Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಜೀವ ಕಳೆದುಕೊಳ್ಳುವ ನೀಟ್ ವಿದ್ಯಾರ್ಥಿನಿ ಯತ್ನಕ್ಕೆ ಶಿಕ್ಷಕರಿಂದ ತಡೆ, ವೈರಲ್ ವಿಡಿಯೋ ನೋಡಿ
ದೇಶವೈರಲ್

ಜೀವ ಕಳೆದುಕೊಳ್ಳುವ ನೀಟ್ ವಿದ್ಯಾರ್ಥಿನಿ ಯತ್ನಕ್ಕೆ ಶಿಕ್ಷಕರಿಂದ ತಡೆ, ವೈರಲ್ ವಿಡಿಯೋ ನೋಡಿ

Share
1 Min Read
SHARE

newsics.com

ನಿರೀಕ್ಷಿತ ಸಾಧನೆ ಮಾಡಲಾಗುತ್ತಿಲ್ಲ ಎಂದು ನೊಂದ 19 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ಆತ್ಮ*ಹತ್ಯೆಗೆ ಮುಂದಾಗಿದ್ದು, ಶಿಕ್ಷಕರು ಆಕೆಯನ್ನು ರಕ್ಷಿಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಈ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿ ತಾನು ಕೋಚಿಂಗ್ ಪಡೆಯುತ್ತಿದ್ದ ಮೂರು ಅಂತಸ್ತಿನ ಕೋಚಿಂಗ್ ಸಂಸ್ಥೆಯ ಟೆರೇಸ್‌ನಿಂದ ಜಿಗಿಯಲು ಪ್ರಯತ್ನಿಸಿ ದ್ದಾಳೆ.

ಆಕೆಯನ್ನು ಶಿಕ್ಷಕರು ರಕ್ಷಿಸಿದ್ದು, ಈ ಕುರಿತ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಕೆಯನ್ನು ರಕ್ಷಿಸಿದ್ದ ಶಿಕ್ಷಕರ ಈ ಕಾರ್ಯವು ನೆಟ್ಟಿಗರ ಗಮನ ಸೆಳೆದಿದೆ.

ಜೈಪುರದ ಚುರುವಿನ 19 ವರ್ಷದ ವಿದ್ಯಾರ್ಥಿನಿ ಗೋಪಾಲಪುರದ ಗುರು ಕೃಪಾ ಕೋಚಿಂಗ್‌ನಲ್ಲಿ ನೀಟ್ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಳು. ನೀಟ್ ಆಕಾಂಕ್ಷಿಯಾಗಿದ್ದ ಆಕೆಯು ತನ್ನ ಕನಸು ಈಡೇರಲಿಲ್ಲ ಎಂಬ ಕಾರಣಕ್ಕೆ ಕೋಚಿಂಗ್ ಸಂಸ್ಥೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಬಳಿಕ ಶಿಕ್ಷಕರು ಆಕೆಯನ್ನು ರಕ್ಷಿಸಿದ್ದಾರೆ.

ಆಗಸ್ಟ್ 29ರಂದು ಮಧ್ಯಾಹ್ನ 2 ಗಂಟೆಗೆ ವಿದ್ಯಾರ್ಥಿನಿಯು ಮನನೊಂದು ಟೆರೇಸ್ ಗೋಡೆಯನ್ನು ಹತ್ತಿ ಅಲ್ಲಿಂದ ಜಿಗಿಯಲು ಪ್ರಯತ್ನಿಸಿದ್ದಾಳೆ. ಶಿಕ್ಷಕರು ಮತ್ತು ಇತರರು ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ. ಕಟ್ಟಡದ ಕೆಳಗೆ ಸುಮಾರು ಜನರು ನಿಂತಿದ್ದ ಕಾರಣ ಆಕೆ ಕೆಳಗೆ ನೋಡುತ್ತಿದ್ದ ವೇಳೆ ಶಿಕ್ಷಕರೊಬ್ಬರು ಅವಳನ್ನು ಹಿಂದಿನಿಂದ ಹಿಡಿದು ಎಳೆಯುವ ಮೂಲಕ ಆಕೆಯನ್ನು ರಕ್ಷಿಸಿದ್ದಾರೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಈ ಕುರಿತು ಮಹೇಶ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿ ಕೋಚಿಂಗ್ ಪರೀಕ್ಷೆಗಳಲ್ಲಿ ಸತತವಾಗಿ ಫೇಲ್‌ ಆಗಿದ್ದಳು. ಆ. 29ರಂದು ಆಕೆಯ ಮನೆಯವರು ಸಂಸ್ಥೆಗೆ ಭೇಟಿ ನೀಡಿದ್ದು ಆಕೆ ಬಗ್ಗೆ ಕೋಚಿಂಗ್ ಸೆಂಟರ್‌ನಲ್ಲಿ ವಿಚಾರಿಸಿದ್ದಾರೆ. ಅವಳು ಪರೀಕ್ಷೆಯಲ್ಲಿ ಫೇಲ್ ಆದ ವಿಚಾರಕ್ಕೂ ಅಲ್ಲಿ ಮಾತುಕತೆ ನಡೆದಿದ್ದು, ಇದರಿಂದಾಗಿ ವಿದ್ಯಾರ್ಥಿನಿ ಮಾನಸಿಕ ಒತ್ತಡವನ್ನು ಅನುಭವಿಸಿದ್ದಾಳೆ. ತನ್ನಿಂದ ಈ ಪರೀಕ್ಷೆ ಎದುರಿಸಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದಳು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

https://twitter.com/i/status/1961698558580822154

TAGGED:Teacher stops NEET student from attempting to take her own lifewatch viral video
Share This Article
Facebook Twitter Copy Link Print
Previous Article ನಿರಂತರ 216 ಗಂಟೆಗಳ ಕಾಲ ಭರತನಾಟ್ಯ ಮಾಡಿ ವಿಶ್ವ ದಾಖಲೆ ಬರೆದ ವಿದುಷಿ ದೀಕ್ಷಾ
Next Article ನಟ ಹರೀಶ್ ರಾಯ್‌‌ ಚಿಕಿತ್ಸೆಗೆ 11 ಲಕ್ಷ ರೂ. ನೀಡಿದ ಧ್ರುವ ಸರ್ಜಾ, ಕಲಾವಿದೆಗೆ ಖುಷಿ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ದೇಶಪ್ರಮುಖ

ಬಿಹಾರದ ಮುಜಾಫರ್ ಪುರ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ; 10 ರೋಗಿಗಳು ಸಜೀವ ದಹನ.!

1 Min Read
ದೇಶಪ್ರಮುಖವೈರಲ್

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read
ಕರ್ನಾಟಕದೇಶಪ್ರಮುಖ

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read
ಕರ್ನಾಟಕದೇಶಪ್ರಮುಖ

No women ministers ಮಹಿಳಾಪರ ‘ಗ್ಯಾರಂಟಿ’ಗಳಿದ್ದರೂ ಡಿಕೆ ಸಂಪುಟದಲ್ಲಿ ಮಹಿಳೆಗಿಲ್ಲ ಸ್ಥಾನ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?