Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಸುದೀರ್ಘ 50 ವರ್ಷಗಳ ಸಿನಿ ಜಗತ್ತಿನ ಬದುಕಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆನ್ನಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಮೂಲಗಳ ಪ್ರಕಾರ, ನಟ ಕಮಲ್ ಹಾಸನ್ ಅವರ ಜತೆಗಿನ ಬಹುನಿರೀಕ್ಷಿತ ಸಿನಿಮಾ ಚಿತ್ರೀಕರಣ ಪೂರ್ಣಗೊಂಡ ನಂತರ ನಿರ್ದೇಶಕ ಸುಂದರ ಸಿ ಅವರ ಹೆಸರಿಡದ ಹಾಸ್ಯ ಚಿತ್ರದಲ್ಲಿನ ನಟನೆಯ ನಂತರ ರಜನಿಕಾಂತ್ ಅವರು ನಿವೃತ್ತಿಯಾಗಲಿದ್ದಾರೆ ಎಂದು ತಿಳಿಸಿದೆ.
ಈ ಸುದ್ದಿ ಕಾಲಿವುಡ್ ಗೆ ಅಚ್ಚರಿ ಮೂಡಿಸಿದರೂ ಕೂಡಾ, ಚಿತ್ರರಂಗದ ಹಲವರು ತಲೈವರ್ ಅವರು ಚಿತ್ರರಂಗದಿಂದ ದೂರ ಸರಿಯುವ ಸಾಧ್ಯತೆಯನ್ನು ಅಲ್ಲಗಳೆದಿಲ್ಲ. ನಟ ರಜನಿಕಾಂತ್ ಅವರ ಆಪ್ತವಲಯದ ಪ್ರಕಾರ, ವಯಸ್ಸು ಹಾಗೂ ದೈಹಿಕ ಶ್ರಮ ಹಾಕುವ ಪಾತ್ರಗಳನ್ನು ನಿರ್ವಹಿಸಲು ಕಷ್ಟವಾಗುತ್ತಿರುವುದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ.
ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳ ಚಿತ್ರೀಕರಣ ಪೂರ್ಣಗೊಂಡ ನಂತರ ಗೌರವಯುತವಾಗಿ ನಟನೆಗೆ ವಿದಾಯ ಹೇಳಲು ನಟ ರಜನಿಕಾಂತ್ ಅವರು ತಮ್ಮ ಕುಟುಂಬ ಸದಸ್ಯರು ಹಾಗೂ ಆಪ್ತ ವಲಯದಲ್ಲಿ ಸುದೀರ್ಘವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಇತ್ತೀಚೆಗೆ ಅತೀ ಹೆಚ್ಚು ಆಕ್ಷನ್ ಸಿನಿಮಾಗಳಲ್ಲಿ ನಟಿಸಬೇಕೆಂಬ ಬೇಡಿಕೆ ಹೆಚ್ಚುತ್ತಿದ್ದು, ಇದು ತುಂಬಾ ಸವಾಲಿನ ಕೆಲಸವಾಗಿದೆ. ಅಲ್ಲದೇ ಕೂಲಿ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ರಜಿನಿಕಾಂತ್ ಅವರು ಗಾಯಗೊಂಡಿರುವ ಘಟನೆ ನಡೆದಿತ್ತು.
ಸುದೀರ್ಘ ಐದು ದಶಕಗಳ ಕಾಲ ಸಿನಿಮಾರಂಗದಲ್ಲಿದ್ದ ನಂತರ ಈಗ ಸೂಕ್ತ ಸಮಯದಲ್ಲಿ ನಟನೆಗೆ ವಿದಾಯ ಹೇಳುವ ನಿರ್ಧಾರ ಕೈಗೊಂಡಿದ್ದು, ಅವರ ಆರೋಗ್ಯ ಮತ್ತು ಆಧ್ಯಾತ್ಮಿಕ ಜೀವನದತ್ತ ಗಮನಹರಿಸಲು ಸಹಾಯವಾಗುತ್ತದೆ ಎಂಬುದು ಕುಟುಂಬ ಸದಸ್ಯರ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ರಜನಿಕಾಂತ್ ಆಪ್ತವಲಯ ತಿಳಿಸಿದೆ ಎಂದು ವರದಿ ವಿವರಿಸಿದೆ.
ಚಳಿಗಾಲದಲ್ಲೇಕೆ ಖರ್ಜೂರವನ್ನು ಹೆಚ್ಚೆಚ್ಚು ಸೇವನೆ ಮಾಡಬೇಕು? ಇಲ್ಕಿದೆ ಮಹತ್ವದ ಕಾರಣ