- newsics.com
ಕೋಪವೆಂಬುದು ಪಾಪಿ ಇದ್ದಂತೆ ಎಂದು ನಮ್ಮ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ಕೋಪದಿಂದ ಉಂಟಾಗುವ ನಷ್ಟಗಳು ಹಲವಾರು. ಇದರಿಂದ ನೀವು ನಿಮ್ಮ ಸುಂದರ ಬಾಂಧವ್ಯಗಳನ್ನು ಕಳೆದುಕೊಳ್ಳಬಹುದು. ಅತಿಯಾದ ಕೋಪ ನಿಮ್ಮ ಆರೋಗ್ಯವನ್ನು ಕೂಡ ತಿಂದುಹಾಕುತ್ತದೆ. ಕೋಪದಿಂದ ದೇಹಕ್ಕೆ ಹಲವು ದುಷ್ಪರಿಣಾಮಗಳು ಇವೆ. ಕೇವಲ ಸಂಬಂಧಗಳಲ್ಲಿ ಮಾತ್ರವಲ್ಲದೆ ನಿಮ್ಮ ಆರೋಗ್ಯದ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮಗಳು ಕೋಪದಿಂದ ಉಂಟಾಗುತ್ತದೆ
ಅದೆಷ್ಟೋ ಜನರಿಗೆ ತಮ್ಮ ಜೀವನದಲ್ಲಿ ಸಾಕಷ್ಟು ನೋವು ಇರುತ್ತವೆ. ಆದರೆ, ಕೆಲವರಿಗೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಎಲ್ಲರ ಮುಂದೆ ಸಂತೋಷದಿಂದ ಇರಲು ಬರುತ್ತದೆ. ಆದರೆ, ಇನ್ನೂ ಕೆಲವರಿಗೆ ಇದು ಅಸಾಧ್ಯ. ತಾಳ್ಮೆಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ.
ಪೂರ್ವಜರಿಂದ ಬಳುವಳಿಯಾಗಿ ಬಂದಿರುತ್ತದೆ. ಸಣ್ಣ ಸಣ್ಣ ವಿಷಯಗಳಿಗಾಗಿ ಕೋಪ ಮಾಡಿಕೊಳ್ಳುವುದು ಇದು ಹೆರಿಡಿಟಿ ಅಂತನೂ ಹೇಳಬಹುದು. ಅವರು ಎಷ್ಟು ತಾನು ಕೋಪ ಮಾಡಿಕೊಳ್ಳಬಾರದು ಅಂತ ಅಂದುಕೊಂಡರೂ ಕೂಡ ತನ್ನ ಮಕ್ಕಳು ಮತ್ತು ಪತ್ನಿಯ ಮೇಲೆ ಸಾಕಷ್ಟು ಬಾರಿ ಕೋಪವನ್ನು ಸಾಧಿಸುತ್ತಾರೆ.
ದುಖಃವನ್ನು ತಡೆದುಕೊಳ್ಳಲು ಕೆಲವೊಬ್ಬರಿಗೆ ಆಗುವುದಿಲ್ಲ. ಆಗ ಇನ್ನೊಬ್ಬರ ಮೇಲೆ ತಮ್ಮ ಕೋಪವನ್ನು ತೋರಿಸುತ್ತಾರೆ. ಕೆಲ ಜನರು ಒಬ್ಬಂಟಿಯಾಗಿ ಎಲ್ಲಿಗಾದರೂ ಹೋಗಿ ದುಖಃವನ್ನು ಹೊರಗೆ ಹಾಕಿಕೊಳ್ಳುತ್ತಾರೆ. ಆದರೆ, ಕೆಲವೊಬ್ಬರು ಕೋಪದ ಮೂಲಕ ದುಖಃವನ್ನು ಹೊರಗೆ ಹಾಗ್ತಾರೆ. ಆಪ್ತರಿರುವವರು ಅರ್ಥಮಾಡಿಕೊಳ್ಳಬೇಕು.