newsics.com
ಕೃಷ್ಣಗಿರಿ: ಓಲಾ ಎಲೆಕ್ಟ್ರಿಕ್ನ ಫ್ಯೂಚರ್ ಹಾಗೂ ಗಿಗಾ ಫ್ಯಾಕ್ಟರಿಗಳಲ್ಲಿ ಬಹುತೇಕ ಮಹಿಳಾ ಉದ್ಯೋಗಿಗಳೇ ಕೆಲಸ ಮಾಡುತ್ತಿದ್ದಾರೆ.
ಯುವತಿಯರಿಗೆ ತರಬೇತಿ ನೀಡಿ, ಉದ್ಯೋಗ ನೀಡಿ, ಅವರನ್ನು ಸಬಲರನ್ನಾಗಿ ಮಾಡುವ ಮೂಲಕ ಓಲಾ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ.
ಓಲಾದ ಗಿಗಾ ಹಾಗೂ ಫ್ಯೂಚರ್ ಫ್ಯಾಕ್ಟರಿಯಲ್ಲಿ (ಸ್ಕೂಟರ್ಗಳ ಉತ್ಪಾದನಾ ಘಟಕ) ಹೆಚ್ಚಿನವರು ಮಹಿಳಾ ಉದ್ಯೋಗಿಗಳು. ಓಲಾ ಸಂಸ್ಥಾಪಕ ಹಾಗೂ ಸಿಇಒ ಭವೀಶ್ ಅಗರ್ವಾಲ್ ಹೇಳುವ ಪ್ರಕಾರ, ಕೆಲವೊಂದು ಮ್ಯಾನೇಜ್ಮೆಂಟ್ ಪೋಸ್ಟ್ಗಳಲ್ಲಿ ಸೂಕ್ತ ಮಹಿಳೆಯರು ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಪುರುಷರು ನೇಮಕವಾಗಿದ್ದಾರೆ. ಇವರನ್ನು ಹೊರತುಪಡಿಸಿದರೆ ಬಹುತೇಕ ಪ್ರಾಡಕ್ಟ್ ಲೈನ್ನಲ್ಲಿ ಉದ್ಯೋಗಿಗಳು ಮಹಿಳೆಯರೇ ಆಗಿದ್ದಾರೆ.
ಗಿಗಾ ಫ್ಯಾಕ್ಟರಿ ಹೊಸದಾಗಿ ಆರಂಭವಾಗಿದ್ದರೂ, ಫ್ಯೂಚರ್ ಫ್ಯಾಕ್ಟರಿಯ ಎಲ್ಲಾ ವಿಭಾಗದಲ್ಲಿ ಮಹಿಳೆಯರೇ ಕಾಣುತ್ತಾರೆ. ಸಾಮಾನ್ಯವಾಗಿ ಫ್ಯಾಕ್ಟರಿಗಳಲ್ಲಿ ದೀರ್ಘಕಾಲ ನಿಂತು, ಫಿಟ್ಟಿಂಗ್ ಕೆಲಸಗಳನ್ನು ಮಾಡಲು ಮಹಿಳೆಯರು ಅಂಜುತ್ತಾರೆ. ಆದರೆ, ಇಲ್ಲಿ ಹಾಗಲ್ಲ. ಉದ್ಯೋಗಕ್ಕೆ ಸೇರುವ ಮುನ್ನ ಮಹಿಳೆಯರಿಗೆ ಎಲ್ಲಾ ರೀತಿಯ ತರಬೇತಿಯನ್ನು ನೀಡಲಾಗುತ್ತದೆ. ಒಂದು ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡ ಬಳಿಕ ಇನ್ನೊಂದು ವಿಭಾಗಕ್ಕೆ ಅವರಿಗೆ ಭಡ್ತಿ ನೀಡಲಾಗುತ್ತದೆ.
ಆಗಷ್ಟೇ ಕಾಲೇಜು ಮುಗಿಸಿ ಬಂದ ಯುವತಿಯರನ್ನೇ ಹೆಚ್ಚಾಗಿ ಇಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಅವರಿಗೆ ಓರಿಯಂಟೇಷನ್, ಸೂಕ್ತ ತರಬೇತಿ ನೀಡಲಾಗಿದ್ದು, ಅದಕ್ಕಾಗಿಯೇ ಓಲಾ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ.
ಇಲ್ಲಿ ಕೆಲಸಕ್ಕಿರುವ ಹೆಚ್ಚಿನ ಯುವತಿಯರು ಬಹಳ ಯಂಗ್. ಈಗ ತಾನೆ ಡಿಪ್ಲೋಮಾ ಮುಗಿಸಿ ಕೆಲಸಕ್ಕೆ ಸೇರಿದ್ದಾರೆ. ಅವರಿಗೆ ಟ್ರೇನಿಂಗ್ ನೀಡಿದ್ದು ಮಾತ್ರವಲ್ಲ. ಪ್ರತಿ ಹಂತದಲ್ಲೂ ಅವರ ಕೌಶಲವನ್ನು ಅಳತೆ ಮಾಡಲಾಗುತ್ತದೆ. ಚೆನ್ನಾಗಿ ಕೆಲಸ ಮಾಡಿದವರಿಗೆ ಒಂದೇ ವರ್ಷದಲ್ಲಿ ಭಡ್ತಿ ಸಿಗುತ್ತದೆ. ಹೀಗಾಗಿ ಕೃಷ್ಣಗಿರಿ ಪ್ರದೇಶದ ಕೆಲವೊಂದು ಮನೆಗಳಲ್ಲಿ ಈ ಯುವತಿಯರೇ ಲೀಡರ್ ಆಗಿದ್ದಾರೆ. ಮನೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.
Viral ಪಾರ್ಸೆಲ್ ನೀಡಲು ಬಂದ ಪೋಸ್ಟ್ ಮ್ಯಾನ್ ಮಾಡಿದ್ದೇನು? – ವೈರಲ್ ವಿಡಿಯೋ ನೋಡಿ