newsics.com
ಸೋಷಿಯಲ್ ಮೀಡಿಯಾ ಭರಾಟೆ ಜೋರಾಗಿದ್ದು, ಟ್ರೆಂಡ್‌ಗಳ ಸೃಷ್ಟಿಯಲ್ಲೂ ಸದ್ದು ಮಾಡುತ್ತಿರುತ್ತದೆ.
ಈಗ ಬಾಡಿಗೆ ಹೆಂಡತಿ ಸೇವೆ ಎಂಬ ಟ್ರೆಂಡ್ ಚಾಲ್ತಿಯಲ್ಲಿದೆ. ಯಾವುದೇ ಗಂಡಸು ಹಣ ಕೊಟ್ಟು ನಿರ್ದಿಷ್ಟ ದಿನಗಳವರೆಗೆ ಮಹಿಳೆಯನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬಹುದು.

ಆ ಮಹಿಳೆ ತನ್ನ ತಾತ್ಕಾಲಿಕ ಗಂಡನಿಗೆ ಅಡುಗೆ ಮಾಡಿ, ಆತನೊಂದಿಗೆ ಹೆಂಡತಿಯಂತೆ ತಿರುಗಾಡಿ, ಕುಟುಂಬದ ವಾತಾವರಣ ಸೃಷ್ಟಿಸುತ್ತಾಳೆ. ಇದೆಲ್ಲವೂ ಒಪ್ಪಂದದಡಿಯಲ್ಲಿ ನಡೆಯುತ್ತದೆ. ಇದು ಕಾನೂನುಬದ್ಧ ಮದುವೆಯಲ್ಲ. ಇಬ್ಬರಿಗೂ ಇಷ್ಟವಾದರೆ ಮದುವೆಯಾಗಬಹುದು.
ಥಾಯ್ ಡೇಬೂ ದಿ ರೈಸ್ ಆಫ್ ವೈಫ್ ರೆಂಟಲ್ ಇನ್ ಮಾಡರ್ನ್ ಸೊಸೈಟಿ ಪುಸ್ತಕ ಈ ವಿಚಿತ್ರ ಬಾಡಿಗೆ ಹೆಂಡತಿಯರ ಬಗ್ಗೆ ಬಯಲು ಮಾಡಿದೆ.
ಲೇಖಕ ಲಾವರ್ಟ್ ಇಮ್ಯಾನುವೆಲ್ ಹೇಳುವಂತೆ, ಬಡ ಕುಟುಂಬದ ಹೆಣ್ಣುಮಕ್ಕಳು ಈ ಕೆಲಸ ಮಾಡುತ್ತಾರೆ. ಹೆಚ್ಚಿನವರು ಹೋಟೆಲ್, ಬಾರ್‌ಗಳಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ವಿದೇಶಿ ಪ್ರವಾಸಿಗರನ್ನು ಭೇಟಿಯಾಗುತ್ತಾರೆ
ಬಾಡಿಗೆ ಹೆಂಡತಿಯ ಬೆಲೆ $1600 ರಿಂದ $1,16,000 ವರೆಗೆ (₹1.4 ಲಕ್ಷ – ₹1 ಕೋಟಿ+) ಇರುತ್ತದೆ. ಇದು ಥೈಲ್ಯಾಂಡ್‌ನಲ್ಲಿ ದೊಡ್ಡ ಉದ್ಯಮವಾಗಿದೆ ಎನ್ನುತ್ತಾರೆ. ಈ ಭಾಗಕ್ಕೆ ಒಂಟಿಯಾಗಿ ತೆರಳಿದ ಪ್ರವಾಸಿಗರನ್ನು ಸಂಪರ್ಕಿಸಿ, ಈ ಸೇವೆಯ ಆಫರ್ ನೀಡಲಾಗುತ್ತದೆ.
ಈ ವಿಚಿತ್ರ ಟ್ರೆಂಡ್ ಹಲವು ಹೆಣ್ಣುಮಕ್ಕಳಿಗೆ ಆರ್ಥಿಕವಾಗಿ ಸಬಲರಾಗಲು ಸಹಾಯ ಮಾಡಿದೆ. ಆದರೆ ಸಮಾಜ, ನೈತಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಥೈಲ್ಯಾಂಡ್ ಸರ್ಕಾರ ಈ ಬೆಳವಣಿಗೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.