Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಬೆಂಗಳೂರು : ಕನ್ನಡದಲ್ಲಿ ಈವರೆಗೂ ಬಿಗ್ ಬಾಸ್ 11 ಸೀಸನ್ಗಳು ಮುಗಿದಿವೆ. ಈಗ 12ನೇ ಸೀಸನ್ ನಡೆಯುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಮೂರನೇ ವಾರದಲ್ಲಿ ಒಂದು ಫಿನಾಲೆ ಇರುತ್ತದೆ ಎಂದು ಮೊದಲೇ ತಿಳಿಸಲಾಗಿತ್ತು. ಫಿನಾಲೆಗೂ ಮುನ್ನ ಮಿಡ್ ಮೀಕ್ ಎಲಿಮಿನೇಷನ್ ನಡೆದಿದೆ. ಡಾಗ್ ಸತೀಶ್ (Dog Satish) ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ..
ಕಳೆದ ವಾರ ಎಲಿಮಿನೇಷನ್ ಇಲ್ಲದ ಕಾರಣ ಸ್ಪರ್ಧಿಗಳು ರಿಲೀಫ್ ಆಗಿದ್ದರು. ಆದರೆ ನಿನ್ನೆ ರಾತ್ರಿ ಬಿಗ್ ಬಾಸ್ ಧಿಡೀರ್ ಆಗಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಿದೆ.
ಬಿಗ್ ಬಾಸ್ ಸ್ಪರ್ಧಿಗಳೆಲ್ಲರನ್ನ ಕರೆದು ನಿಮ್ಮಲ್ಲಿ ಯಾರು ಮನೆಯಿಂದ ಹೊರಗೆ ಹೋಗಬೇಕು ಎಂದು ಕೇಳಿದರು. ಆಗ ಹಲವರು ಡಾಗ್ ಸತೀಶ್ ಅವರ ಹೆಸರು ಸೂಚಿಸಿದರು. ಆದ್ದರಿಂದ ಮೂರನೇ ವಾರಕ್ಕೆ ಸತೀಶ್ ಬಿಗ್ ಬಾಸ್ಮ ನೆಯಿಂದ ಎಲಿಮಿನೇಟ್ ಆದರು.