newsics.com
ಮಂಗಳೂರು: ದೂರವಾಣಿ ಸಂಪರ್ಕವೂ ಇಲ್ಲದ ಕುಗ್ರಾಮದ ಪ್ರತಿಭೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹೆಮ್ಮೆಯಾಗಿ ಹೊರಹೊಮ್ಮಿದ್ದಾಳೆ.
ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರುಪಣೆ ದಿ.ನಾಗಪ್ಪ ಎಂ ಎ ಹಾಗೂ ಜಾನಕಿ ದಂಪತಿಗಳ ಹಿರಿಯ ಪುತ್ರಿ ಸುಷ್ಮಿತಾ ಇದೀಗ ಎಸ್‌ಎಸ್‌ಸಿಜಿಡಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ತಾಲೂಕಿಗೆ ಹೆಮ್ಮೆ ತಂದಿದ್ದಾಳೆ.
ಈಕೆ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ದೇಶ ಕಾಯುವ ಸೈನಿಕ ವೃತ್ತಿಯ ಕಡೆಗೆ ಆಕರ್ಷಿತಳಾಗಿ ಮುಂದೆ ತನ್ನ ಪೋಷಕರ ಕಷ್ಟಗಳಿಂದ ಪಾರು ಮಾಡಲು ಸತತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಪ್ರಾರಂಭಿಸಿದಳು. ಪೋಲಿಸ್ ಇಲಾಖೆಯ ಎಸೈ , ಕಾನ್ಸ್ಟೇಬಲ್ , ಮಿಲಿಟರಿ , ಅಗ್ನಿಪತ್ , ಅರಣ್ಯ ರಕ್ಷಕ ಹುದ್ದೆ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದಾಕೆ ಇದೀಗ ಅಂತಿಮವಾಗಿ ತನ್ನ ಆಸೆಯಂತೆಯೇ ಎಸ್ ಎಸ್ ಸಿ ಜಿ ಡಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾಳೆ.
ಅರಂತೋಡು ಗ್ರಾಮ ನಗರದಿಂದ ಸರಿ ಸುಮಾರು 12 ಕಿಲೋಮೀಟರ್ ದೂರದ ಕೇವಲ 25 ಕುಟುಂಬ ವಾಸಿಸುವ ಕಾಡಿನ ಮಧ್ಯದಲ್ಲಿನ ಪುಟ್ಟ ಹಳ್ಳಿಯ ಸುಷ್ಮಿತಾ ತನ್ನ ಹಳ್ಳಿಯಲ್ಲಿನ ಕೊರತೆಗಳ ಮಧ್ಯೆ ಸವಾಲುಗಳನ್ನು ಮೆಟ್ಟಿನಿಂತು ಬೆಳೆದ ಪ್ರತಿಭೆ.
ತನ್ನ ವಿದ್ಯಾಭ್ಯಾಸದ ಸಂದರ್ಭದಲ್ಲಿ ತಂದೆ ನಿಧನರಾದ ಬಳಿಕ ಕುಟುಂಬದ ಜವಾಬ್ದಾರಿ ಹೊತ್ತು ಗ್ರಾನೈಟ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತ ಯೂಟ್ಯೂಬ್, ಪುಸ್ತಕ, ಪತ್ರಿಕೆಗಳ ಓದಿನ ಜತೆಗೆ ತನ್ನ ತಂಗಿ ಹಾಗೂ ತಾಯಿಯ ಜತೆಗೆ ವಾಸಿಸುತ್ತಿದ್ದರು. ತಂಗಿ ನಿಶ್ಮಿತಾಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿ ಶುಶ್ರೂಷಕಿಯನ್ನಾಗಿ ಮಾಡುವಲ್ಲಿ ಸಫಲವಾಗಿದ್ದು ಇದೀಗ ತಾನೂ ತನ್ನ ಆಸೆಯನ್ನು ಈಡೇರಿಸಿಕೊಂಡಿದ್ದಾಳೆ.
ಜೀವ ಕಳೆದುಕೊಳ್ಳುವ ನೀಟ್ ವಿದ್ಯಾರ್ಥಿನಿ ಯತ್ನಕ್ಕೆ ಶಿಕ್ಷಕರಿಂದ ತಡೆ, ವೈರಲ್ ವಿಡಿಯೋ ನೋಡಿ
ಪುರುಷರಿಗೆ ನೀಲಿ ಬಣ್ಣ, ಮಹಿಳೆಯರಿಗೆ ಹಸಿರು-ಗುಲಾಬಿ ಬಣ್ಣ ಯಾಕೆ ಇಷ್ಟ?