newsics.com
ಬೀದರ್: ಬೇಡ ಎಂದು ಸ್ಥಳೀಯರು ಎಷ್ಟೇ ತಿಳಿಹೇಳಿದರೂ ಮೊಂಡುತನ ಪ್ರದರ್ಶಿಸಿ ಉಕ್ಕಿ ಹರಿಯುತ್ತಿದ್ದ ನೀರಿನ ಪ್ರವಾಹದಲ್ಲೇ ಸೇತುವೆ ದಾಟುವ ಹುಚ್ಚಾಟಕ್ಕಿಳಿದ ವ್ಯಕ್ತಿಯೊಬ್ಬ ನೀರುಪಾಲಾಗಿದ್ದಾನೆ.
ತಾಲೂಕಿನ ಬರೂರ್ ಗ್ರಾಮದ ಹತ್ತಿರ ನಡೆದಿದೆ. ಬರೂರ್ ಗ್ರಾಮದ ಪ್ರಭಾಕರ ರೆಡ್ಡಿ(62) ನೀರುಪಾಲಾದ ವ್ಯಕ್ತಿ.
ಭಾರೀ ಮಳೆಯಿಂದಾಗಿ ಗ್ರಾಮದ ಹೊರವಲಯದ ಸೇತುವೆ ತುಂಬಿ ಹರಿಯುತ್ತಿದೆ. ಇದನ್ನು ದಾಟಿ ಪಕ್ಕದ ರಾಜೋಳಾ ಗ್ರಾಮಕ್ಕೆ ಹೋಗಲು ಯತ್ನಿಸಿ ಪ್ರಾಣ ಕಳೆದುಕೊಂಡಿದ್ದಾನೆ.
ಸೇತುವೆ ಮೇಲೆ ನೀರಿನ ಮಟ್ಟ ಜಾಸ್ತಿಯಿದ್ದು, ರಭಸವೂ ಹೆಚ್ಚಿದೆ. ಸೇತುವೆ ದಾಟಬೇಡಿ ಎಂದು ಅಲ್ಲಿದ್ದ ಸ್ಥಳೀಯರು ಎಷ್ಟೇ ಹೇಳಿದರೂ ರೆಡ್ಡಿ ಕೇಳಲಿಲ್ಲ. ಸ್ವಲ್ಪ ದೂರ ಹೋಗುತ್ತಲೇ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದಾನೆ. ಸ್ಥಳೀಯರು ಇದನ್ನು ವಿಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಗುರುವಾರ ಸಂಜೆ ಈ ಘಟನೆ ನಡೆದಿದೆ. ಮನ್ನಳ್ಳಿ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದ್ದು, ಶನಿವಾರ ಸಂಜೆ ಮೃತದೇಹ ಪತ್ತೆಯಾಗಿದೆ.
Navratri 2025 ನವರಾತ್ರಿ ಸಂಭ್ರಮಕ್ಕೆ ದಿನಗಣನೆ; ದುರ್ಗೆ 9 ಅವತಾರಗಳ ಪರಿಚಯ ಇಲ್ಲಿದೆ