newsics.com
ಕಳೆದ ಕೆಲವು ತಿಂಗಳ ಹಿಂದೆ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಸಂಬಂಧದ ಬಗ್ಗೆ ಅನೇಕ ವದಂತಿಗಳು ಹರಡಿದ್ದವು.ಇದೇ ಮೊದಲ ಬಾರಿಗೆ ಅಭಿಷೇಕ್ ಬಚ್ಚನ್ ಈ ವದಂತಿಗಳ ಕಾರುಬಾರು, ಸೋಷಿಯಲ್ ಮೀಡಿಯಾ ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸುಳ್ಳು ಸುದ್ದಿಗಳು ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ಹೇಗೆ ನೆಗೆಟಿವ್ ಪರಿಣಾಮ ಬೀರುತ್ತವೆ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ. ವದಂತಿಗಳಿಗೆ ಗಮನ ಕೊಡುವುದನ್ನು ನಿಲ್ಲಿಸಿದ್ದೇನೆ ಎಂದು ನಟ ಒಪ್ಪಿಕೊಂಡರು.ಸೋಷಿಯಲ್ ಮೀಡಿಯಾದಲ್ಲಿ ಹರಡುವ ನೆಗೆಟಿವಿಟಿ ಬಗ್ಗೆ ಪ್ರತಿಕ್ರಿಯಿಸುವುದರಿಂದ ಯಾವುದೇ ಉದ್ದೇಶ ಈಡೇರಲ್ಲ. ಪ್ರತಿಕ್ರಿಯಿಸುವುದರಿಂದ ಮತ್ತಷ್ಟು ತಪ್ಪು ಮಾಹಿತಿ ಹರಡಲ್ಲ ಪುಷ್ಟಿ ತುಂಬಿದಂತಾಗುತ್ತೆ. ಆಧಾರದವಿಲ್ಲದ ಅಂಶಗಳಿಗೆ ಹೆಚ್ಚು ಒತ್ತು ನೀಡುವ ಬದಲು ನಮ್ಮ ಕೆಲಸ, ನಮ್ಮ ವೈಯಕ್ತಿಕ ಜೀವನದ ಬಗ್ಗೆ ಒತ್ತು ನೀಡುವುದು ಮುಖ್ಯ ಎಂದು ನಟ ಅಭಿಷೇಕ್ ಬಚ್ಚನ್ ಹೇಳಿದ್ದಾರೆ.
ಅಭಿಷೇಕ್ ಬಚ್ಚನ್ ತನ್ನ ಮನಸ್ಸಿನಲ್ಲಿ ಸಿಲುಕಿಕೊಂಡ ಘಟನೆಯ ಬಗ್ಗೆಯೂ ಮಾತನಾಡಿದರು. ವಾಸ್ತವವಾಗಿ, ಅಭಿಷೇಕ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಒಂದಕ್ಕೆ ಟ್ರೋಲ್ ಒಬ್ಬರು ಕೆಟ್ಟ ಕಾಮೆಂಟ್ ಮಾಡಿದ್ದರು. ಇದರಿಂದಾಗಿ ಅವರ ಸ್ನೇಹಿತ ಸಿಕಂದರ್ ಖೇರ್ ತುಂಬಾ ಕೋಪಗೊಂಡರು. ನಂತರ ಸಿಕಂದರ್ ತಮ್ಮ ವಿಳಾಸವನ್ನು ಶೇರ್ ಮಾಡಿ ಟ್ರೋಲ್ ಮಾಡೋರು ಅವರನ್ನು ಎದುರಿಸುವಂತೆ ಸವಾಲು ಹಾಕಿದರು. ಈ ಘಟನೆಯನ್ನು ಕೂಡಾ ಅಭಿಷೇಕ್ ನೆನಪಿಸಿಕೊಂಡರು.