newsics.com
ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯಲ್ಲಿ ಜಾಸ್ಮಿನ್ ಸೋಪುಗಳ ತಯಾರಿಕೆಯೂ ಆರಂಭವಾಗಿದೆ ಎಂದು ಕೈಗಾರಿಕೆ
ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕೆ, ಮೂಲಸೌಕರ್ಯ ಇಲಾಖೆಯ 2 ವರ್ಷಗಳ ಸಾಧನೆ ವಿವರ ಹಂಚಿಕೊಂಡರು. ₹6.57 ಲಕ್ಷ ಕೋಟಿ ಹೂಡಿಕೆಗೆ 115 ಒಪ್ಪಂದ ಮಾಡಲಾಗಿದ್ದು, ಇದರಿಂದ 2.32 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ವಿವರಿಸಿದರು.
ನಮ್ಮಲ್ಲಿ ಸ್ಯಾಂಡಲ್ ಸೋಪ್‌ಗೆ ಹೆಚ್ಚಿನ ಮಾರುಕಟ್ಟೆ ಇದೆ. ಅದೇ ರೀತಿ ವಿದೇಶಗಳಲ್ಲಿ ಅದರಲ್ಲೂ ದುಬೈನಂತಹ ರಾಷ್ಟ್ರಗಳಲ್ಲಿ ಜಾಸ್ಮಿನ್ ಸೋಪ್‌ಗೆ ಹೆಚ್ಚಿನ ಮಾರುಕಟ್ಟೆ ಮತ್ತು ಬೇಡಿಕೆ ಇದೆ. ಇದನ್ನು ಮನಗಂಡ ಎಂಎಸ್‌ಡಿಎಲ್, ಈ ಸೋಪುಗಳ ಉತ್ಪಾದನೆಗೆ ಮುಂದಾಗಿದೆ ಎಂದರು.
ಜಾಸ್ಮಿನ್ ಎಣ್ಣೆಗೆ ಒಂದು ಕೆಜಿಗೆ 1.80 ಲಕ್ಷ ರೂಪಾಯಿ ಇದೆ. ಹೀಗಾಗಿ ಅದರ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೇವೆ ಎಂದು ಸಚಿವರು ವಿವರಿಸಿದರು.
ಕಳೆದೆರಡು ವರ್ಷಗಳಿಂದ ಕೆಎಸ್ ಡಿ ಎಲ್ ಲಾಭ ಕಾಣುತ್ತಿದ್ದು, ಇದನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
Air India plane crash ಅಹಮದಾಬಾದ್ ವಿಮಾನ ದುರಂತ: ಮೃತರ ಸಂಖ್ಯೆ 274ಕ್ಕೆ ಏರಿಕೆ
Rain alert Karnataka : ಇನ್ನೂ 2-3 ದಿನ ಭಾರೀ ಮಳೆ : ಈ ಜಿಲ್ಲೆಗಳಿಗೆ `ರೆಡ್ ಅಲರ್ಟ್
Bhagavad Gita safe ಜನರ ಸಾವಿಗೆ ಕಾರಣವಾದ ವಿಮಾನ ದುರಂತದಲ್ಲಿ ಭಗವದ್ಗೀತೆ ಸುರಕ್ಷಿತ! ವಿಡಿಯೋ ನೋಡಿ