ರೂಮ್ನಲ್ಲಿ ದೀರ್ಘಕಾಲ ಕಳೆಯುತ್ತಿರುವುದನ್ನು ಗಮನಿಸಿ ಅನುಮಾನಗೊಂಡ ಪತಿ, ರಹಸ್ಯವಾಗಿ ಚಿತ್ರೀಕರಣ ಮಾಡಿದ್ದು, ಈ ವಿಡಿಯೋದಲ್ಲಿ ಆಘಾತಕಾರಿ ಸತ್ಯ ಬಯಲಾಗಿದೆ.
ವಿಡಿಯೋದಲ್ಲಿ ಮಹಿಳೆಯು ಬಾತ್ರೂಮ್ ನೆಲದ ಮೇಲೆ ಕುಳಿತು ತನ್ನ ಪ್ರಿಯಕರನೊಂದಿಗೆ ಸಣ್ಣ ಧ್ವನಿಯಲ್ಲಿ ಮಾತನಾಡುತ್ತಿರುವುದು ಮತ್ತು ಸನ್ನೆಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಆಕೆಯ ಪತಿ ಕಿಟಕಿಯ ಮೂಲಕ ಈ ದೃಶ್ಯವನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ್ದಾರೆ.
ವಿಡಿಯೋದಲ್ಲಿ ಮಹಿಳೆಯು ತನ್ನ ಪ್ರಿಯಕರನಿಗೆ ಫ್ಲೈಯಿಂಗ್ ಕಿಸ್ ನೀಡುತ್ತಿರುವುದು ಸಹ ಸೆರೆಯಾಗಿದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ (@UzmaParveen94) ಹಂಚಿಕೊಳ್ಳಲಾಗಿದೆ. ಹಂಚಿಕೊಂಡ ಖಾತೆಯು ‘ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಮುರಿದು ಬೀಳಲು ದೊಡ್ಡ ಕಾರಣ ಇದೇ ನೋಡಿ’ ಎಂದು ಶೀರ್ಷಿಕೆ ನೀಡಿದೆ. ಈ ವಿಡಿಯೋ ವೈರಲ್ ಆದ ಕೂಡಲೇ, ಸಾಮಾಜಿಕ ಮಾಧ್ಯಮ ಬಳಕೆದಾರರು ಮಹಿಳೆಯ ನಡವಳಿಕೆಯ ವಿರುದ್ಧ ತೀವ್ರ ವಾಗ್ದಾಳಿ ಮುಂದುವರಿಸಿದ್ದಾರೆ.
Strange case ಯಾರದ್ದೋ ಮದುವೆಗೆ ಕೋಟಿ ರೂ. ಖರ್ಚು ಮಾಡಿದ ರ್ಯಾಪಿಡೋ ಚಾಲಕ! ತನಿಖೆಗಿಳಿದ ಇಡಿ ಅಧಿಕಾರಿಗಳೇ ಶಾಕ್
Black magic ಹೆಣ್ಣುಮಕ್ಕಳ ಬಳಸಿದ ಬಟ್ಟೆ ಯಾರಿಗಾದರೂ ಕೊಟ್ಟರೆ ಅಪಾಯ ನಿಶ್ಚಿತ!