Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಶಿವಮೊಗ್ಗ: ಪದವಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ.
ಮನೆ ಬಳಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.
ಈ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಸಮೀಪದ ದಬ್ಬಣಗದ್ದೆ ಸಮೀಪದ ಬಚ್ಚನಕೋಡಿಗೆಯಲ್ಲಿ ನಡೆದಿದೆ
ಪ್ರಾಪ್ತಿ (21) ಮೃತ ವಿದ್ಯಾರ್ಥಿನಿ. ರಮೇಶ್ ಆಚಾರ ಎಂಬುವರ ಪುತ್ರಿ. ಬಾಳೆಬೈಲಿನ ಪದವಿ ಕಾಲೇಜಿನಲ್ಲಿ ತೃತೀಯ ವರ್ಷದ ಬಿಬಿಎ ಪದವಿ ಓದುತ್ತಿದ್ದ ಪ್ರಾಪ್ತಿ, ಬೆಳಗಿನ ಜಾವ ನೇಣುಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡು ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಶೈಕ್ಷಣಿಕ ಒತ್ತಡದಿಂದ ನೇಣುಬಿಗಿದುಕೊಂಡಳಾ ಅಥವಾ ಇನ್ಯಾವುದೋ ಕಾರಣಕ್ಕೆ ಸಾವಾಯಿತಾ ಎಂದು ಪೋಷಕರು ಚಿಂತೆಗೊಳಗಾಗಿದ್ದಾರೆ. ಪ್ರಾಪ್ತಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಮಾಳೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
https://www.newsics.com/2025/11/15/shirts-kurtas-and-sanitary-pads-made-from-arecanut-shells/