newsics.com
ನವದೆಹಲಿ: ದೇಶಾದ್ಯಂತ ಬ್ಯಾಂಕಿಂಗ್, ವಿಮೆ, ಕಲ್ಲಿದ್ದಲು ಗಣಿಗಾರಿಕೆ, ಹೆದ್ದಾರಿಗಳು, ನಿರ್ಮಾಣ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವ 25 ಕೋಟಿಗೂ ಹೆಚ್ಚು ಉದ್ಯೋಗಿಗಳು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಹೂಡಿದ್ದು, ಇದರ ಭಾಗವಾಗಿ ಬುಧವಾರ (ಜು.9) ಭಾರತ್ ಬಂದ್‌ಗೆ ಕರೆ ನೀಡಲಾಗಿದೆ.
ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ ಮತ್ತು ರಾಷ್ಟ್ರ ವಿರೋಧಿ ನೀತಿಗಳನ್ನು ವಿರೋಧಿಸಿ 10 ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಅವುಗಳ ಸಂಯೋಜಿತ ಘಟಕಗಳ ವೇದಿಕೆಯಿಂದ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಇಂದು ಏನಿರತ್ತೆ? ಏನಿರಲ್ಲ?
ಭಾರತ್ ಬಂದ್ ಸಮಯದಲ್ಲಿ ಮುನ್ನೆಚ್ಚರಿಕೆಯಾಗಿ ಅನೇಕ ಸೇವೆಗಳೂ ಬಂದ್ ಆಗಲಿವೆ.
ಏನಿರಲ್ಲ?
ಇಂದು ರಾಷ್ಟ್ರವ್ಯಾಪಿ ಎಲ್ಲಾ ಬ್ಯಾಂಕ್‌ಗಳು ಮುಚ್ಚುವ ಸಾಧ್ಯತೆ ಇದೆ. ಇದರಿಂದಾಗಿ ನಿಮ್ಮ ದಿನಿತ್ಯದ ಬ್ಯಾಕಿಂಗ್ ಕೆಲಸಗಳಿಗೆ ಸಮಸ್ಯೆ ಆಗಬಹುದು. ಹಣಕಾಸು ಚಟುವಟಿಕೆಗಳು ಸ್ಥಗಿತಗೊಳ್ಳಬಹುದು. ಇದರ ಜತೆಗೆ ಅಂಚೆ ಕಚೇರಿಗಳು, ಕಲ್ಲಿದ್ದಲು ಗಣಿಗಾರಿಕೆ ಘಟಕಗಳು ಮುಚ್ಚಲ್ಪಡಬಹುದು. ಸಂಚಾರದಲ್ಲಿ ಅದರಲ್ಲಿಯೂ ಸರ್ಕಾರಿ ಸಾರಿಗೆ ಹಾಗೂ ಖಾಸಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಯಾವ ರೀತಿ ಬದಲಾವಣೆ ಆಗಲಿದೆ ಎಂದು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಏನಾದರೂ ಈ ಬಂದ್ ತೀವ್ರವಾದರೆ ಆಗ ಮುನ್ನೆಚ್ಚರಿಕೆಯಾಗಿ ಸಾರಿಗೆ ವ್ಯವಸ್ಥೆ ಸಹ ಬಂದ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ್ ಬಂದ್ ಸಮಯದಲ್ಲಿ ಜನಸಾಮಾನ್ಯರಿಗೆ ಪ್ರಮುಖವಾಗಿ ಬೇಕಾಗಿರುವಂತಹ ರೈಲ್ವೆ, ಆರೋಗ್ಯ ಮತ್ತು ತುರ್ತು ಸೇವೆಗಳಂತಹ ಅಗತ್ಯ ಸೇವೆಗಳಿಗೆ ಈ ಮುಷ್ಕರದಿಂದ ವಿನಾಯಿತಿ ನೀಡಲಾಗಿದೆ. ಹಾಲು, ಔಷಧಗಳ ಜತೆ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಕರ್ನಾಟಕದಲ್ಲಿ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಕೆಲವು ರಾಜ್ಯಗಳಲ್ಲಿ ರಜೆ ಘೋಷಿಸಲಾಗಿದೆ.
ಈ ಬಂದ್‌ನಿಂದ ಬ್ಯಾಂಕ್ ವಹಿವಾಟು ಕಷ್ಟವಾದರೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಾದ UPI ಮತ್ತು ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯನಿರ್ವಹಿಸಲಿವೆ.
25 ಕೋಟಿಗೂ ಹೆಚ್ಚು ಜನರು ಭಾಗಿ ನಿರೀಕ್ಷೆ:
ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಮರ್‌ಜಿತ್ ಕೌರ್ ಪ್ರಕಾರ, ಈ ಮುಷ್ಕರದಲ್ಲಿ 25 ಕೋಟಿಗೂ ಹೆಚ್ಚು ಉದ್ಯೋಗಿಗಳು ಭಾಗವಹಿಸುವ ನಿರೀಕ್ಷೆಯಿದೆ. ರೈತರು ಮತ್ತು ಗ್ರಾಮೀಣ ಕಾರ್ಮಿಕರು ಸಹ ಈ ಪ್ರತಿಭಟನೆಯನ್ನು ಬೆಂಬಲಿಸಲಿದ್ದಾರೆ. ಎನ್‌ಎಂಡಿಸಿ ಲಿಮಿಟೆಡ್, ಇತರ ಖನಿಜ, ಉಕ್ಕು ಕಂಪನಿಗಳು, ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರು ಸಹ ಮುಷ್ಕರದಲ್ಲಿ ಭಾಗವಹಿಸುವುದಾಗಿ ವರದಿಯಾಗಿದೆ. ಯುನೈಟೆಡ್ ಕಿಸಾನ್ ಮೋರ್ಚಾ ಮತ್ತು ಕೃಷಿ ಕಾರ್ಮಿಕರ ಸಂಘಟನೆಗಳು ಸಹ ಮುಷ್ಕರವನ್ನು ಬೆಂಬಲಿಸಿವೆ.
Indian nurse Nimisha Priya sentenced to death ಜುಲೈ 16ರಂದು ಭಾರತೀಯ ನರ್ಸ್ ನಿಮಿಷಾ ಪ್ರಿಯಾಗೆ ಮರಣದಂಡನೆ
Terror news ಉಗ್ರ ಕೃತ್ಯಕ್ಕೆ ಸಂಚು: ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ASI ಸೇರಿ ಮೂವರ ಬಂಧನ, NIA ಹೇಳಿದ್ದೇನು?