newsics.com
ಇನ್ಮುಂದೆ ಬಾರ್ ಆ್ಯಂಡ್ ರೆಸ್ಟೋರೆಂಟ್, ಹೋಟೆಲ್, ಪಬ್, ಕ್ಲಬ್ ಹಾಗೂ ಲಾಡ್ಜ್‌ಗಳಲ್ಲಿ ಎಲ್ಲೆಂದರಲ್ಲಿ ಸ್ಮೋಕ್ ಮಾಡೋಹಾಗಿಲ್ಲ. ಈ ಬಗ್ಗೆ ಇದೀಗ ಬಿಬಿಎಂಪಿ ಸ್ಟ್ರಿಕ್ಟ್ ರೂಲ್ಸ್ ಮಾಡಿ, ನೋಟಿಸ್ ನೀಡಿದೆ.
30 ಆಸನ ಅಥವಾ 30 ಕೊಠಡಿಗಳಿಗಿಂತ ಹೆಚ್ಚಿನ ಕೊಠಡಿಗಳಿರುವ ಲಾಡ್ಜ್, ಪಬ್, ಬಾರ್, ರೆಸ್ಟೋರೆಂಟ್‌ಗಳಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಸ್ಥಳ ನಿಗದಿ ಮಾಡಲು ಬಿಬಿಎಂಪಿ ಸೂಚನೆ ನೀಡಿದೆ.
ಧೂಮಪಾನ ಸೇವೆಗಳನ್ನ ನೀಡುವ ಇಚ್ಚೀಸುವ ಉದ್ದಿಮೆಗಳು ಪ್ರತ್ಯೇಕವಾಗಿ ಧೂಮಪಾನ ಪ್ರದೇಶ ನಿಗದಿ ಮಾಡುವಂತೆ ಬಿಬಿಎಂಪಿ ನೋಟಿಸ್ ನೀಡಿದೆ. ಈಗಾಗಲೇ ನಗರದಲ್ಲಿ 500ಕ್ಕೂ ಹೆಚ್ಚು ಬಾರ್ ಆ್ಯಂಡ್ ರೆಸ್ಟೋರೆಂಟ್, ಪಬ್ ಕ್ಲಬ್, ಹೋಟೆಲ್‌ಗಳಿಗೆ ನೋಟಿಸ್ ನೀಡಲಾಗಿದೆ.
ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಬಗ್ಗೆ ಸರ್ಕಾರದಿಂದ ಸ್ಟ್ರಿಕ್ಟ್ ರೂಲ್ಸ್ ಈಗಾಗಲೇ ಜಾರಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ 1000 ರೂಪಾಯಿ ದಂಡ ವಿಧಿಸಿ ಸರ್ಕಾರ ಆಧೇಶಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಗೆ ರಹಿತ ತಂಬಾಕು ಪದಾರ್ಥಗಳನ್ನು ನಿಷೇಧಿಸಿದೆ.
https://www.newsics.com/2025/08/01/dharmasthala-case-high-court-lifts-restrictions-on-media/