2025 ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಉದ್ಘಾಟನಾ ಪಂದ್ಯ, 2ನೇ ಸೆಮಿಸ್ ಹಾಗೂ ಫೈನಲ್ ಪಂದ್ಯಗಳು ಬೆಂಗಳೂರಲ್ಲಿ ನಡೆಯಲಿವೆ.
ಮಹಿಳಾ ವಿಶ್ವಕಪ್ ಪಂದ್ಯಗಳು ಸೆಪ್ಟೆಂಬರ್ 30 ರಿಂದ ನವೆಂಬರ್ 2 ರವವರೆಗೆ ನಡೆಯಲಿದೆ. ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಸೆಣಸಾಟ ನಡೆಸಲಿವೆ. ಇಲ್ಲಿ ಹೈಬ್ರಿಡ್ ಮಾದರಿ ಅನುಸರಿಸಲಾಗುತ್ತಿದೆ. ಭಾರತ ಹಾಗೂ ಶ್ರೀಲಂಕಾ ಸೇರಿ ಒಟ್ಟು 5 ಸ್ಥಳಗಳಲ್ಲಿ ಈ ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 30ಕ್ಕೆ 2ನೇ ಸೆಮಿಫೈನಲ್ ಬೆಂಗಳೂರಲ್ಲಿ ನಡೆಯಲಿದೆ. ಸೆಮಿಫೈನಲ್ ಪಂದ್ಯ ಮುಗಿದ ಮೂರು ದಿನಗಳ ಬಳಿಕ ಅಂದರೆ ನವೆಂಬರ್ 2 ರಂದು ಫೈನಲ್ ಪಂದ್ಯ ನಡೆಯಲಿದೆ.
ಭಾರತ- ಪಾಕಿಸ್ತಾನದ ನಡುವಿನ ಮೊದಲ ಪಂದ್ಯ ಅಕ್ಟೋಬರ್ 5 ರಂದು ಕೊಲಂಬೊದಲ್ಲಿ ನಡೆಯಲಿದೆ. ಈ ಬಾರಿ ಮೊದಲ ಪಂದ್ಯವನ್ನು ಅಕ್ಟೋಬರ್ 1 ರಂದು ನ್ಯೂಜಿಲೆಂಡ್ ಜೊತೆ ಆಡಲಿದೆ. ಹೈಬ್ರಿಡ್ ಮಾದರಿ ಅನುಸರಿಸುತ್ತಿದ್ದರಿಂದ ಪಾಕಿಸ್ತಾನ ಸೆಮಿಸ್ ಹಾಗೂ ಫೈನಲ್ಗೆ ಬಂದರೆ ಈ ಪಂದ್ಯಗಳನ್ನು ಕೊಲಂಬೊದಲ್ಲಿ ನಡೆಸಲಾಗುತ್ತದೆ.