newsics.com
ಅಹಮದಾಬಾದ್: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ವಿಚಾರಣೆ ವೇಳೆ ವ್ಯಕ್ತಿಯೊಬ್ಬ ಟಾಯ್ಲೆಟ್‌ನಲ್ಲಿ ಕುಳಿತು ಕೋರ್ಟ್‌ನ ವಿಡಿಯೋ ಕಾನ್ಫರೆನ್ಸ್ ವಿಚಾರಣೆಗೆ ಹಾಜರಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಮದ್ ಬ್ಯಾಟರಿ ಎಂಬ ಯೂಸರ್ ನೇಮ್‌ನಲ್ಲಿ ಝೂಮ್‌ನಲ್ಲಿ ಲಾಗಿನ್ ಆಗಿದ್ದ ವ್ಯಕ್ತಿ ಜಸ್ಟೀಸ್ ನಿರ್ಜರ್ ಎಸ್.ದೇಸಾಯಿ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದ.
ಆದರೆ ವಿಡಿಯೋದಲ್ಲಿ ಈ ವ್ಯಕ್ತಿ ಟಾಯ್ಲೆಟ್ ಸೀಟ್‌ನಲ್ಲಿ ಕುಳಿತು, ಕಿವಿಗೆ ಇಯರ್ ಫೋನ್ ಹಾಕಿಕೊಂಡಿರುವುದು ಸೆರೆಯಾಗಿದೆ. ಅಷ್ಟೇ ಅಲ್ಲ, ತನ್ನ ಫೋನ್ ಅನ್ನು ವೈಡ್ ಆಂಗಲ್ ವೀವ್‌ನಲ್ಲಿ ಕಾಣಿಸುವಂತೆ ಇಟ್ಟಿರುವುದರಿಂದ ಈತ ಟಾಯ್ಲೆಟ್‌ನಲ್ಲಿ ಕುಳಿತಿರುವುದು ಬಹಿರಂಗವಾಗಿತ್ತು.
ನ್ಯಾಯಾಲಯವು ಸಮದ್ ಕುರಿತ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿತ್ತು. ಈತ ಕ್ರಿಮಿನಲ್ ಆರೋಪಿಯಾಗಿದ್ದು, ತನ್ನ ವಿರುದ್ಧದ ಎಫ್ ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಪ್ರತಿವಾದಿಯಾಗಿ ವಿಚಾರಣೆಗೆ ಹಾಜರಾಗಿದ್ದ ಎಂದು ವರದಿಯಾಗಿದೆ.
https://twitter.com/i/status/1938507921861628098
Online Food Order ಜೆಪ್ಟೋ ಅಪ್ಲಿಕೇಶನ್ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಈ ಸ್ಟೋರಿ ಓದಿ
Trend Reels ನೀರಿನಲ್ಲಿ ಅರಶಿನ ಟ್ರೆಂಡ್ ರೀಲ್ಸ್ ಮಾಡ್ತಿದ್ದೀರಾ ಹುಷಾರ್
Kubera Film ಕುಬೇರ ಚಿತ್ರ ಪ್ರದರ್ಶನದ ವೇಳೆ ಕುಸಿದು ಬಿದ್ದ ಸೀಲಿಂಗ್ : ಹಲವರಿಗೆ ಗಾಯ
ಇನ್ಮುಂದೆ ವಾಹನ ಚಾಲನೆ ಮಾಡುವಾಗ ಈ ದಾಖಲೆಗಳನ್ನ ಇಟ್ಟುಕೊಳ್ಳುವುದು ಕಡ್ಡಾಯ.!