newsics.com
ಕಾರವಾರ: ಕಾರಿನ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಅತ್ತೆ ಸಾವನ್ನಪ್ಪಿದ್ದು , 8 ತಿಂಗಳ ಗರ್ಭಿಣಿ ಮತ್ತು ಚಾಲಕ ಪಾರಾಗಿರುವ ಘಟನೆ ಕಾರವಾರದ ಪಿಕಳೆ ಆಸ್ಪತ್ರೆ ಬಳಿ ನಡೆದಿದೆ. ಲಕ್ಷ್ಮೀ ಪಾಗಿ ಮೃತ ಮಹಿಳೆ.
8 ತಿಂಗಳ ಗರ್ಭಿಣಿ ಸೊಸೆ ಸುನಿತಾ ಜೊತೆ ಕಾರವಾರದ ಪಿಕಳೆ ಆಸ್ಪತ್ರೆಗೆ ಕಾರಿನಲ್ಲಿ ಬಂದಿದ್ದರು. ಆಸ್ಪತ್ರೆ ಮುಂದೆ ಕಾರು ನಿಲ್ಲಿಸುತ್ತಿದ್ದ ವೇಳೆ ಬಿರುಗಾಳಿ ಮಳೆಗೆ ಬೃಹತ್ ಮರವೊಂದು ಕಾರಿನ ಮೇಲೆ ಬಿದ್ದಿದೆ. ತಕ್ಷಣ ಕಾರಿನ ಡೋರ್ ತೆರೆದು ಗರ್ಭಿಣಿ ಸೊಸೆ ಕೆಳಗಿಳಿದು ಪಾರಾಗಿದ್ದಾರೆ, ಅಷ್ಟರಲ್ಲಿ ಕಾರಿನ ಮತ್ತೊಂದು ಭಾಗದಲ್ಲಿ ಸಿಲುಕಿಕೊಂಡಿದ್ದ ಅತ್ತೆ ಲಕ್ಷ್ಮಿ ಕಾರಿನಿಂದ ಹೊರ ಬರಲಾಗದೇ ಪರದಾಡಿದ್ದರು.
ಸ್ಥಳೀಯರು ಹಾಗೂ ನಗರಸಭೆ ಸಿಬ್ಬಂದಿ ಹರಸಾಹಸ ಪಟ್ಟು ಲಕ್ಷ್ಮೀ ಅವರನ್ನು ಹೊರ ತೆಗೆದು ಆಸ್ಪತ್ತೆಗೆ ದಾಖಲಿಸಿದ್ದರು, ಮರ ಬಿದ್ದು ಕಾರಿನಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಡಿಸಿ ಮತ್ತು ನಗರಸಭೆ ಆಯುಕ್ತರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
https://www.newsics.com/2025/07/20/another-bomb-threat-to-the-gurudwara/