Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > 2 ಗಂಟೆಗಳ ಕಾಲ ಟ್ರಾಫಿಕ್‌ನಲ್ಲೇ ಸಿಲುಕಿದ ಉದ್ಯಮಿ; ಪರಿಹಾರಕ್ಕಾಗಿ ಮಾಡಿದ್ದೇನು?
ಕರ್ನಾಟಕಪ್ರಮುಖ

2 ಗಂಟೆಗಳ ಕಾಲ ಟ್ರಾಫಿಕ್‌ನಲ್ಲೇ ಸಿಲುಕಿದ ಉದ್ಯಮಿ; ಪರಿಹಾರಕ್ಕಾಗಿ ಮಾಡಿದ್ದೇನು?

Share
2 Min Read
SHARE

newsics.com

ಇತ್ತೀಚೆಗೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಈಸ್ ಮೈ ಟ್ರಿಪ್ ಸಂಸ್ಥೆಯ ಸಹ ಸಂಸ್ಥಾಪಕ ಪ್ರಶಾಂತ್ ಪಿಟ್ಟಿ ಸಿಲುಕಿ ಒದ್ದಾಡಿದ್ದಾರೆ. ಬರೋಬ್ಬರಿ 2 ಗಂಟೆ ಕಾಲ ಒಂದೇ ಕಡೆ ಜಾಮ್ ಆಗಿ ಪರಿತಪಿಸಿದ್ದಾರೆ. ಕೊನೆಗೂ ದಡ ಸೇರಿದ ಪ್ರಶಾಂತ್ ಪಿಟ್ಟಿ ಮಹತ್ವದ ನಿರ್ಧಾರ ಮಾಡಿದ್ದಾರೆ.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿ ಪ್ರಾಜೆಕ್ಟ್ ಘೋಷಿಸಿದ್ದಾರೆ.

ಪ್ರಶಾಂತ್ ಪಿಟ್ಟಿ ಬರೋಬ್ಬರಿ 100 ನಿಮಿಷಕ್ಕೂ ಹೆಚ್ಚು ಕಾಲ ಬೆಂಗಳೂರು ರಸ್ತೆಯಲ್ಲಿ ಸಿಲುಕಿದ್ದಾರೆ. ಟ್ರಾಫಿಕ್ ಕಿರಿಕಿರಿ, ತಕ್ಕ ಸಮಯಕ್ಕೆ ತಲುಪಲು ಸಾಧ್ಯವಾಗದೇ ಅಸಾಹಯಕರಾಗಿ ರಸ್ತೆಯಲ್ಲೇ ಕಳೆಯಬೇಕಾಗಿ ಬಂದಿದೆ. ಈ ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತೆ ಉದ್ಯಮಿ ಪ್ರಶಾಂತ್ ಪಿಟ್ಟಿ ಪರಿಹಾರಕ್ಕೆ ನಿರ್ಧರಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಅತ್ಯಾಧುನಿಕ ಎಐ ತಂತ್ರಜ್ಞಾಾನ ಬಳಸಿ ತಕ್ಕ ಮಟ್ಟಿನ ಪರಿಹಾರ ಮಾಡುವುದಾಗಿ ಘೋಷಿಸಿದ್ದಾರೆ. ಇದಕ್ಕಾಗಿ 1 ಕೋಟಿ ರೂಪಾಯಿ ತೆಗೆದಿಡುವುದಾಗಿ ಹೇಳಿದ್ದಾರೆ.

ಬೆಂಗಳೂರು ಒಆರ್‌ಆರ್ ಜಂಕ್ಷನ್ ಬಳಿ ನಾನು ಸಿಲುಕಿಕೊಂಡಿದ್ದೆ. ಬರೋಬ್ಬರಿ 100 ನಿಮಿಷಕ್ಕೂ ಹೆಚ್ಚು ಕಾಲ ಒಂದೇ ಕಡೆ ಟ್ರಾಫಿಕ್‌ನಲ್ಲಿ ಸಿಲುಕಿದ್ದೆ. ಜಾಮ್ ರಸ್ತೆಯಲ್ಲಿ ಆಮೆಯಂತೆ ಸಾಗಿ ಬಂದಾಗಲೇ ಗೊತ್ತಾಗಿದ್ದು, ಇಲ್ಲಿ ಸಿಗ್ನಲ್ ಇಲ್ಲ, ಪೊಲೀಸ್ ಇಲ್ಲ. ಎಲ್ಲರಂತೆ ಬೆಂಗಳೂರು ಟ್ರಾಫಿಕ್‌ನ್ನು ಮೀಮ್ಸ್ ಮೂಲಕ ಅಥವಾ ಟ್ರೋಲ್ ಮಾಡಲು ನಾನು ಇಷ್ಟಪಡುವುದಿಲ್ಲ. ಇದರ ಬದಲಾಗಿ, ಇದಕ್ಕೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಪ್ರಶಾಂತ್ ಪಿಟ್ಟಿ ಹೇಳಿದ್ದಾರೆ.
ಬೆಂಗಳೂರು ಟ್ರಾಫಿಕ್ ಮೀಮ್ಸ್, ಟ್ರೋಲ್ ಪಟ್ಟಿಗೆ ನಾನು ಒಂದು ಸೇರಿಸಲು ಬಯಸುವುದಿಲ್ಲ. ಆದರೆ ಈ ಸಮಸ್ಯೆಗೆ ಪರಿಹಾರ ಸೂಚಿಸಲು ನಾನು ಬಯಸುತ್ತೇನೆ. ಎಪ್ರಿಲ್ 2025ರಲ್ಲಿ ಗೂಗಲ್ ಮ್ಯಾಪ್ ರೋಡ್ ಮ್ಯಾನೇಜ್ಮೆಂಟ್ ಇನ್‌ಸೈಟ್ ಟೂಲ್ ಆರಂಭಿಸಿದೆ. ಈ ಮೂಲಕ ನಗರದ ಟ್ರಾಫಿಕ್ ಮಟ್ಟವನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಈ ಡೇಟಾ, ಸ್ಯಾಟಲೈಟ್ ಚಿತ್ರಗಳನ್ನು ಬಳಸಿ ಎಲ್ಲೆಲ್ಲಿ ಟ್ರಾಫಿಕ್ ಸಮಸ್ಯೆ ಇದೆ, ಎಲ್ಲಿ ಬಾಟಲ್ ನೆಕ್ ಸಮಸ್ಯೆಯಿಂದ ಟ್ರಾಫಿಕ್ ಹೆಚ್ಚಾಗುತ್ತಿದೆ ಅನ್ನೋದು ಪತ್ತೆ ಹಚ್ಚಲಾಗುತ್ತದೆ. ಬಳಿಕ ಎಐ ತಂತ್ರಜ್ಞಾನ ಬಳಸಿ ಈ ರಸ್ತೆಗಳಲ್ಲಿ ಅದಕ್ಕೆ ತಕ್ಕಂತೆ ಸಿಗ್ನಲ್ ಸೇರಿದಂತೆ ಇತರ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕಾಗಿ 1 ಕೋಟಿ ರೂಪಾಯಿ ಮೀಸಲಿಡುವುದಾಗಿ ಪ್ರಶಾಂತ್ ಪಿಟ್ಟಿ ಘೋಷಿಸಿದ್ದಾರೆ.

ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹರಿಸಲು ಎಐ ಎಂಜಿನೀಯರ್ಸ್, ಗೂಗಲ್ ಮ್ಯಾಪ್ ಡೇಟಾ, ಸ್ಯಾಟಲೈಟ್ ಚಿತ್ರ ಸೇರಿದಂತೆ ಎಲ್ಲಾ ತಂತ್ರಜ್ಞಾನ ಮೂಲ ಬಳಸಿಸಿಕೊಳ್ಳಲಾಗುತ್ತಿದೆ. ಇದೇ ವೇಳೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಕಿ ಅಂಶಗಳನ್ನು ಬಳಸಿಸಕೊಳ್ಳಲಾಗುತ್ತದೆ ಎಂದು ಪ್ರಶಾಂತ್ ಪಿಟ್ಟಿ ಹೇಳಿದ್ದಾರೆ.

ಬೆಂಗಳೂರು ಭವಿಷ್ಯದ ಟೆಕ್ ಸಿಟಿಯಾಗಿದೆ. ಇಲ್ಲಿನ ಜನರು ಇದಕ್ಕಿಂತ ಉತ್ತಮ ಟ್ರಾಫಿಕ್ ಅರ್ಹರಾಗಿದ್ದಾರೆ. ಆದರೆ ನಿರ್ಲಕ್ಷ್ಯ, ಸಿಬ್ಬಂದಿಗಳ ಕೊರತೆ ಕೆಲ ರಸ್ತೆಗ ವಿನ್ಯಾಸಗಳ ಸಮಸ್ಯೆಗಳಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಇದನ್ನು ತಂತ್ರಜ್ಞಾನದ ಮೂಲಕ ತಕ್ಕ ಮಟ್ಟಿಗೆ ಪರಿಹರಿಸಲು ಸಾಧ್ಯವಿದೆ ಎಂದು ಪ್ರಶಾಂತ್ ಪಿಟ್ಟಿ ಹೇಳಿದ್ದಾರೆ.

SC UPHOLDS LIFE TERM ಭಾವಿ ಪತಿ ಹತ್ಯೆ ಪ್ರಕರಣ; ಶುಭಾ ಸೇರಿ ನಾಲ್ವರು ಅಪರಾಧಿಗಳ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಸುಪ್ರೀಂ

TAGGED:Businessman stuck in Bengaluru traffic for 2 hoursRs 1 crore project announced to help him
Share This Article
Facebook Twitter Copy Link Print
Previous Article SC UPHOLDS LIFE TERM ಭಾವಿ ಪತಿ ಹತ್ಯೆ ಪ್ರಕರಣ; ಶುಭಾ ಸೇರಿ ನಾಲ್ವರು ಅಪರಾಧಿಗಳ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಸುಪ್ರೀಂ
Next Article ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಏಕರೂಪದ ದರ ಜಾರಿಗೊಳಿಸಿ ಸರ್ಕಾರ ಆದೇಶ

Popular Posts

ಇನ್ನೈದು ದಿನ ಕನಸಿನ ಬಗ್ಗೆ ಇರಲಿ ಭಾರೀ ಎಚ್ಚರ!

1 Min Read

NEET ಹೋರಾಟಕ್ಕೆ ಪೊಲೀಸರ ಗ್ರೀನ್ ಸಿಗ್ನಲ್; ಕಾಕ್ರೋಚ್​ ಜನತಾ ಪಾರ್ಟಿಯಿಂದ ಪ್ರತಿಭಟನೆ: ಭಾರತಕ್ಕೆ ಸಿಜೆಪಿ ಸಂಸ್ಥಾಪಕ ಡಿಪ್ಕೆ ಆಗಮನ

1 Min Read

ಲಂಡನ್ ವಿಶ್ವವಿದ್ಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಎದುರೇ ತೀವ್ರ ವಾಗ್ವಾದ :ಭಾಷಣದ ವೇಳೆ ನಡೆದಿದ್ದೇನು?

1 Min Read

ಒಬ್ಬಂಟಿಯಾದ ಸಿದ್ದರಾಮಯ್ಯ: ಸಿಎಂ ಡಿಕೆ ಎದುರಾದರೂ ಮಾತಿಲ್ಲ! ವಿಡಿಯೋ ನೋಡಿ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

ಆರತಿ ತಟ್ಟೆಗೆ ಹಣ ಹಾಕುವುದೇಕೆ? ಇದರ ಹಿಂದಿರುವ ವೈಜ್ಞಾನಿಕ ಕಾರಣಗಳೇನು?

2 Min Read
ದೇಶಪ್ರಮುಖ

Tamilnadu BJP ತಮಿಳುನಾಡು ಬಿಜೆಪಿಗೆ ತೀವ್ರ ಆಘಾತ: ಇಬ್ಬರು ಮುಖಂಡರ ಎಕ್ಸಿಟ್ ಬೆನ್ನಲ್ಲೇ ಕಾರ್ಯದರ್ಶಿ ಸುಮತಿ ವೆಂಕಟೇಶ್ ರಾಜೀನಾಮೆ!

1 Min Read
ಪ್ರಮುಖಆರೋಗ್ಯ

Jamun Fruit ನೇರಳೆ ಹಣ್ಣಿನ ಆರೋಗ್ಯ ಗುಣಗಳು; ರುಚಿಯ ಜೊತೆಗೆ ಆರೋಗ್ಯದ ಖಜಾನೆ

2 Min Read
ಕರ್ನಾಟಕದೇಶಪ್ರಮುಖ

Porfolio issue ಖಾತೆ ಕ್ಯಾತೆಗೆ ತೇಪೆ: ಫಲಿಸಿತು ಸಿಎಂ ಡಿಕೆ ತಡರಾತ್ರಿಯ ಸಂಧಾನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?