Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > SC UPHOLDS LIFE TERM ಭಾವಿ ಪತಿ ಹತ್ಯೆ ಪ್ರಕರಣ; ಶುಭಾ ಸೇರಿ ನಾಲ್ವರು ಅಪರಾಧಿಗಳ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಸುಪ್ರೀಂ
ದೇಶಪ್ರಮುಖ

SC UPHOLDS LIFE TERM ಭಾವಿ ಪತಿ ಹತ್ಯೆ ಪ್ರಕರಣ; ಶುಭಾ ಸೇರಿ ನಾಲ್ವರು ಅಪರಾಧಿಗಳ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಸುಪ್ರೀಂ

Share
2 Min Read
SHARE

newsics.com

ನವದೆಹಲಿ: 2003ರಲ್ಲಿ ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಬಿವಿ ಗಿರೀಶ್ ಹತ್ಯೆ ಪ್ರಕರಣದಲ್ಲಿ ಆತನೊಂದಿಗೆ ಮದುವೆ ನಿಶ್ಚಿತಗೊಂಡಿದ್ದ ಶುಭಾ ಮತ್ತು ಆಕೆಯ ಪ್ರಿಯಕರ ಸೇರಿದಂತೆ ನಾಲ್ವರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.

ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠವು ಕರ್ನಾಟಕ ಹೈಕೋರ್ಟ್ ನೀಡಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಈ ನಾಲ್ವರು ಆರೋಪಿಗಳು ಅಪರಾಧಿಗಳಾಗಿ ಹುಟ್ಟಿಲ್ಲ. ಆದರೆ, ಅಪಾಯಕಾರಿಯಾದ ತಪ್ಪು ತೀರ್ಮಾನವೂ ಈ ಹೀನ ಕೃತ್ಯಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.

132 ಪುಟಗಳ ಈ ತೀರ್ಪು ನೀಡಿದ ಕೋರ್ಟ್, ದಾಖಲೆಗಳಲ್ಲಿರುವ ಸಾಕ್ಷ್ಯಗಳು ಸಮರ್ಪಕತೆ ಬಗ್ಗೆ ತೃಪ್ತಿ ಹೊಂದಿದ್ದು, ಅಪರಾಧಿಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ವಜಾಗೊಳಿಸಿದೆ ಎಂದಿತು.
ಶುಭಾಳ ಕುಟುಂಬ ಮಾನಸಿಕ ಒಲವು ಮತ್ತು ಸ್ವಭಾವವನ್ನು ಅರ್ಥಮಾಡಿಕೊಂಡಿದ್ದರೆ ಈ ದುರದೃಷ್ಟಕರ ಘಟನೆ ಸಂಭವಿಸುತ್ತಿರಲಿಲ್ಲ.

ಬಲವಂತದ ಕೌಟುಂಬಿಕ ನಿರ್ಧಾರದಿಂದ ಕಂಗೆಟ್ಟ ಮಹತ್ವಾಕಾಂಕ್ಷೆಯ ಯುವತಿಯ ಮನಸ್ಸಿನಲ್ಲಿ ಅತ್ಯಂತ ತೀವ್ರವಾದ ಪ್ರಕ್ಷುಬ್ಧತೆಯನ್ನು ಸೃಷ್ಟಿಸಿತು. ಇದು ಮಾನಸಿಕ ಹಿಂಸೆ ಮತ್ತು ಉಗ್ರ ಪ್ರಣಯತೆಯ ಅಪವಿತ್ರ ಮೈತ್ರಿಯ ಬೆಂಬಲದೊಂದಿಗೆ, ಮುಗ್ಧ ಯುವಕನ ದುರಂತ ಹತ್ಯೆಗೆ ಕಾರಣವಾಯಿತು. ಅದೇ ಸಮಯದಲ್ಲಿ ಇತರ ಮೂವರ ಜೀವನ ಹಾಳಾಯಿತು ಎಂದು ನ್ಯಾಯಮೂರ್ತಿ ಸುಂದರೇಶ್ ತಿಳಿಸಿದರು.

ಈ ಪ್ರಕರಣದಲ್ಲಿ ನ್ಯಾಯಾಲಯವಾಗಿ ಈ ವಿಷಯವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ಸುಪ್ರೀಂ ಪೀಠ ಪ್ರಯತ್ನಿಸುತ್ತದೆ, ಘಟನೆ ಸಂದರ್ಭವನ್ನು ಗಮನದಲ್ಲಿರಿಸಿಕೊಂಡು ಅಪರಾಧಿ ಶುಭಾಳಿಗೆ ಕರ್ನಾಟಕ ರಾಜ್ಯಪಾಲರ ಮುಂದೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಲು ಅನುಮತಿ ನೀಡುತ್ತದೆ. ಈ ಅರ್ಜಿ ಸಲ್ಲಿಕೆಗೆ ಎಂಟು ವಾರಗಳ ಕಾಲಾವಕಾಶವನ್ನು ಪೀಠ ನೀಡುತ್ತದೆ ಎಂದು ಹೇಳಿದೆ.

ಪ್ರಕರಣ ಹಿನ್ನೆಲೆ: ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಬಿ. ವಿ. ಗಿರೀಶ್ ಶುಭಾಳೊಂದಿಗೆ 2003ರ ನವೆಂಬರ್ 30 ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಇದಾದ ಎರಡೇ ದಿನಕ್ಕೆ 2003ರ ಡಿಸೆಂಬರ್ 3ರಂದು ಶುಭಾ ತನ್ನ ಪ್ರಿಯಕರ ಅರುಣ್ ವರ್ಮಾ ಹಾಗೂ ವೆಂಕಟೇಶ್, ದಿನೇಶ್ – ಪಿತೂರಿ ನಡೆಸಿ ಗಿರೀಶ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಅರುಣ್ ಜೊತೆಗಿನ ಪ್ರೀತಿ ತಿಳಿದಿದ್ದ ಶುಭಾ ಕುಟುಂಬ ಈ ಮದುವೆಗೆ ಒತ್ತಾಯಿಸಿದ್ದೇ ಆಕೆ ಈ ಕೃತ್ಯವೆಸಗಲು ಕಾರಣ ಎಂದು ಆರೋಪಿಸಲಾಗಿತ್ತು.

ಚಲಿಸುವ ದೋಣಿ ಮೇಲೆ ಡಾನ್ಸ್: ವರ್ಲ್ಡ್‌ ಫೇಮಸ್‌ ಆದ ಪುಟ್ಟ ಬಾಲಕ

TAGGED:SC UPHOLDS LIFE TERM Fiancé murder case; Supreme Court upholds life sentence of four convicts including Shubha
Share This Article
Facebook Twitter Copy Link Print
Previous Article ಚಲಿಸುವ ದೋಣಿ ಮೇಲೆ ಡಾನ್ಸ್: ವರ್ಲ್ಡ್‌ ಫೇಮಸ್‌ ಆದ ಪುಟ್ಟ ಬಾಲಕ
Next Article 2 ಗಂಟೆಗಳ ಕಾಲ ಟ್ರಾಫಿಕ್‌ನಲ್ಲೇ ಸಿಲುಕಿದ ಉದ್ಯಮಿ; ಪರಿಹಾರಕ್ಕಾಗಿ ಮಾಡಿದ್ದೇನು?

Popular Posts

KCET Result 2026 ಕರ್ನಾಟಕ UG-CET ಪರೀಕ್ಷೆ ಫಲಿತಾಂಶ ಪ್ರಕಟ : ಇಲ್ಲಿದೆ ಟಾಪರ್ ಗಳ ಪಟ್ಟಿ

1 Min Read

ಸುರ್ಜೆವಾಲಾ ಮನವೊಲಿಕೆ ಸಕ್ಸಸ್ : ಇಂದು ಸಂಜೆ ರಾಮಲಿಂಗಾರೆಡ್ಡಿ ರಾಜಿನಾಮೆ ವಾಪಸ್ ಸಾಧ್ಯತೆ

1 Min Read

CET Result 2026: ಸಿಇಟಿ ಫಲಿತಾಂಶ ಪ್ರಕಟ; ಆನ್​ಲೈನ್​ನಲ್ಲಿ ಹೀಗೆ ಚೆಕ್​ ಮಾಡಿಕೊಳ್ಳಿ!

1 Min Read

ಇನ್ನೈದು ದಿನ ಕನಸಿನ ಬಗ್ಗೆ ಇರಲಿ ಭಾರೀ ಎಚ್ಚರ!

1 Min Read

You Might Also Like

ದೇಶಪ್ರಮುಖ

NEET ಹೋರಾಟಕ್ಕೆ ಪೊಲೀಸರ ಗ್ರೀನ್ ಸಿಗ್ನಲ್; ಕಾಕ್ರೋಚ್​ ಜನತಾ ಪಾರ್ಟಿಯಿಂದ ಪ್ರತಿಭಟನೆ: ಭಾರತಕ್ಕೆ ಸಿಜೆಪಿ ಸಂಸ್ಥಾಪಕ ಡಿಪ್ಕೆ ಆಗಮನ

1 Min Read
ದೇಶಪ್ರಮುಖವಿದೇಶ

ಲಂಡನ್ ವಿಶ್ವವಿದ್ಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಎದುರೇ ತೀವ್ರ ವಾಗ್ವಾದ :ಭಾಷಣದ ವೇಳೆ ನಡೆದಿದ್ದೇನು?

1 Min Read
ಕರ್ನಾಟಕಪ್ರಮುಖ

ಒಬ್ಬಂಟಿಯಾದ ಸಿದ್ದರಾಮಯ್ಯ: ಸಿಎಂ ಡಿಕೆ ಎದುರಾದರೂ ಮಾತಿಲ್ಲ! ವಿಡಿಯೋ ನೋಡಿ

1 Min Read
ಪ್ರಮುಖಲೈಫ್‌ಸ್ಟೈಲ್

ಆರತಿ ತಟ್ಟೆಗೆ ಹಣ ಹಾಕುವುದೇಕೆ? ಇದರ ಹಿಂದಿರುವ ವೈಜ್ಞಾನಿಕ ಕಾರಣಗಳೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?