newsics.com
ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ಪ್ರಯಾಣ ಆರಂಭಿಸಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಪತನಗೊಂಡ ಆಘಾತಕಾರಿ ಘಟನೆ ನಡೆದಿದೆ.
ಹಲವಾರು ಕನಸುಗಳನ್ನು, ತಮ್ಮವರನ್ನು ಭೇಟಿಯಾಗುವ ಆಸೆಯನ್ನು ಹೊತ್ತು ಬಾನೆತ್ತರದಲ್ಲಿ ಹಾರುತ್ತಿದ್ದ ಮುಗ್ಧ ಜೀವಗಳು ಈ ದುರಂತದಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ವಿಮಾನ ಪತನದ ಭೀಕರ ದೃಶ್ಯವನ್ನು ನೋಡಿದಾಗ ಎದೆ ಝಲ್ ಎನ್ನುತ್ತೆ, ಇನ್ನೂ ವಿಮಾನ ಪತನಕ್ಕೂ ಮೊದಲು ಸಾವು ಕಣ್ಣ ಮುಂದೆ ಬಂದಾಗ ವಿಮಾನದೊಳಗಿದ್ದ ಪ್ರಯಾಣಿಕರು ಹಾಗೂ ಪೈಲಟ್‌ಗಳ ಅಸಹಾಯಕ ಪರಿಸ್ಥಿತಿ ಹೇಗಿರಬೇಡ ಹೇಳಿ. ಹೀಗೆ ವಿಮಾನ ಪತನಕ್ಕೂ ಮೊದಲು ಕೊನೆಯ ಕ್ಷಣದಲ್ಲಿ ವಿಮಾನದೊಳಗೆ ಏನೆಲ್ಲಾ ನಡೆದಿರಬಹುದು ಎಂಬುದನ್ನು ತೋರಿಸುವ ಎಐ ವಿಡಿಯೋವೊಂದು ವೈರಲ್ ಆಗಿದ್ದು, ಈ ದೃಶ್ಯ ಕರುಳು ಹಿಂಡುವಂತಿದೆ.
ಫ್ಲೈಟ್ ಒಳಗೆ ಏನೆಲ್ಲಾ ನಡೆಯಿತು?
ವಿಮಾನ ಪತನಕ್ಕೂ ಮೊದಲು, ಸಾವು ಕಣ್ಣ ಮುಂದೆ ಬಂದಾಗ ವಿಮಾನದೊಳಗಿದ್ದ ಪೈಲಟ್, ಸಿಬ್ಬಂದಿಗಳು, ಪ್ರಯಾಣಿಕರು ಎಷ್ಟು ಕೂಗಾಡಿರಬೇಡ, ಪ್ರಾಣವನ್ನು ಉಳಿಸಿಕೊಡು ಎಂದು ದೇವರಲ್ಲಿ ಎಷ್ಟು ಪ್ರಾರ್ಥಿಸಿರಬೇಡ, ಅವರ ಅಸಹಾಯಕ ಪರಿಸ್ಥಿತಿ ಹೇಗಿರಬೇಡ ಹೇಳಿ. ಹೀಗೆ ಕೊನೆಯ ಕ್ಷಣದಲ್ಲಿ ವಿಮಾನದೊಳಗೆ ಏನೆಲ್ಲಾ ನಡೆದಿರಬಹುದು ಎಂಬುದನ್ನು ತೋರಿಸುವ ಎಐ ವಿಡಿಯೋವನ್ನು ಕಲಾವಿದರೊಬ್ಬರು ಸೃಷ್ಟಿಸಿದ್ದಾರೆ.
ಈ ವಿಡಿಯೋವನ್ನು bharathfx1 ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಿಮಾನ ಪತನಕ್ಕೂ ಮೊದಲು ವಿಮಾನದೊಳಗೆ ಏನೆಲ್ಲಾ ನಡೆಯಿತು ಎಂಬ ದೃಶ್ಯವನ್ನು ಕಾಣಬಹುದು. ಪೈಲಟ್ ಕೊನೆಯ ಕ್ಷಣದಲ್ಲಿ ಮೇ ಡೇ ಮೇ ಡೇ ಎಂಬ ಸಂದೇಶವನ್ನು ರವಾಣಿಸಿದಾಗ ವಿಮಾನದೊಳಗೆ ಪ್ರಯಾಣಿಕರು ಕಿರುಚಾಡುತ್ತಾ, ಪ್ರಾಣ ಉಳಿಸು ದೇವ್ರೇ ಎಂದು ಭಯದಲ್ಲಿ ಕೈ ಮುಗಿಯುವ ದೃಶ್ಯವನ್ನು ಕಾಣಬಹುದು.