Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಶಬರಿಮಲೆ: ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನದಿಂದ ಕಣ್ಮರೆಯಾಗಿದ್ದ ಚಿನ್ನ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೇವಸ್ಥಾನದ ವಿಗ್ರಹದಿಂದ 4 ಕೆಜಿ ತೂಕದ ಕೋಟಿಗಟ್ಟಲೆ ಬೆಲೆ ಬಾಳುವ ಚಿನ್ನ ನಿಗೂಢವಾಗಿ ಕಣ್ಮರೆಯಾಗಿತ್ತು.
ಪೀಠ ಕಾಣೆಯಾಗಿದೆ ಎಂದು ದೂರು ನೀಡಿದ್ದ ಪ್ರಾಯೋಜಕ ಉನ್ನಿಕೃಷ್ಣನ್ ಪೊಟ್ಟಿ ಸಂಬಂಧಿ ಮನೆಯಿಂದ ದೇವರಸ್ವಂ ವಿಜಿಲೆನ್ಸ್ ಪೀಠವನ್ನು ವಶಕ್ಕೆ ಪಡೆದುಕೊಂಡಿದ್ದು, ದೂರು ನೀಡಿದ್ದ ಉನ್ನಿಕೃಷ್ಣನ್ ಪೊಟ್ಟಿ ಮೇಲೆಯೇ ಅನುಮಾನ ವ್ಯಕ್ತವಾಗಿದೆ.
ಟಿಡಿಬಿ ಜಾಗೃತ ಮತ್ತು ಭದ್ರತಾ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ವಿ ನೇತೃತ್ವದ ತಂಡವು ಶನಿವಾರ ವೆಂಜಾರಮೂಡಿನಲ್ಲಿರುವ ಪ್ರಾಯೋಜಕ ಉನ್ನಿಕೃಷ್ಣನ್ ಪೊಟ್ಟಿ ಅವರ ಸಂಬಂಧಿಕರ ಮನೆಯಲ್ಲಿ ಪೀಠವನ್ನು ಪತ್ತೆಹಚ್ಚಿದೆ.
2019ರಲ್ಲಿ ದೇವಸ್ಥಾನಕ್ಕೆ ಚಿನ್ನವನ್ನು ನೀಡಿದ್ದ ಪ್ರಾಯೋಜಕರ ಸಂಬಂಧಿಕರೊಬ್ಬರ ಮನೆಯಲ್ಲಿ ಈ ಚಿನ್ನ ಪತ್ತೆಯಾಗಿದೆ. ತಿರುವನಂತಪುರಂನ ಉಪನಗರದಲ್ಲಿರುವ ವೆಂಜರಮೂಡು ಎಂಬಲ್ಲಿ ಸಿಕ್ಕಿದೆ. ಟಿಡಿಬಿ ವಿಜಿಲೆನ್ಸ್ ಮತ್ತು ಭದ್ರತಾ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ವಿ ನೇತೃತ್ವದ ತಂಡವು ಶನಿವಾರ ಬೆಂಗಳೂರಿನ ಮಲಯಾಳಿ ಉನ್ನಿಕೃಷ್ಣನ್ ಪೊಟ್ಟಿ ಅವರ ವೆಂಜರಮೂಡಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ಇದನ್ನು ಪತ್ತೆಹಚ್ಚಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯವು ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿತ್ತು. ಶಬರಿಮಲೆ ವಿಜಿಲೆನ್ಸ್ ತಂಡ ಅರನ್ಮುಳದಲ್ಲಿರುವ ಟಿಡಿಬಿ (TDB) ಸ್ಟ್ರಾಂಗ್‌ರೂಮ್ ಅನ್ನು ಪರಿಶೀಲಿಸಿತ್ತು. ಆದರೆ ಪೀಠವನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.ಅದಾದ ಮೇಲೆ ಇತ್ತೀಚೆಗೆ ದ್ವಾರಪಾಲಕರ ಚಿನ್ನದ ಲೇಪನದ ತಾಮ್ರದ ಫಲಕಗಳ ತೂಕದಲ್ಲಿ ಇಳಿಕೆಯಾಗಿರುವುದನ್ನು ಗಮನಿಸಿದ ಕೇರಳ ಹೈಕೋರ್ಟ್ ಪೀಠವು ತನಿಖೆಗೆ ಆದೇಶಿಸಿದಾಗ ಈ ವಿಷಯ ಮತ್ತೆ ಮುನ್ನಲೆಗೆ ಬಂದಿದೆ.