Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Gas Cylinder ನಿಮ್ಮ ಮನೆಯಲ್ಲಿ ಗ್ಯಾಸ್‌ ಸಿಲಿಂಡರ್ ಬೇಗ ಖಾಲಿ ಆಗ್ತಿದ್ಯಾ? ಈ ಟ್ರಿಕ್ ಮೂಲಕ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಿ
ಲೈಫ್‌ಸ್ಟೈಲ್

Gas Cylinder ನಿಮ್ಮ ಮನೆಯಲ್ಲಿ ಗ್ಯಾಸ್‌ ಸಿಲಿಂಡರ್ ಬೇಗ ಖಾಲಿ ಆಗ್ತಿದ್ಯಾ? ಈ ಟ್ರಿಕ್ ಮೂಲಕ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಿ

Share
2 Min Read
SHARE

Newsics_Kannada 

 Subscribe and watch video

 ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics.com

ಗ್ಯಾಸ್ ಸಿಲಿಂಡರ್ ಅನ್ನು ಇಂದಿನ ದಿನಗಳಲ್ಲಿ ಎಲ್ಲರೂ ಬಳಸುತ್ತಾರೆ. ಪ್ರತಿಯೊಬ್ಬರ ಬಳಿಯೂ ಅಡುಗೆ ಅನಿಲ ಸಿಲಿಂಡರ್ ಇದ್ದೇ ಇರುತ್ತದೆ. ಕೇಂದ್ರ ಸರ್ಕಾರ ಉಜ್ವಲ ಯೋಜನೆ ಜಾರಿಗೆ ತಂದ ನಂತರ ಸೌದೆ ಒಲೆಯಲ್ಲಿ ಅಡುಗೆ ಕಾಲ ಮರೆಯಾಗಿದ್ದು, ಗ್ಯಾಸ್ ಅನ್ನೇ ಬಳಸುತ್ತಿದ್ದಾರೆ. ಆದರೆ ಗ್ಯಾಸ್ ಸಿಲಿಂಡರ್ ಬೇಗನೇ ಖಾಲಿಯಾಗುವ ಸಮಸ್ಯೆ ಹೆಚ್ಚಿನವರು ಎದುರಿಸುತ್ತಿದ್ದಾರೆ. ನಿಮಗು ಕೂಡ ಇದೇ ಸಮಸ್ಯೆ ಆಗುತ್ತಿದ್ದರೆ ಕೆಲವು ತಂತ್ರಗಳನ್ನು ಅನುಸರಿಸಿ ಅನಿಲವನ್ನು ಹೆಚ್ಚು ಕಾಲ ಉಳಿಯುವಂತೆ ಮಾಡಬಹುದು. ಅದು ಹೇಗೆ?, ನೋಡೋಣ.

 

ಸ್ಟವ್ ಬರ್ನರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು: ನಿಮ್ಮ ಸ್ಟವ್ ಬರ್ನರ್ ಅನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಸಹ ಮುಖ್ಯವಾಗಿದೆ. ಕಾಲಕಾಲಕ್ಕೆ ಬರ್ನರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಗ್ಯಾಸ್ ಹೆಚ್ಚು ಕಾಲ ಉಳಿಯುವಂತೆ ಮಾಡಬಹುದು. ಇದಕ್ಕಾಗಿ ನಿಮ್ಮ ಅನಿಲದ ಬೆಂಕಿಯ ಬಣ್ಣವನ್ನು ಗಮನಿಸುವುದರ ಮೂಲಕ ತಿಳಿಯಬಹುದು. ಅನಿಲ ಜ್ವಾಲೆಯು ನೀಲಿ ಬಣ್ಣಕ್ಕೆ ತಿರುಗಿದರೆ ನಿಮ್ಮ ಬರ್ನರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲದಿದ್ದರೆ ಕೆಂಪು/ಹಳದಿ/ಕಿತ್ತಳೆ ಬಣ್ಣ ಬಂದರೆ ನಿಮ್ಮ ಬರ್ನರ್ ಸ್ವಚ್ಛವಾಗಿಲ್ಲ ಎಂದರ್ಥ.

ಪಾತ್ರೆ ಒದ್ದೆಯಾಗಿರಬಾರದು: ಅಡುಗೆ ಮಾಡಲು ಪಾತ್ರೆಯನ್ನು ಬರ್ನರ್‌ನಲ್ಲಿ ಇರಿಸುವಾಗ ಒಣಗಿರಬೇಕು. ಅದರಲ್ಲಿ ನೀರಿನ ಅಂಶ ಇದ್ದರೆ ಆವಿಯಾಗಲು ಸಮಯ ತೆಗೆದುಕೊಳ್ಳಬಹುದು. ಇದು ಅನಿಲವನ್ನು ವ್ಯರ್ಥ ಮಾಡುತ್ತದೆ. ಸಂದರ್ಭಕ್ಕೆ ತಕ್ಕಂತೆ ನೀವು ಬೆಂಕಿಯನ್ನು ಕಡಿಮೆ ಮಾಡಬಹುದು. ಹೆಚ್ಚಿನ ಬೆಂಕಿ ಹೆಚ್ಚು ಅನಿಲವನ್ನು ಬಳಸುತ್ತದೆ.

ಗ್ಯಾಸ್ ಲೀಕ್: ಸಾಮಾನ್ಯವಾಗಿ ಕೆಲವು ಸಿಲಿಂಡರ್ನಲ್ಲಿ ಸಣ್ಣ ಪ್ರಮಾಣದ ಗ್ಯಾಸ್ ಲೀಕ್ ಆಗಿರುತ್ತದೆ. ಗ್ಯಾಸ್ ರೆಗ್ಯುಲೇಟರ್, ಪೈಪ್, ಬರ್ನರ್ ಪರಿಶೀಲಿಸಬೇಕು. ಹಾನಿಗೊಳಗಾದ ಗ್ಯಾಸ್ ಲೈನ್ ನೀವು ಅಡುಗೆ ಮಾಡದಿದ್ದರೂ ಸಹ ಅನಿಲವನ್ನು ವ್ಯರ್ಥ ಮಾಡಬಹುದು. ಇದು ಅಪಘಾತಗಳಿಗೂ ಕಾರಣವಾಗಬಹುದು.

ನೆನೆಸುವುದು: ಅಕ್ಕಿ ಮತ್ತು ಬೇಳೆಕಾಳುಗಳನ್ನು ಬೇಯಿಸುವ ಮೊದಲು ನೆನೆಸಿಡಬೇಕು. ಹಾಗೆ ನೆನೆಸಿಟ್ಟು ಬೇಯಿಸಿದರೆ ಬೇಗ ಬೇಯುತ್ತದೆ. ಇದು ಸಿಲಿಂಡರ್ ಅನ್ನು ಉಳಿಸುತ್ತದೆ.

 

ಪ್ರೆಷರ್ ಕುಕ್ಕರ್ ಬಳಕೆ: ಪ್ರೆಷರ್ ಕುಕ್ಕರ್ ನಿಮಗೆ ಆಹಾರವನ್ನು ವೇಗವಾಗಿ ಮತ್ತು ಕಡಿಮೆ ಅನಿಲದಿಂದ ಬೇಯಿಸಲು ಸಹಾಯ ಮಾಡುತ್ತದೆ. ಏಕೆಂದರೆ, ಇದು ಹೆಚ್ಚಿನ ಒತ್ತಡದಲ್ಲಿ ಆಹಾರ ಬೇಯಿಸಲು ಉಗಿಯನ್ನು ಬಳಸುತ್ತದೆ. ಇದರರ್ಥ ನೀವು ಕಡಿಮೆ ಸಮಯದಲ್ಲಿ ಆಹಾರವನ್ನು ಬೇಯಿಸಬಹುದು. ಇದು ಅನಿಲವನ್ನೂ ಸಹ ಉಳಿಸಬಹುದು.

 

ತಣ್ಣಗಾದ ನಂತರ ಬಳಸಿ:ಹಾಲಿನಿಂದ ಹಿಡಿದು ಇತರ ಆಹಾರ ಪದಾರ್ಥಗಳನ್ನು ಫ್ರಿಡ್ಜ್​​ನಲ್ಲಿ ಇಡುವುದು ಸಾಮಾನ್ಯ. ಫ್ರಿಡ್ಜ್​​ನಲ್ಲಿದ್ದ ಪದಾರ್ಥಗಳನ್ನು ತಕ್ಷಣ ಗ್ಯಾಸ್ ಸ್ಟೌವ್‌ನ ಮೇಲಿಡುವ ಮೊದಲು, ಅವುಗಳನ್ನು ತೆಗೆದುಕೊಂಡು ಸ್ವಲ್ಪ ಕಾಲ ಕೋಣೆಯಲ್ಲಿರಿಸಿ. ತಂಪಾಗಿರುವಾಗ ಬಳಸಿದರೆ ಬೆಚ್ಚಗಾಗಲು ಹೆಚ್ಚು ಸಮಯ ಹಿಡಿಯುತ್ತದೆ. ಇದೂ ಕೂಡ ಗ್ಯಾಸ್ ನಷ್ಟಕ್ಕೆ ಕಾರಣವಾಗುತ್ತದೆ.

ಪಾತ್ರೆ ಬಳಸಿ: ನೀವು ಬಳಸುವ ಪ್ಯಾನ್ (ಪಾತ್ರೆ) ಕೂಡ ಗ್ಯಾಸ್ ಉಳಿಸುತ್ತದೆ. ನೀವು ಫ್ಲಾಟ್ ಪ್ಯಾನ್ ಬಳಸುತ್ತಿದ್ದರೆ ಅನಿಲ ಸಮವಾಗಿ ಹರಡುತ್ತದೆ. ಶಾಖ ಪೂರ್ತಿ ಹರಡುತ್ತದೆ. ಅಡುಗೆ ಬೇಗ ಮುಗಿಯುತ್ತದೆ. ಪಾತ್ರೆ ರಂಧ್ರ (ಆಳ) ಹೊಂದಿದ್ದರೆ, ಮಧ್ಯದಲ್ಲಿ ಮಾತ್ರ ಬೇಗನೆ ಬಿಸಿಯಾಗುತ್ತದೆ. ಶಾಖ ತಲುಪಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಫ್ಲಾಟ್ ಪ್ಯಾನ್ ಬಳಸಿದರೆ ಗ್ಯಾಸ್​ ಉಳಿಸಬಹುದು

 

TAGGED:#Gas #Cylinder #kitchen #quickly #tips
Share This Article
Facebook Twitter Copy Link Print
Previous Article BMTC ಗೆ 4500 ಹೊಸ ಬಸ್ ಒದಗಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್!
Next Article ಶಬರಿಮಲೆ ವಿಗ್ರಹದಿಂದ ನಾಪತ್ತೆಯಾಗಿದ್ದ 4 ಕೆಜಿ ಚಿನ್ನ ಪತ್ತೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?