newsics.com
ಪಾರ್ಸೆಲ್ ಕೊಡಲು ವಾಂಡಲ್ ಎಂಬ ಮಹಿಳೆಯ ಮನೆಗೆ ಪೋಸ್ಟ್ ಮ್ಯಾನ್ ಬಂದಿದ್ದು, ಈ ವೇಳೆ ಮಳೆ ಬರುತ್ತಿರುವುದನ್ನು ನೋಡಿ, ಮನೆಯ ಹೊರಭಾಗದಲ್ಲಿ ಒಣಗಲು ಹಾಕಿದ್ದ ಬಟ್ಟೆಗಳನ್ನು ತೆಗೆದು ಮನೆಯೊಳಗೆ ಇಟ್ಟು ಹೋಗಿದ್ದಾರಂತೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಣಗಲು ಹಾಕಿದ್ದ ಬಟ್ಟೆಗಳನ್ನು ಯಾರೋ ಮಡಚಿ ಇಟ್ಟಿದ್ದಾರೆ. ಹೀಗಾಗಿ ಸಿಸಿಟಿವಿಯನ್ನು ಪರಿಶೀಲಿಸಿದಾಗ ಮನೆಗೆ ಪಾರ್ಸೆಲ್ ತಂದಿದ್ದ ಪೋಸ್ಟ್ ಮ್ಯಾನ್ ಈ ಕೆಲಸ ಮಾಡಿ ಹೋಗಿದ್ದಾರೆ ಎಂದು ತಿಳಿದಿದೆ. ಇನ್ನು ಪಾರ್ಸೆಲ್ ಜೊತೆಗೆ ಪೋಸ್ಟ್ ಮ್ಯಾನ್ ಬರೆದಿದ್ದ ಪತ್ರವೊಂದು ಈ ಮಹಿಳೆಯ ಕೈಗೆ ಸಿಕ್ಕಿದೆ. ಈ ಪತ್ರದಲ್ಲಿ ಮಳೆಯಿಂದಾಗಿ ನೆನೆಯುತ್ತಿದ್ದ ಬಟ್ಟೆಗಳನ್ನು ತಂದು ಮನೆಯೊಳಗೆ ಇಟ್ಟಿರುವ. ಆಸ್ಟ್ರೇಲಿಯಾದ ಮಹಿಳೆ ಹಂಚಿಕೊಂಡ ಈ ವಿಡಿಯೋದಲ್ಲಿ ಮಳೆಯಿಂದ ನೆನೆಯುತ್ತಿದ್ದ ಬಟ್ಟೆಗಳನ್ನು ತೆಗೆದು ಪೋಸ್ಟ್ ಮ್ಯಾನ್ ಮನೆಗೆ ಒಳಗೆ ತಂದು ಇಡುತ್ತಿರುವುದನ್ನು ನೋಡಬಹುದು.
verritywandel ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಸ್ಟ್ರೇಲಿಯಾ ಮಹಿಳೆಯ ಈ ವಿಡಿಯೋ ಹಂಚಿಕೊಂಡಿದ್ದಾಳೆ. ಇಲ್ಲಿ ಪೋಸ್ಟ್ ಮ್ಯಾನ್ ಮಾಡಿದ ಒಳ್ಳೆಯ ಕೆಲಸದ ಬಗ್ಗೆ ಹೇಳಿಕೊಂಡಿದ್ದು, ಶೀರ್ಷಿಕೆಯಲ್ಲಿ ಪೋಸ್ಟ್ ಮ್ಯಾನ್ ಮನೆ ಆವರಣದಲ್ಲಿ ಒಣಗಲು ಹಾಕಿದ್ದ ಬಟ್ಟೆಗಳು ಮಳೆಯಿಂದ ಒದ್ದೆಯಾಗುವುದನ್ನು ತಪ್ಪಿಸಿ ಅದನ್ನು ಮಡಚಿ ಮನೆಯೊಳಗೆ ಇಟ್ಟು ಹೋಗಿದ್ದಾರೆ. ಇದು ನಿಜಕ್ಕೂ ಅದ್ಭುತ ಎಂದು ಬರೆದುಕೊಂಡಿದ್ದಾಳೆ.
https://www.instagram.com/reel/DNfRCeKv1C7/?igsh=MTkyNnN2NWloZDRmNQ==