newsics.com
ಬಳ್ಳಾರಿ: ಪುಂಡರ ಗುಂಪೊಂದು ಯುವಕನೋರ್ವನಿಗೆ ಬ್ಯಾಟ್‍ನಿಂದ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬಳ್ಳಾರಿಯಲ್ಲಿ ಜರುಗಿದೆ. ತಂಗಿ ಜೊತೆಗಿದ್ದ ಫೋಟೋ ಶೇರ್ ಮಾಡಿದ್ದಕ್ಕೆ ಈ ಕೃತ್ಯ ನಡೆದಿದೆ.
19 ವರ್ಷದ ದೊಡ್ಡಬಸವ ಹಲ್ಲೆಗೊಳಗಾದ ಯುವಕ. ಶಶಿಕುಮಾರ್, ಸಾಯಿಕುಮಾರ್ ಸೇರಿ ಒಟ್ಟು 10 ಜನರಿಂದ ಹಲ್ಲೆ ನಡೆದಿದೆ.
ಹಲ್ಲೆ ನಡೆಸಿದ ಯುವಕನೊಬ್ಬನ ತಂಗಿಯ ಜೊತೆ ಕಾರ್ಯಕ್ರಮ ಒಂದರಲ್ಲಿ ದೊಡ್ಡಬಸವ ಫೋಟೋ ತೆಗಿಸಿದ್ದ. ಅದನ್ನು ಇನ್ಸ್ಟಾದಲ್ಲಿ ಸ್ಟೇಟಸ್ ಹಾಕಿದ್ದ. ಇದೇ ಕಾರಣಕ್ಕೆ ಬೈಕ್‍ನಲ್ಲಿ ಐಟಿಐ ಕಾಲೇಜು ಮೈದಾನಕ್ಕೆ ಕರೆದೊಯ್ದು ಕ್ರಿಕೆಟ್ ಬ್ಯಾಟ್ ಹಾಗೂ ಬೆಲ್ಟ್‌ನಿಂದ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಲಿಗೆ ಬೀಳ್ತೀನಿ, ಕೈ ಮುಗಿತೀನಿ ಎಂದು ಯುವಕ ಅಂಗಾಲಾಚಿದ್ರೂ ಕರುಣೆ ತೋರದೇ ಮನಬಂದಂತೆ ಪುಂಡರು ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.