newsics.com
ಅಹಮದಾಬಾದ್ ವಿಮಾನ ದುರಂತದ ನಂತರ ವಿಮಾನದಲ್ಲಿ ಅತ್ಯಂತ ಸುರಕ್ಷಿತವಾದ ಸ್ಥಳ ಯಾವುದು ಎಂಬ ಹಲವಾರು ಪ್ರಶ್ನೆಗಳು ಕೇಳೀ ಬರುತ್ತಿವೆ.
2012 ರಲ್ಲಿ, ಮೆಕ್ಸಿಕನ್ ವಿಜ್ಞಾನಿಗಳು ಮಾಡಿದ ವರದಿ ಪ್ರಕಾರ, ವಿಮಾನ ಅಪಘಾತಕ್ಕೀಡಾದರೆ, ಮುಂಭಾಗದಲ್ಲಿ ಕುಳಿತಿರುವ ಪ್ರಯಾಣಿಕರ ಜೀವಕ್ಕೆ ಹೆಚ್ಚಿನ ಅಪಾಯವಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಇದರ ಜೊತೆಗೆ, ರೆಕ್ಕೆಗಳ ಬಳಿ ಕುಳಿತಿರುವ ಪ್ರಯಾಣಿಕರ ಜೀವಕ್ಕೂ ಅಪಾಯವಿದೆ. ಆದರೂ, ಈ ಎಲ್ಲಾ ಪ್ರಯಾಣಿಕರಿಗೆ ಹೋಲಿಸಿದರೆ ಹಿಂಭಾಗ ಅಥವಾ ಕೊನೆಯ ಆಸನಗಳಲ್ಲಿ ಕುಳಿತಿರುವ ಪ್ರಯಾಣಿಕರು ಬದುಕುಳಿಯುವ ಸಾಧ್ಯತೆ ಹೆಚ್ಚು ಸಂಶೋಧನೆ ತಿಳಿಸಿದೆ.
ಟೈಮ್ ನಿಯತಕಾಲಿಕೆಯ ಪ್ರಕಾರ, 2015 ರವರೆಗಿನ 35 ವರ್ಷಗಳ ಅಪಘಾತ ದತ್ತಾಂಶವನ್ನು ವಿಶ್ಲೇಷಿಸಿ ನೋಡಿದರೆ, ವಿಮಾನ ಅಪಘಾತಗಳಲ್ಲಿ ಹಿಂಭಾಗದಲ್ಲಿ ಕುಳಿತ ಕಡಿಮೆ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ವಿಮಾನದ ಹಿಂಭಾಗದ ಆಸನಗಳಲ್ಲಿ ಕುಳಿತ ಪ್ರಯಾಣಿಕರ ಸಾವಿನ ಪ್ರಮಾಣ ಶೇ. 32 ರಷ್ಟಿದ್ದರೆ, ಮಧ್ಯದ ಮೂರನೇ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕರ ಸಾವಿನ ಪ್ರಮಾಣ ಶೇ. 39 ಮತ್ತು ಮುಂಭಾಗದ ಮೂರನೇ ಸೀಟಿನಲ್ಲಿ ಶೇ. 38 ರಷ್ಟಿತ್ತು. ಒಟ್ಟಾರೆಯಾಗಿ, ವಿಮಾನದಲ್ಲಿ ಹಿಂದಿನ ಸೀಟು ಅತ್ಯಂತ ಸುರಕ್ಷಿತವಾಗಿದೆ ಅಂತ ಇದರಿಂದ ತಿಳಿದುಕೊಳ್ಳಬಹುದು.
Kamal Haasan ಥಗ್ ಲೈಫ್ ಸಿನಿಮಾ ಬಿಡುಗಡೆ ವಿವಾದ: ಜೂ.20 ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್