newsics.com
ಪ್ರತಿ ಮಹಿಳೆಯು ಮುಟ್ಟನ್ನು ಎದುರಿಸುವುದು ನೈಸರ್ಗಿಕ ನಿಯಮವಾಗಿದೆ. ಈ ಸಮಯದಲ್ಲಿ ಮಹಿಳೆಯರು ಅನೇಕ ಅಸ್ವಸ್ಥತೆಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಆಯಾಸ, ಹೊಟ್ಟೆ ನೋವು, ಸ್ನಾಯು ಸೆಳೆತ, ಎದೆಯ ಭಾಗದಲ್ಲಿ ಸ್ವಲ್ಪ ಊತ, ಹೊಟ್ಟೆ ಉಬ್ಬರ ಮುಂತಾದ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆರೋಗ್ಯವಂತ ಸ್ತ್ರೀಯರಲ್ಲಿ ಮುಟ್ಟು ಸಾಮಾನ್ಯವಾಗಿ 28 ದಿನಗಳಿಗೆ ಆಗುತ್ತದೆ. ಆದರೆ ಎಲ್ಲರಲ್ಲಿಯೂ ಹೀಗೆಯೇ ಆಗಬೇಕೆಂದೇನಿಲ್ಲ. ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ರೀತಿ ಇರುವ ಕಾರಣದಿಂದ ಬದಲಾವಣೆ ಇದದ್ದೇ. ಆದರೆ ಕೆಲವು ಸಂದರ್ಭದಲ್ಲಿ ಅರ್ಥಾತ್ ಮದುವೆ, ಸಮಾರಂಭ, ದೇವರ ಪೂಜೆ ಹೀಗೆ ಏನೇನೋ ಕಾರಣಗಳಿಂದ ಮುಟ್ಟಿನ ದಿನವನ್ನು ಮುಂದೂಡುವುದು ಸಾಮಾನ್ಯವಾಗಿದೆ. ಆದರೆ ಇದು ಎಷ್ಟು ಸೇಫ್ ಎನ್ನುವ ಬಗ್ಗೆ ಇದಾಗಲೇ ಹಲವು ವೈದ್ಯರು ಮಾತನಾಡಿದ್ದಾರೆ. ಪದೇ ಪದೇ ಮುಟ್ಟನ್ನು ಮುಂದೂಡುವುದನ್ನು ಮಾಡಿದರೆ ಅದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಗರ್ಭಕೋಶದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು.
ಇದುವರೆಗೆ ಮುಟ್ಟನ್ನು ಪ್ರೀಪೋನ್ಡ್ ಮಾಡುವ ಮಾತ್ರೆ ಬಂದಿಲ್ಲ ಎಂದು ಹೇಳಿದ್ದಾರೆ. ಇದನ್ನು ವೈದ್ಯರೂ ಮಾಡಲು ಬರುವುದಿಲ್ಲ, ಮೆಡಿಸಿನ್ ಕೂಡ ಎಫೆಕ್ಟಿವ್ ಆಗಿ ಇರುವುದಿಲ್ಲ ಎಂದಿರುವ ವೈದ್ಯೆ, ಮುಟ್ಟನ್ನು ಪ್ರೀಪೋನ್ಡ್ ಅಥವಾ ಪೋಸ್ಟ್ಪೋನ್ ಮಾಡಲೇಬೇಡಿ ಎಂದು ನಾವು ಹೇಳುತ್ತೇವೆ ಎಂದಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿರುವ ಡಾ.ಶಿಲ್ಪಾ, ಇದಕ್ಕೆ ಹಾರ್ಮೋನಲ್ ಮಾತ್ರೆಗಳನ್ನು ಕೊಡಬೇಕಾಗುತ್ತದೆ. ಅದು ಒಳ್ಳೆಯದಲ್ಲ ಎನ್ನುವುದು ಅವರ ಮಾತು.
ಇನ್ನು ಮುಟ್ಟಿನ ಮುಟ್ಟಿನ ಮುಂದೂಡಿಕೆ ಮಾತ್ರೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿಯೋಣ, ಇದು ಪ್ರೊಜೆಸ್ಟರಾನ್ ಅನ್ನು ಹೊಂದಿರುತ್ತವೆ, ಇದು ದೇಹಕ್ಕೆ ಬಿಡುಗಡೆಯಾದಾಗ, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟವನ್ನು ನಿರ್ವಹಿಸುತ್ತದೆ. ಈ ಎರಡೂ ಒಟ್ಟಿಗೇ ಸೇರಿದಾಗ ಎಂಡೊಮೆಟ್ರಿಯಂನಿಂದಾಗಿ ಮುಟ್ಟಿನ ವಿಳಂಬವಾಗುತ್ತದೆ. ಆದರೆ ಈ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಸ್ತ್ರೀರೋಗತಜ್ಞರನ್ನು ಸಂಪರ್ಕಿಸುವುದು ಅತ್ಯಗತ್ಯ ಎನ್ನುವುದು ವೈದ್ಯರ ಮಾತು.
https://www.instagram.com/reel/DMI1CUhCV8N/?igsh=MXY4MzNybGtwaDFicQ==