newsics.com
ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಭಾರೀ ಸುಂಕ ಹೇರಿದ್ದಾರೆ. ಈ ಸವಾಲು ಎದುರಿಸಲು ಭಾರತ ಸಿದ್ಧವಾಗಿದೆಯಾದರೂ ಅಮೆರಿಕದಲ್ಲಿನ ಭಾರತೀಯರಿಗೆ ಈ ಸುಂಕ ಭಾರೀ ಸಂಕಷ್ಟವನ್ನೇ ತಂದಿಟ್ಟಿದೆ.
ಮೊದಲು ಶೇ.25ರಷ್ಟು ಸುಂಕ ವಿಧಿಸಲಾಗಿತ್ತು. ಅದು ಈಗಾಗಲೇ ಜಾರಿಯಲ್ಲಿದೆ. ಶೇ.25ರಷ್ಟು ಸುಂಕವನ್ನು ಶೇ.50ಕ್ಕೆ ಏರಿಸುವುದಾಗಿ ಘೋಷಿಸಿದ್ದಾರೆ. ಶೇ.50ರಷ್ಟು ಸುಂಕ ಇಂದಿನಿಂದ(ಆ.27) ಜಾರಿಯಾಗುತ್ತಿದೆ.
ಆದರೆ, ಶೇ.25ರಷ್ಟು ಸುಂಕ ಜಾರಿಯಾದಾಗಲೇ ಬೆಲೆಗಳು ತುಂಬಾ ಏರಿಕೆಯಾಗಿವೆ ಎಂದು ಪ್ರವಾಸಿ ಭಾರತೀಯರು ಹೇಳಿದ್ದಾರೆ.
ಡಲ್ಲಾಸ್‌ನ ಭಾರತೀಯ ಪ್ರವಾಸಿಗರೊಬ್ಬರು ವಾಲ್‌ಮಾರ್ಟ್ ಅಂಗಡಿಗೆ ಹೋಗಿದ್ದರು. ಅಲ್ಲಿರುವ ಭಾರತೀಯ ಆಹಾರ ಉತ್ಪನ್ನಗಳ ಬೆಲೆಗಳನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಈಗ ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತೀಯ ವ್ಯಕ್ತಿಯ ಹೆಸರು ರಜತ್. ಭಾರತದಲ್ಲಿ ನಮಗೆ ₹10ಕ್ಕೆ ಸಿಗುವ ಪಾರ್ಲೆ-ಜಿ ಬಿಸ್ಕತ್ತು ಪ್ಯಾಕೆಟ್‌ಗಳನ್ನು ಅಮೆರಿಕದಲ್ಲಿ ₹370ಕ್ಕೆ ಖರೀದಿಸುತ್ತಿರುವುದಾಗಿ ಅವರು ವಿವರಿಸಿದ್ದಾರೆ. ಹಾಗೆಯೇ ಹಲ್ದಿರಾಮ್ ತಿಂಡಿಗಳು, ಮಸಾಲೆಗಳು ಕೂಡ ತಲಾ ₹300ಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ ಎಂದಿದ್ದಾರೆ.
ಹೈಡ್ ಆ್ಯಂಡ್ ಸೀಕ್ ಬಿಸ್ಕತ್ತು ಪ್ಯಾಕೆಟ್ ಕೂಡ ₹320ಕ್ಕೆ ಏರಿಕೆಯಾಗಿದೆ. ಅದು ಭಾರತದಲ್ಲಿ ಕೇವಲ ₹20ಕ್ಕೆ ಸಿಗುತ್ತದೆ. ಅಮೆರಿಕದಲ್ಲಿ ಭಾರತದಿಂದ ಬರುವ ಬೇಳೆಕಾಳುಗಳು ಅರ್ಧ ಕೆಜಿಗೆ ₹400 ಇದೆ ಎಂದು ತಿಳಿದುಬಂದಿದೆ.