Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > Arecanut shells ಅಡಕೆ ಸಿಪ್ಪೆಯಿಂದ ತಯಾರಾಯ್ತು ಶರ್ಟ್, ಕುರ್ತಾ, ಸ್ಯಾನಿಟರಿ ಪ್ಯಾಡ್!
ಅನಾವರಣಕರ್ನಾಟಕಪ್ರಮುಖ

Arecanut shells ಅಡಕೆ ಸಿಪ್ಪೆಯಿಂದ ತಯಾರಾಯ್ತು ಶರ್ಟ್, ಕುರ್ತಾ, ಸ್ಯಾನಿಟರಿ ಪ್ಯಾಡ್!

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ದಾವಣಗೆರೆ: ಅಡಕೆಗೆ ಈಗ ಬಂಗಾರದ‌‌ ಬೆಲೆ‌ ಇದೆ. ಆದರೆ ಆ ಅಡಕೆ ಸಿಪ್ಪೆ‌ ಮಾತ್ರ ತಿಪ್ಪೆ ಸೇರುತ್ತಿದೆ.‌ ಅದೇ ಸಿಪ್ಪೆ ಬಳಸಿಕೊಂಡು ಇಲ್ಲಿನ ಕಾಲೇಜೊಂದರ ಸಿಬ್ಬಂದಿ, ವಿದ್ಯಾರ್ಥಿಗಳು ಸಂಶೋಧನೆ ‌ಮಾಡಿ ಅಡಕೆ ಸಿಪ್ಪೆಗೂ ಒಂದೊಳ್ಳೆ‌ ಸ್ಥಾನಮಾನ ನೀಡಿದ್ದಾರೆ.
ನಗರದ ಬಾಪೂಜಿ ತಾಂತ್ರಿಕ ಕಾಲೇಜು ಅಡಕೆ ಸಿಪ್ಪೆ ಮೇಲೆ ಹಲವಾರು ಸಂಶೋಧನೆ ನಡೆಸಿ, ಉತ್ಪನ್ನಗಳನ್ನು ಸಿದ್ಧಪಡಿಸಿ‌ ಸುದ್ದಿಯಲ್ಲಿದೆ. ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ವಿಭಾಗ ಹಲವು ವರ್ಷಗಳಿಂದ ಅಡಕೆ ಸಿಪ್ಪೆ ಮೇಲೆ ಮಾಡಿರುವ ಸಂಶೋಧನೆಗಳು ಅಂತಿಮ ಘಟ್ಟಕ್ಕೆ ತಲುಪಿವೆ.


ಅಡಕೆ ಸಿಪ್ಪೆಯ ನಾರು ಬಳಸಿ ಶರ್ಟ್, ಮಹಿಳೆಯರ ಕುರ್ತಾ ತಯಾರಿಸುವ ಪ್ರಯತ್ನ ಯಶಸ್ವಿಯಾಗಿದೆ. ಇದರೊಂದಿಗೆ ಸಿಪ್ಪೆಯಲ್ಲಿ ತಯಾರಿಸಿದ ಕಾಂಪೋಜಿಟ್ಸ್ ಮತ್ತು ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ಸಂಶೋಧನೆ‌ ಅಚ್ಚರಿ ಹುಟ್ಟುಹಾಕಿದೆ.

ಇಷ್ಟೆಲ್ಲ ಉತ್ಪನ್ನಗಳ ಸಂಶೋಧನೆ ಮಾಡಲು ಕಾಲೇಜಿನ ಪ್ರಾಂಶುಪಾಲರಾದ ಹೆಚ್. ಬಿ. ಅರವಿಂದ್ ಬೆನ್ನೆಲುಬಾಗಿದ್ದಾರೆ.
ಬಿಐಇಟಿ ಕಾಲೇಜಿನ ಟೆಕ್ಸ್ ಟೈಲ್ ತಂತ್ರಜ್ಞಾನ ವಿಭಾಗ ಅಡಕೆ ನಾರಿನಲ್ಲಿ ಬಟ್ಟೆ ತಯಾರಿಸಿದೆ. ಅಂಗಿ ತಯಾರಿಸಲು ಹೆಚ್ಚು ವೆಚ್ಚ ಆಗುವುದಿಲ್ಲ. ಅಡಕೆ ನೂಲಿನ ಒಂದು ಮೀಟರ್ ಬಟ್ಟೆ ಕೇವಲ 200 ರೂ. ನಲ್ಲಿ ಸಿದ್ಧವಾಗುತ್ತದೆ.

ಈ ಅಡಕೆ ನಾರಿನಿಂದ ತಯಾರಾಗುವ ಬಟ್ಟೆ ಖಾದಿ ಉತ್ಪನ್ನಗಳಂತೆ ಸ್ವಲ್ಪ ಗಡುಸಾಗಿರುತ್ತದೆ. ಅದನ್ನು ಇನ್ನೂ ಹೆಚ್ಚು ಸಾಫ್ಟ್ ಮಾಡಲು ಹೊರಟರೆ ಉತ್ಪಾದನಾ ವೆಚ್ಚ ದುಪ್ಪಟ್ಟಾಗಬಹುದು.
ಇದೇ ಅಡಕೆ ನಾರಿಗೆ ಸ್ಯಾನಿಟರಿ ಪ್ಯಾಡ್ ರೂಪವನ್ನೂ ಕೊಟ್ಟಿದ್ದಾರೆ. 2017 ರಿಂದ ಸಂಶೋಧನೆ ಆರಂಭ ಮಾಡಿದ್ದು, ಈವರೆಗೆ ಬರೋಬ್ಬರಿ 10 ಸಾವಿರ ಸ್ಯಾನಿಟರಿ ಪ್ಯಾಡ್ ಸಿದ್ಧಪಡಿಸಿದ್ದಾರೆ.

ಅಲ್ಲದೇ, 4 ಸಾವಿರ ಪ್ಯಾಡ್‌ಗಳನ್ನು ಉಪಯೋಗಕ್ಕಾಗಿ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಹಂಚಿದ್ದಾರೆ.
ಅಡಕೆ ಸಿಪ್ಪೆಗೆ ಬೆಲೆ ಇಲ್ಲ, ಅದನ್ನು ಇಟ್ಟುಕೊಂಡು ಒಳ್ಳೆ ಉದ್ದೇಶಕ್ಕೆ ಬಳಕೆ ಮಾಡ್ಬೇಕೆಂದು ಸ್ಯಾನಿಟರಿ ಪ್ಯಾಡ್ ತಯಾರು ಮಾಡಿದ್ದೇವೆ. 6 ಟನ್ ಸಿಪ್ಪೆಗಳು ಉತ್ಪಾದನೆ ಆಗ್ತಿದ್ದು, 3 ಟನ್‌ ಸಿಪ್ಪೆಯಲ್ಲಿ ಮೊದಲು ನಾವು ಸ್ಯಾನಿಟರಿ ಪ್ಯಾಡ್ ತಯಾರು ಮಾಡಲು ಉತ್ತೇಜನ ಕೊಟ್ಟಿದ್ದೇವೆ ಎನ್ನುತ್ತಾರೆ, ಬಯೋ ಟೆಕ್ನಾಲಜಿ ಪ್ರೊಫೆಸರ್ ಡಾ. ಮಂಜುನಾಥ್ ಎನ್. ಎಸ್.

Singer Maithili Thakur ಮೊದಲ ಯತ್ನದಲ್ಲೇ ಗೆದ್ದು ಬೀಗಿದ ಗಾಯಕಿ ಮೈಥಿಲಿ ಠಾಕೂರ್ ಅತಿ ಕಿರಿಯ ಶಾಸಕಿ!

TAGGED:and sanitary pads made from arecanut shells!kurtasShirts
Share This Article
Facebook Twitter Copy Link Print
Previous Article Singer Maithili Thakur ಮೊದಲ ಯತ್ನದಲ್ಲೇ ಗೆದ್ದು ಬೀಗಿದ ಗಾಯಕಿ ಮೈಥಿಲಿ ಠಾಕೂರ್ ಅತಿ ಕಿರಿಯ ಶಾಸಕಿ!
Next Article ಪದವಿ ವಿದ್ಯಾರ್ಥಿನಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ – ಸಾವಿನ ಸುತ್ತ ಅನುಮಾನದ ಹುತ್ತ

Popular Posts

Strange fever ರಾಜ್ಯದಲ್ಲಿ ವಿಚಿತ್ರ ಜ್ವರ: ಕಂಗಾಲಾದ ಜನ, ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

1 Min Read

KSRTC ಬಸ್‌ನಲ್ಲಿ ಸೀಟಿಗಾಗಿ ಜಗಳ: ಮಹಿಳೆ ಮೇಲೆ ಕಂಡಕ್ಟರ್ ಹಲ್ಲೆ, ವಿಡಿಯೋ ನೋಡಿ

2 Min Read

Mouni Roy ಮೌನಿ ರಾಯ್ ಜೊತೆಗಿನ ಅಫೇರ್ ಗಾಸಿಪ್‌ಗೆ ಅರ್ಜುನ್ ಬಿಜ್ಲಾನಿ ಬ್ರೇಕ್

2 Min Read

Jennifer Winget ಎರಡನೇ ಮದುವೆಯಾದ ಸ್ಟಾರ್ ನಟಿ ಜೆನ್ನಿಫರ್ ವಿಂಗೆಟ್

1 Min Read

You Might Also Like

ಪ್ರಮುಖಮನರಂಜನೆ

Toxic Movie ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

1 Min Read
ಪ್ರಮುಖಕರ್ನಾಟಕಮನರಂಜನೆ

Kwatle Kichen ಗಿಲ್ಲಿ ನಟನ ಜೊತೆ ಫೋಟೋ ಶೇರ್ ಮಾಡಿ ‘ಜೀವ ಒಂದೇ’ ಎಂದ ರಕ್ಷಿತಾ ಶೆಟ್ಟಿ

1 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪ್ರಮುಖದೇಶವಿದೇಶ

FIFA World Cup 2026 ಫಿಫಾ ವಿಶ್ವಕಪ್ ಫೈನಲ್; ಜುಲೈ 20 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಸರ್ಕಾರ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?