newsics.com
ಡೆಹ್ರಾಡೂನ್: ಕೇದಾರನಾಥ ಮಾರ್ಗದಲ್ಲಿ ಜಗಲ್ ಚಟ್ಟಿ ಘಾಟ್ ಬಳಿ ಬೆಳಿಗ್ಗೆ ಭೂಕುಸಿತ ಸಂಭವಿಸಿದ್ದು, ಬಂಡೆಗಳ ಅಡಿಯಲ್ಲಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಲ್ಲಕ್ಕಿಯಲ್ಲಿ ಯಾತ್ರಿಕರನ್ನು ಕೊಂಡೊಯ್ಯುತ್ತಿದ್ದ ಇಬ್ಬರು ಸಾವನ್ನಪ್ಪಿದದರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ರುದ್ರಪ್ರಯಾಗ್ ಎಸ್ ಪಿ ಅಕ್ಷಯ್ ಪ್ರಹ್ಲಾದ್ ತಿಳಿಸಿದ್ದಾರೆ.
ಪೊಲೀಸರು ಹಾಗೂ ಎಸ್ ಡಿ ಆರ್ ಎಫ್ ತಂಡದಿಂದ ಕಮರಿಗೆ ಬಿದ್ದಿರುವ ಗಾಯಾಳುಗಳನ್ನು ಮೇಲಕೆತ್ತುವ ರಕ್ಷಣಾ ಕಾರ್ಯಾಚರಣೆ ನಡೆದಿದೆ.