newsics.com
ಪಾಕಿಸ್ತಾನಿ ನಟಿ ಹುಮೈರಾ ಅಸ್ಗರ್ ಸಾವಿನ ಪ್ರಕರಣದಲ್ಲಿ ದೊಡ್ಡ ತಿರುವು ಸಿಕ್ಕಿದ್ದು, ಈ ವಾರ ಅವರ ಕರಾಚಿಯ ಅಪಾರ್ಟ್‌ಮೆಂಟ್‌ನಲ್ಲಿ ಅವರ ಶವ ಪತ್ತೆಯಾಗಿದ್ದರೂ, ಅವರು ಸುಮಾರು ಒಂಬತ್ತು ತಿಂಗಳ ಹಿಂದೆ ನಿಧನರಾದರು ಎಂದು ವರದಿಯಾಗಿದೆ.
ಆದ್ದರಿಂದ, ಈ ವಾರದ ಆರಂಭದಲ್ಲಿ ಆಕೆಯ ದೇಹವು ಕೊಳೆಯುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವರದಿಯ ಪ್ರಕಾರ, ನಟಿಯ ಮರಣೋತ್ತರ ಪರೀಕ್ಷೆ ನಡೆಸಿದ ಕರಾಚಿ ಪೊಲೀಸ್ ಶಸ್ತ್ರಚಿಕಿತ್ಸಕ ಡಾ. ಸುಮ್ಮಯ್ಯ ಸೈಯದ್ ಕೂಡ ಇದನ್ನು ದೃಢಪಡಿಸಿದ್ದಾರೆ.
ಕರಾಚಿಯ ಅಪಾರ್ಟ್ಮೆಂಟ್ನಲ್ಲಿದ್ದ ಹುಮೈರ ಅಸ್ಗರ್ ಅಲಿ ಮೃತದೇಹ ಅಡ್ವಾನ್ಸ್ ಸ್ಟೇಜ್ನಲ್ಲಿದ್ದ ಕೊಳೆತ ಸ್ಥಿತಿಯಲ್ಲಿತ್ತು ಎಂದು ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯ ಸುಮಯಾ ಸೈಯದ್ ಹೇಳಿದ್ದಾರೆ. ಅವರು 9 ತಿಂಗಳ ಹಿಂದೆಯೇ ಜೀವಬಿಟ್ಟಿದ್ದಾರೆ ಎಂದು ಕರಾಚಿ ಪೊಲೀಸರು ಹೇಳಿದ್ದಾರೆ. ಹುಮೈರ ಅಸ್ಗರ್ ಅಲಿ, ಪೋನ್ ಕಾಲ್ ಡೀಟೈಲ್ಸ್ ರೆಕಾರ್ಡ್ ಪ್ರಕಾರ, ಹುಮೈರ ಅಸ್ಗರ್ ಅಲಿ, ಕೊನೆಯದಾಗಿ 2024ರ ಆಕ್ಟೋಬರ್ನಲ್ಲಿ ಕಾಲ್ ಮಾಡಿದ್ದಾರೆ. ಆಕೆಯ ನೆರೆಹೊರೆಯವರು ಕೂಡ ಕಳೆದ ವರ್ಷದ ಆಕ್ಟೋಬರ್ನಲ್ಲಿ ಆಕೆಯನ್ನು ಕೊನೆಯದಾಗಿ ನೋಡಿದ್ದಾರೆ. ಇನ್ನೂ ಅಪಾರ್ಟ್ ಮೆಂಟ್ ಪ್ಲ್ಯಾಟ್‌ಗೆ ಕಳೆದ ವರ್ಷದ ಆಕ್ಟೋಬರ್ನಲ್ಲೇ ವಿದ್ಯುತ್ ಸಂಪರ್ಕವನ್ನು ತೆಗೆದು ಹಾಕಲಾಗಿದೆ.
ವಿದ್ಯುತ್ ಬಿಲ್ ಕಟ್ಟದೇ ಇದ್ದಿದ್ದರಿಂದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ಪ್ಲ್ಯಾಟ್‌ಗೆ ಬೇರೆ ಯಾವುದೇ ಪರ್ಯಾಯ ವಿದ್ಯುತ್ ಸಂಪರ್ಕವೂ ಇಲ್ಲ. ಪ್ಲ್ಯಾಟ್ನಲ್ಲಿ ಯಾವುದೇ ಕ್ಯಾಂಡಲ್ ಕೂಡ ಇಲ್ಲ. ಹೀಗಾಗಿ ಕಳೆದ ವರ್ಷದ ಆಕ್ಟೋಬರ್ನಲ್ಲೇ ನಟಿ ಉಸಿರು ಚೆಲ್ಲಿದ್ದಾರೆ ಎಂಬ ತೀರ್ಮಾನಕ್ಕೆ ಪಾಕಿಸ್ತಾನ ಕರಾಚಿ ಪೊಲೀಸರು ಬಂದಿದ್ದಾರೆ.
ಹುಮೈರ ಅಸ್ಗರ್ ಅಲಿಯ ಮನೆಯ ಫುಡ್ ಕೂಡ ಕಳೆದ ಕೆಲವು ತಿಂಗಳ ಹಿಂದೆಯೇ ಎಕ್ಸ್ ಪೈರ್ ಆಗಿದೆ. ಅಡುಗೆ ಜಾರ್ ತುಕ್ಕು ಹಿಡಿದಿದೆ. ಫುಡ್ 6 ತಿಂಗಳ ಹಿಂದೆಯೇ ಎಕ್ಸ್ ಫೈರ್ ಆಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
https://www.newsics.com/2025/07/11/children-paraded-holding-a-15-foot-long-python/