newsics.com
ವಿದ್ಯುತ್ ತಂತಿ ತಗುಲಿ ಆನೆಯೊಂದು ಮೃತಪಟ್ಟಿರುವ ಘಟನೆ ಇಂದು ಜೋಯಿಡಾ ತಾಲೂಕಿನ ಕುಳಗಿ ಸಂರಕ್ಸಿತಾರಣ್ಯ ದಲ್ಲಿ ನಡೆದಿದೆ.
ಸುಮಾರು 15 ವರ್ಷದ ಹೆಣ್ಣಾನೆ ಇದಾಗಿದ್ದು ಸಾಗವಾನಿ ಗಿಡಕ್ಕೆ ಮೈ ತಿಕ್ಕಿ ಕೊಳ್ಳುತ್ತಿರುವಾಗ ಗಿಡ ಬಗ್ಗಿ ಮುಖ್ಯ ವಿದ್ಯುತ್ ಲೈನ್ ಗೆ ತಗುಲಿ ಆನೆ ಮೃತ ಪಟ್ಟಿದ್ದು, ಕಾಳಿ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕ ನಿಲೇಶ್ ಶಿಂದೆ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ ಎಸ್ ಕಳ್ಳಿಮಠ್ ಅವರ ಮಾರ್ಗದರ್ಶನ ದಲ್ಲಿ ಮುಂದಿನ ಕ್ರಮ ಕೈಗೊಂಡಿದ್ದಾರೆ.