newsics.com
ಮೇ ತಿಂಗಳಿನಲ್ಲಿ ದಾಖಲೆ ಪ್ರಮಾಣದಷ್ಟು ಏರಿಕೆ ಹಾಗೂ ಇಳಿಕೆ ಕಂಡಿದ್ದ ಚಿನ್ನ, ಖರೀದಿದಾರರ ನಿದ್ದೆಗೆಡಿಸಿತ್ತು. ಸದ್ಯ. ಚಿನ್ನದ ಬೆಲೆ 10 ದಿನದಲ್ಲಿ ಗ್ರಾಮ್ಗೆ 100 ರೂನಷ್ಟು ಇಳಿಕೆಯೇ ಆಗಿದೆ. ಮೇ 21ರಂದು ಗ್ರಾಮ್ಗೆ 9,020 ರೂ ಇದ್ದ ಆಭರಣ ಚಿನ್ನದ ಬೆಲೆ ಈಗ 8,920 ರೂಗೆ ಇಳಿದಿದೆ.
ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿ ಬೆಲೆ ಹೆಚ್ಚು ಸ್ಥಿರವೆನಿಸಿದೆ. ಇದೂ ಕೂಡ 10 ದಿನದಲ್ಲಿ ಇಳಿಕೆಯಾಗಿರುವುದು 1 ರೂ ಮಾತ್ರವೇ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 89,200 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 97,310 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 89,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 10,000 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 1ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,310 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,990 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,200 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,310 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
Rain Alert Karnataka : ರಾಜ್ಯದಲ್ಲಿ ಮುಂದುವರೆಯಲಿದೆ ಮಳೆಯ ಅಬ್ಬರ: ಮುಂದಿನ ಐದು ದಿನ ಭಾರೀ ಮಳೆ