Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಅಪರಾಧ ನಡೆದ 6 ತಿಂಗಳ ನಂತರ ಮಾರತ್ ಹಳ್ಳಿ ಪೊಲೀಸರು ಕೊಲೆ ಪ್ರಕರಣಕ್ಕೆ ನಾಂದಿ ಹಾಡುವಲ್ಲಿ ಯಶಸ್ವಿಯಾಗಿದ್ದಾರೆ. ಯಶಸ್ವಿ ಪೊಲೀಸ್ ಕಾರ್ಯಾಚರಣೆಗಳಿಂದಾಗಿ 6 ತಿಂಗಳ ನಂತರ ಸಾವಿನ ರಹಸ್ಯೆ ಹೇಗೆ ಹೊರಬಂತು ಎಂಬುದೇ ರೋಚಕ ಕಹಾನಿ.
ವೈದ್ಯೆ ಪತ್ನಿ ಕೊಂದು ಡ್ರಾಮಾ ಮಾಡಿದ್ದ ಡಾಕ್ಟರ್ ಗಂಡನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಡಾ. ಕೃತಿಕಾ ರೆಡ್ಡಿ ಕೊಲೆಯಾದ ದುರ್ದೈವಿ. ಆರೋಪಿ ಡಾ. ಮಹೇಂದ್ರ ರೆಡ್ಡಿ ಕೊಲೆ ಮಾಡಿದ ಪಾಪಿ ಗಂಡ.
ಪತ್ನಿಯನ್ನು ಕೊಲೆ ಮಾಡಿದ ಬಳಿಕ ಮಾವ ಕೆ.ಮುನಿರೆಡ್ಡಿ ಅವರ ಮನೆಗೆ ಬಂದಿದ್ದ ಆರೋಪಿ, ಪತ್ನಿಯ ನೆನಪು ಕಾಡುತ್ತಿದೆ ಎಂದು ಹೇಳಿ ಮದುವೆಯ ಸಂದರ್ಭದಲ್ಲಿ ನೀಡಿದ್ದ ಆಭರಣಗಳನ್ನು ಕೊಂಡೊಯ್ದಿದ್ದರು. ಪತ್ನಿಯ ನೆನಪಿಗೆ ಆಭರಣಗಳನ್ನು ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದರು. ಆರೋಪಿಯ ಮಾತು ನಂಬಿದ್ದ ಕೃತಿಕಾ ಕುಟುಂಬಸ್ಥರು ಆಕೆಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನೂ ನೀಡಿದ್ದರು’ ಎಂದು ಪೊಲೀಸರು ಹೇಳಿದರು.
ಆರೋಪಿಗೆ ಯುವತಿಯೊಬ್ಬಳ ಜತೆಗೆ ಸಂಪರ್ಕವಿತ್ತು. ಯಾವುದೋ ಹುಡುಗಿಯ ಜತೆಗೆ ಹೆಚ್ಚಿನ ಸಮಯ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಕೃತಿಕಾ ರೆಡ್ಡಿ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ಮಾಡುತ್ತಿದ್ದರು’ ಎಂದು ಮುನಿರೆಡ್ಡಿ ಆರೋಪಿಸಿದ್ದಾರೆ.
ಕೃತಿಕಾ ಮೃತಪಟ್ಟ ದಿನವೇ ಅನುಮಾನ ಬಂದಿತ್ತು. ಅಕ್ಕನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂಬುದಾಗಿ ನಾವು ಒತ್ತಾಯಿಸಿದ್ದೆವು. ಆದರೆ, ಮಹೇಂದ್ರ ರೆಡ್ಡಿ ಅವರು ನಾಟಕ ಮಾಡಿ ಮರಣೋತ್ತರ ಪರೀಕ್ಷೆ ಬೇಡ ಎನ್ನುತ್ತಿದ್ದರು. ಆದರೂ ನಮಗೆ ಅನುಮಾನ ಬಂದು ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಿಸಿದ್ದೆವು ಎಂದು ಕೊಲೆಯಾದ ಕೃತಿಕಾ ಸಹೋದರಿ ನಿಕಿತಾ ಅವರು ತಿಳಿಸಿದ್ದಾರೆ.