Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಚಳಿಗಾಲದಲ್ಲೇಕೆ ಖರ್ಜೂರವನ್ನು ಹೆಚ್ಚೆಚ್ಚು ಸೇವನೆ ಮಾಡಬೇಕು? ಇಲ್ಲಿದೆ ಮಹತ್ವದ ಕಾರಣ
ಲೈಫ್‌ಸ್ಟೈಲ್

ಚಳಿಗಾಲದಲ್ಲೇಕೆ ಖರ್ಜೂರವನ್ನು ಹೆಚ್ಚೆಚ್ಚು ಸೇವನೆ ಮಾಡಬೇಕು? ಇಲ್ಲಿದೆ ಮಹತ್ವದ ಕಾರಣ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಖರ್ಜೂರ ಗಳನ್ನು ದಿನನಿತ್ಯ ಸೇವನೆ ಮಾಡುವ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಕ್ಯಾಲೋರಿ, ಕಾರ್ಬೋಹೈಡ್ರೇಟ್‌, ಫೈಬರ್, ಪ್ರೋಟೀನ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ತಾಮ್ರ, ಮ್ಯಾಂಗನೀಸ್, ಕಬ್ಬಿಣ, ವಿಟಮಿನ್ ಬಿ6 ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆದುಕೊಳ್ಳಬಹುದು.
ಮಾತ್ರವಲ್ಲ, ಡಾ. ಮೇಧಾವಿ ಗೌತಮ್ ಅವರು ಹೇಳುವ ಪ್ರಕಾರ, ಚಳಿಗಾಲದಲ್ಲಿ ಖರ್ಜೂರವನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಬೇರೆ ಸಮಯದಲ್ಲಿ ವಾರಕ್ಕೆ ಒಂದು, ಎರಡು ಸೇವನೆ ಮಾಡುತ್ತಿದ್ದರೆ ಚಳಿಗಾಲದಲ್ಲಿ ದಿನಕ್ಕೆ ಒಂದಾದರೂ ತಿನ್ನಬೇಕು ಇದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ.

ಚಳಿಗಾಲದಲ್ಲಿ ಏಕೆ ಹೆಚ್ಚಾಗಿ ಸೇವನೆ ಮಾಡಬೇಕು?
ಡಾ. ಮೇಧಾವಿ ಗೌತಮ್ ಹೇಳುವ ಪ್ರಕಾರ, ಚಳಿಗಾಲದಲ್ಲಿ ಖರ್ಜೂರ ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಕನಿಷ್ಠ ಪಕ್ಷ ನೀವು ವಾರದಲ್ಲಿ ಎರಡರಿಂದ ಮೂರು ಬಾರಿಯಾದರೂ ಖರ್ಜೂರವನ್ನು ಸೇವನೆ ಮಾಡಬೇಕು. ಇದು ಕೆಮ್ಮು ಮತ್ತು ಶೀತಗಳು ಬರದಂತೆ ತಡೆಯುತ್ತದೆ ಮತ್ತು ದೇಹವು ಬೆಚ್ಚಗಿರುವಂತೆ ಮಾಡುತ್ತದೆ. ಹಾಗಾಗಿ ರಾತ್ರಿ ಹಾಲಿನೊಂದಿಗೆ ಇವುಗಳನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅವುಗಳಲ್ಲಿ ಗ್ಲೂಕೋಸ್, ಸುಕ್ರೋಸ್ ಮತ್ತು ಫ್ರಕ್ಟೋಸ್‌ನಂತಹ ನೈಸರ್ಗಿಕ ಸಕ್ಕರೆಗಳಿದ್ದು, ಅವು ದೇಹಕ್ಕೆ ಶಕ್ತಿಯನ್ನು ಒದಗಿಸಲು ಕೂಡ ಸಹಾಯ ಮಾಡುತ್ತವೆ. ಮಾತ್ರವಲ್ಲ ರಾತ್ರಿ ಬಿಸಿ ಹಾಲಿನಲ್ಲಿ ಕುದಿಸಿದ ಖರ್ಜೂರ ತಿನ್ನುವುದು ಕೂಡ ಬಹಳ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸಾಧ್ಯವಾದಲ್ಲಿ ನೀವು ಹಗಲಿನಲ್ಲಿ 2 ರಿಂದ 3 ಖರ್ಜೂರ ತಿನ್ನಬಹುದು. ಅವು ನೈಸರ್ಗಿಕವಾಗಿ ಸಕ್ಕರೆಯನ್ನು ಹೊಂದಿರುವುದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.
ಸ್ನಾಯು ನೋವಿನಿಂದ ಮುಕ್ತಿ ಪಡೆಯಬಹುದು
ಖರ್ಜೂರದಲ್ಲಿ ಉತ್ತಮ ಪ್ರಮಾಣದ ಮೆಗ್ನೀಸಿಯಮ್ ಇದ್ದು ಸ್ನಾಯು ನೋವಿನಿಂದ ಪರಿಹಾರ ನೀಡುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಅಲ್ಲಲ್ಲಿ ನೋವುಗಳು ಕಂಡುಬರುವ ಪ್ರಮಾಣ ಹೆಚ್ಚಾಗಿರುವುದರಿಂದ, ಇದರಿಂದ ಪರಿಹಾರ ಪಡೆಯಲು ಖರ್ಜೂರ ಬಹಳ ಒಳ್ಳೆಯ ಆಯ್ಕೆ. ಇವುಗಳಲ್ಲಿರುವ ವಿಟಮಿನ್ ಎ ಅಂಶ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಹಕಾರಿಯಾಗಿದೆ. ನಿಮಗೆ ಖರ್ಜೂರವನ್ನು ಹಾಗೆ ತಿನ್ನಲು ಇಷ್ಟವಾಗದಿದ್ದಲ್ಲಿ ಹಾಲಿನಲ್ಲಿ ಕುದಿಸಿ, ಮಿಶ್ರಣ ಮಾಡಿ ಅಥವಾ ಸ್ಮೂಥಿ ಮಾಡಿಯೂ ಸೇವನೆ ಮಾಡಬಹುದು.
ಖರ್ಜೂರ ಯಾರಿಗೆ ಒಳ್ಳೆಯದಲ್ಲ
ಸಾಮಾನ್ಯವಾಗಿ ಖರ್ಜೂರದಲ್ಲಿ ನೈಸರ್ಗಿಕ ಸಕ್ಕರೆ ಅಂಶ ಇರುವುದರಿಂದ ಮಧುಮೇಹ ಇರುವವರು ಇವುಗಳ ಸೇವನೆ ಮಾಡುವುದನ್ನು ತಪ್ಪಿಸಬೇಕು. ಹೆಚ್ಚುವರಿಯಾಗಿ, ಯಾರಿಗಾದರೂ ಈಗಾಗಲೇ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿದ್ದರೆ, ಅವರು ಖರ್ಜೂರ ಸೇವನೆ ಮಾಡುವ ಮೊದಲು ಆರೋಗ್ಯ ತಜ್ಞರನ್ನು ಸಂಪರ್ಕಿಸಬೇಕು. ಮಾತ್ರವಲ್ಲ ದಿನಕ್ಕೆ 4 ಕ್ಕಿಂತ ಹೆಚ್ಚು ಖರ್ಜೂರ ತಿನ್ನುವುದು ಒಳ್ಳೆಯದಲ್ಲ. ಯಾಕೆಂದರೆ ಇವುಗಳಲ್ಲಿ ಬಹಳಷ್ಟು ನೈಸರ್ಗಿಕ ಸಕ್ಕರೆ ಅಂಶ ಇರುವುದರಿಂದ ಮಿತ ಪ್ರಮಾಣದಲ್ಲಿ ಸೇವಿಸುವುದು ಬಹಳ ಒಳ್ಳೆಯದು. ಇದಲ್ಲದೆ, ಅತಿಯಾದ ಸೇವನೆಯು ವಾಂತಿ ಅಥವಾ ಅತಿಸಾರಕ್ಕೆ ಕಾರಣವಾಗಬಹುದು. ಆದ್ದರಿಂದ, ಇವುಗಳನ್ನು ಮಿತವಾಗಿ ಸೇವನೆ ಮಾಡಿ.

ಐರನ್ ಬಾಕ್ಸ್ ಅವಶ್ಯಕತೆ ಇಲ್ಲ, ಈ ಟ್ರಿಕ್ಸ್ ಬಳಸಿದರೆ ಸಾಕು ಬಟ್ಟೆಯ ಸುಕ್ಕುಗಳು ಮಾಯ

TAGGED:Why should we consume more dates in winter? Here is an important reason behind this
Share This Article
Facebook Twitter Copy Link Print
Previous Article ಐರನ್ ಬಾಕ್ಸ್ ಅವಶ್ಯಕತೆ ಇಲ್ಲ, ಈ ಟ್ರಿಕ್ಸ್ ಬಳಸಿದರೆ ಸಾಕು ಬಟ್ಟೆಯ ಸುಕ್ಕುಗಳು ಮಾಯ
Next Article 5 ದಶಕಗಳ ಸುದೀರ್ಘ ಸಿನಿ ಜೀವನಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್ ವಿದಾಯ?

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?