Judge dies ಹೃದಯಾಘಾತದಿಂದ ಕಲಬುರಗಿ ಕೋರ್ಟ್‌ನಲ್ಲೇ ನ್ಯಾಯಾಧೀಶರ ಸಾವು

newsics.com ಕಲಬುರಗಿ: ಕೋರ್ಟ್ ಹಾಲ್‌ಗೆ ತೆರಳುವ ಕೆಲವೇ ನಿಮಿಷಗಳಿಗೂ ಮುನ್ನ ಹೃದಯಾಘಾತದಿಂದ ಹಿರಿಯ ನ್ಯಾಯಾಧೀಶರು ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ಸೋಮವಾರ ನಡೆದಿದೆ. ಕಲಬುರಗಿ ಜಿಲ್ಲಾ 3ನೇ ಹಿರಿಯ ಶ್ರೇಣಿ ನ್ಯಾಯಾಧೀಶರಾದ ವಿಶ್ವನಾಥ್ ವಿ. ಮೂಗತಿ (44) ಮೃತಪಟ್ಟವರು. ಕಳೆದ ವಾರವೇ ಕಲಬುರಗಿ ಕೋರ್ಟ್‌ಗೆ ವಿಶ್ವನಾಥ ಅವರು ವರ್ಗಾವಣೆಯಾಗಿದ್ದರು. ಸೋಮವಾರ ಬೆಳಗ್ಗೆ ಎಂದಿನಂತೆ ಕೋರ್ಟ್‌ಗೆ ಬಂದಿದ್ದರು. ಆದರೆ, ಕೋರ್ಟ್ ಹಾಲ್‌ಗೆ ಬರುವುದಕ್ಕಿಂತ ಮುಂಚೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆ … Continue reading Judge dies ಹೃದಯಾಘಾತದಿಂದ ಕಲಬುರಗಿ ಕೋರ್ಟ್‌ನಲ್ಲೇ ನ್ಯಾಯಾಧೀಶರ ಸಾವು