newsics.com
ಹಿರಿಯ ಬಾಲಿವುಡ್ ನಟಿಯೊರ್ವರು ತನ್ನ ಪ್ರೀತಿಗಾಗಿ ಕನಸುಗಳನ್ನು ತ್ಯಾಗ ಮಾಡಿದ್ದಾರೆ. ಹೌದು, ಈ ನಟಿ ಮದುವೆಯಾಗಿದ್ದ ನಿರ್ದೇಶಕರನ್ನು ಪ್ರೀತಿಸುತ್ತಿದ್ದರು ಆದರೆ ಇಬ್ಬರೂ ಒಂದಾಗದ ಕಾರಣ ಜೀವನದುದ್ದಕ್ಕೂ ಕನ್ಯೆಯಾಗಿಯೇ ಉಳಿದಿದ್ದಾರೆ.
ನಟಿ ಆಶಾ ಪರೇಶ್ ಅವರು ಬಾಲಿವುಡ್‌ನಲ್ಲಿ 3 ದಶಕಗಳ ಕಾಲ ತಮ್ಮ ಅತ್ಯುತ್ತಮ ನಟನೆಯಿಂದ ಜನರ ಹೃದಯವನ್ನು ಗೆದ್ದಿದ್ದಾರೆ. ಆಶಾ ಪರೇಖ್ ಅವರು ತಮ್ಮ ಚಲನಚಿತ್ರ ವೃತ್ತಿಜೀವನದಲ್ಲಿ 90 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದ್ರೆ, ಆಶಾ ಪರೇಖ್ ಅವರು ವೈಯಕ್ತಿಕ ಜೀವನ ಯಶಸ್ವಿಯಾಗಲಿಲ್ಲ.
ನಟಿ ಆಶಾ ಅವರು ಸಂದರ್ಶನವೊಂದರಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದರು.
ಆಶಾ ಪರೇಖ್ ನಿರ್ದೇಶಕ ನಾಸಿರ್ ಹುಸೇನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಇವರಿಬ್ಬರೂ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಆ ಸಮಯದಲ್ಲಿ ಉತ್ತಮ ಸ್ನೇಹಿತರಾದರು.ಅಲ್ಲಿಂದ ಆಶಾ ಪರೇಖ್ ನಾಸಿರ್ ಹುಸೇನ್ ಅವರನ್ನು ಪ್ರೀತಿಸುತ್ತಿದ್ದರು ಆದರೆ ನಾಸಿರ್ ಹುಸೇನ್ ಈಗಾಗಲೇ ಮದುವೆಯಾಗಿದ್ದರು. ಇದರಿಂದಾಗಿ ಆಶಾ ಪರೇಖ್ ತನ್ನ ಪ್ರೀತಿಯನ್ನು ಹೇಳಿಕೊಳ್ಳಲೇ ಇಲ್ಲವಂತೆ.
ಈ ಬಗ್ಗೆ ಮಾತನಾಡಿದ ಅವರು “ನಾನು ನಾಸಿರ್ ಹುಸೇನ್ ಅವರನ್ನು ಪ್ರೀತಿಸುತ್ತಿದ್ದೆ. ನಾನು ಯಾವಾಗಲೂ ಮದುವೆಗಾಗಿ ಅಂತಹ ವ್ಯಕ್ತಿಯನ್ನು ಹುಡುಕುತ್ತಿದ್ದೆ. ಆದರೆ ಅವನು ಈಗಾಗಲೇ ಮದುವೆಯಾಗಿದ್ದರಿಂದ ನಾನು ಅವರನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ. ಅವರ ಮನೆ ಹಾಳಾಗುವುದು ನನಗೆ ಇಷ್ಟವಿರಲಿಲ್ಲ. ಇದರಿಂದಾಗಿ ನಾನು ನನ್ನ ಪ್ರೀತಿಯನ್ನು ತ್ಯಾಗ ಮಾಡಿದ್ದೇನೆ. ನನ್ನ ಜಾತಕದಲ್ಲಿ ಮದುವೆ ಬರೆದಿಲ್ಲ” ಎಂದು ಹೇಳಿಕೊಂಡಿದ್ದರು.
ಕಾರಿನಲ್ಲೇ ವಿಷ ಸೇವಿಸಿ ಒಂದೇ ಕುಟುಂಬದ 7 ಮಂದಿ ಸಾಮೂಹಿಕ ಆತ್ಮಹತ್ಯೆ.!