Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Israel destroys Iranian news channel ಹೆಚ್ಚಾಯ್ತು ಸಮರ ಆತಂಕ: ಇಸ್ರೇಲ್‌ನಿಂದ ಇರಾನ್ ನ್ಯೂಸ್ ಚಾನಲ್ ಧ್ವಂಸ, ಓಡಿ ಬಚಾವಾದ ನಿರೂಪಕಿ, ವಿಡಿಯೋ ನೋಡಿ
ಪ್ರಮುಖವಿದೇಶವೈರಲ್

Israel destroys Iranian news channel ಹೆಚ್ಚಾಯ್ತು ಸಮರ ಆತಂಕ: ಇಸ್ರೇಲ್‌ನಿಂದ ಇರಾನ್ ನ್ಯೂಸ್ ಚಾನಲ್ ಧ್ವಂಸ, ಓಡಿ ಬಚಾವಾದ ನಿರೂಪಕಿ, ವಿಡಿಯೋ ನೋಡಿ

Share
2 Min Read
SHARE

newsics.com

ಟೆಹ್ರಾನ್: ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಎರಡೂ ದೇಶಗಳ ನಡುವೆ ಸತತ 4ನೇ ದಿನವೂ ಕ್ಷಿಪಣಿ ದಾಳಿ ಮುಂದುವರಿದಿದ್ದು, ಸೋಮವಾರ ಇರಾನ್‌ನ ಫೋರ್ಡೋ ಪರಮಾಣು ಸ್ಥಾವರದ ಬಳಿ ಭಾರೀ ಸ್ಫೋಟದ ಸದ್ದು ಕೇಳಿಸಿದೆ.

ಇದರ ಪರಿಣಾಮ ಆ ಪ್ರದೇಶದಲ್ಲಿ ಕಂಪನ ಅನುಭವವಾಗಿದೆ. ಜತೆಗೆ ಇಸ್ರೇಲಿ ಪಡೆಗಳು ಇರಾನ್‌ನ ಐಆರ್‌ಐಬಿ (Islamic Republic of Iran Broadcasting) ನಿರ್ವಹಿಸುವ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ್ಯೂಸ್ ನೆಟ್‌ವರ್ಕ್(IRINN)ನ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿ, ನೇರ ಪ್ರಸಾರವನ್ನು ಸ್ಥಗಿತಗೊಳಿಸಿವೆ ಎಂದು ವರದಿಯಾಗಿದೆ. ನಿರೂಪಕಿ ಸ್ಟುಡಿಯೊದ ಒಳಗೆ ವಾರ್ತೆ ಓದುತ್ತಿರುವಾಗಲೇ ಸ್ಫೋಟ ಸಂಭವಿಸಿದೆ. ನಿರೂಪಕಿ ತಕ್ಷಣ ಮಾತು ನಿಲ್ಲಿಸಿ ಪಾರಾದ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇರಾನಿನ ಪ್ರಚಾರ ಮತ್ತು ಪ್ರಚೋದನೆಯ ಮುಖವಾಣಿ ಕಣ್ಮರೆಯಾಗುವ ಹಾದಿಯಲ್ಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಇಸ್ರೇಲ್‌ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ್ಯೂಸ್ ನೆಟ್‌ವರ್ಕ್ ಚಾನಲ್‌ ಅನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ನಿರೂಪಕಿಯೊಬ್ಬರು ನೇರ ಪ್ರಸಾರದಲ್ಲಿ ಇಸ್ರೇಲ್ ನಡೆಯನ್ನು ಟೀಕಿಸುತ್ತಿದ್ದಾಗಲೇ ಭಾರೀ ಶಬ್ದದೊಂದಿಗೆ ಸ್ಫೋಟ ಸಂಭವಿಸಿದೆ ಎಂದು ಇರಾನ್‌ನ ಮಾಧ್ಯಮಗಳು ತಿಳಿಸಿವೆ. ಸ್ಫೋಟದ ಬಳಿಕ ನಿರೂಪಕಿ ನಿರ್ಗಮಿಸುವುದು ವಿಡಿಯೊದಲ್ಲಿ ಕಂಡುಬಂದಿದೆ. ಸ್ಫೋಟದ ಬಳಿಕ ಸ್ಟುಡಿಯೋ ಧೂಳಿನಿಂದ ತುಂಬಿತ್ತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಈ ದಾಳಿಯ ಕೇವಲ ಒಂದು ಗಂಟೆ ಮೊದಲು ಟೆಹ್ರಾನ್‌ನ ಟಿವಿ ಸ್ಟುಡಿಯೋಗಳು ನೆಲೆಗೊಂಡಿರುವ ಭಾಗವನ್ನು ಸ್ಥಳಾಂತರಿಸಲು ಇಸ್ರೇಲ್ ಎಚ್ಚರಿಕೆ ನೀಡಿತ್ತು.

ಇತ್ತ ಇಸ್ರೇಲ್‌ ಮೇಲೆ ಇರಾನ್‌ ಕೂಡ ಪ್ರತಿದಾಳಿ ನಡೆಸಿದೆ. ಸೋಮವಾರ ಇರಾನ್‌ ಮಿಸೈಲ್‌ ದಾಳಿ ನಡೆಸಿದ್ದು, ಇಸ್ರೇಲ್‌ನಲ್ಲಿ ಕನಿಷ್ಠ 8 ಮಂದಿ ಅಸುನೀಗಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಇನ್ನಷ್ಟು ದಾಳಿಯ ಎಚ್ಚರಿಕೆ ನೀಡಿದೆ.

ಇರಾನ್ ಪ್ರಕಾರ ಜೂನ್ 13ರಂದು ಇಸ್ರೇಲ್ ದಾಳಿ ಆರಂಭಿಸಿದಾಗಿನಿಂದ ಒಟ್ಟು 224 ಜನರು ಸಾವನ್ನಪ್ಪಿದ್ದಾರೆ. ಇನ್ನು ಇರಾನ್‌ ದಾಳಿಯಿಂದ ತಮ್ಮ ದೇಶದ 24 ಜನರು ಸಾವನ್ನಪ್ಪಿದ್ದಾರೆ ಮತ್ತು 400 ಜನರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್ ಹೇಳಿದೆ.

ಇಸ್ರೇಲ್ ಅನಿರೀಕ್ಷಿತ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಇರಾನ್‌ನ ಮಿಲಿಟರಿ ಮತ್ತು ಪರಮಾಣು ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಉಲ್ಬಣಗೊಂಡಿದೆ.

ಭಾರತ ಸರ್ಕಾರ ಎರಡೂ ದೇಶಗಳಲ್ಲಿನ ಭಾರತೀಯರಿಗೆ ಎಚ್ಚರಿಕೆ ಸಂದೇಶ ನೀಡಿದೆ. ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಸಿದೆ.

https://twitter.com/i/status/1934629208744960404

Judge dies ಹೃದಯಾಘಾತದಿಂದ ಕಲಬುರಗಿ ಕೋರ್ಟ್‌ನಲ್ಲೇ ನ್ಯಾಯಾಧೀಶರ ಸಾವು

Women’s World Cup 2025: ಮಹಿಳಾ ವಿಶ್ವಕಪ್​ ಟೂರ್ನಿ 2025 ವೇಳಾಪಟ್ಟಿ ರಿಲೀಸ್ -ಬೆಂಗಳೂರಲ್ಲಿ ನಡೆಯಲಿವೆ ಉದ್ಘಾಟನಾ, ಸೆಮಿಸ್​, ಫೈನಲ್​ ಪಂದ್ಯ

TAGGED:War fears increase: Israel destroys Iranian news channel
Share This Article
Facebook Twitter Copy Link Print
Previous Article Judge dies ಹೃದಯಾಘಾತದಿಂದ ಕಲಬುರಗಿ ಕೋರ್ಟ್‌ನಲ್ಲೇ ನ್ಯಾಯಾಧೀಶರ ಸಾವು
Next Article Mangaluru: ತಂದೆ ಸೇದಿ ಎಸೆದ ಬೀಡಿ ನುಂಗಿ 10 ತಿಂಗಳ ಮಗು ಸಾವು

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?