newsics.com
ನವದೆಹಲಿ: ಯುರೋಪ್‌ನ ಅತಿದೊಡ್ಡ ವೈಮಾನಿಕ ಕಂಪನಿ ಏರ್‌ಬಸ್ ಹಾಗೂ ಟಾಟಾ ಸಮೂಹದ ಏರೋಸ್ಪೇಸ್ ವಿಭಾಗವಾಗಿರುವ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ (ಟಿಎಎಸ್‌ಎಲ್) ಕಂಪನಿಗಳು ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್ ಜೋಡಣೆ ಕಾರ್ಖಾನೆಯನ್ನು ಕೋಲಾರದಲ್ಲಿ ಸ್ಥಾಪಿಸಲು ಮುಂದಾಗಿವೆ.
ಕೋಲಾರದ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಈ ಘಟಕ ತಲೆಎತ್ತಲಿದೆ ಎಂದು ಮೂಲಗಳು ತಿಳಿಸಿವೆ.
ಅತ್ಯಂತ ಪ್ರತಿಷ್ಠಿತವಾಗಿರುವ ಈ ಯೋಜನೆಯನ್ನು ಪಡೆಯಲು ಆಂಧ್ರಪ್ರದೇಶ, ಉತ್ತರಪ್ರದೇಶ ಹಾಗೂ ಗುಜರಾತ್‌ಗಳು ಕರ್ನಾಟಕಕ್ಕೆ ಬಿರುಸಿನ ಪೈಪೋಟಿ ನೀಡಿದ್ದವು. ಆದರೆ ಕರ್ನಾಟಕದಲ್ಲಿ ಈಗಾಗಲೇ ವೈಮಾಂತರಿಕ್ಷ ಉತ್ಪಾದನೆಗೆ ಸಂಬಂಧಿಸಿದ ಕಂಪನಿಗಳು ಇರುವ ಕಾರಣಕ್ಕೆ ಏರ್‌ಬಸ್-ಟಾಟಾ ಕಂಪನಿಗಳು ಕರ್ನಾಟಕವನ್ನೇ ಆಯ್ಕೆ ಮಾಡಿಕೊಂಡಿವೆ.
ವಿಶ್ವದಲ್ಲಿ ಏರ್‌ಬಸ್ ಕಂಪನಿಯು ಫ್ರಾನ್ಸ್, ಅಮೆರಿಕ ಹಾಗೂ ಬ್ರೆಜಿಲ್‌ನಲ್ಲಿ ಮಾತ್ರ ಘಟಕ ಹೊಂದಿದ್ದು ಕೋಲಾರದ್ದು ನಾಲ್ಕನೇ ಘಟಕವಾಗಿದೆ.
ಭಾರತೀಯ ವಾಯುಪಡೆಗಾಗಿ ಈ ಎರಡೂ ಕಂಪನಿಗಳು ಜತೆಗೂಡಿ ಎಚ್125 ಹೆಲಿಕಾಪ್ಟರ್‌ಗಳ ಅಂತಿಮ ಜೋಡಣಾ ವಿಭಾಗವನ್ನು ಕೋಲಾರದಲ್ಲಿ ತೆರೆಯಲಿವೆ ಎಂದು ವರದಿಗಳು ತಿಳಿಸಿವೆ.
ವಾರ್ಷಿಕ 10 ಹೆಲಿಕಾಪ್ಟರ್‌ಗಳನ್ನು ಆರಂಭಿಕ ಹಂತದಲ್ಲಿ ಉತ್ಪಾದಿಸಲಾಗುತ್ತದೆ. ಮುಂದಿನ 2 ದಶಕಗಳಲ್ಲಿ 500 ಲಘು ಹೆಲಿಕಾಪ್ಟರ್‌ಗಳಿಗೆ ಭಾರತ ಹಾಗೂ ದಕ್ಷಿಣ ಏಷ್ಯಾದಲ್ಲಿ ಬೇಡಿಕೆ ಬರಬಹುದು ಎಂದು ಏರ್‌ಬಸ್ ಅಂದಾಜಿಸಿದೆ.
Rain alerts ರಾಜ್ಯದಲ್ಲಿ ಇನ್ನೂ 6 ದಿನ ಮಳೆ: ವರುಣನ ಆರ್ಭಟಕ್ಕೆ ನಾಲ್ವರು ಬಲಿ!
https://www.newsics.ಓಒcom/2025/05/27/the-star-actress-who-remained-a-virgin-throughout-her-life-for-the-man-she-loved/
Cornavirus ರಾಜ್ಯದಲ್ಲಿ ಕೊರೋನಾ ಆರ್ಭಟ : ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್ ಮೀಸಲಿಡಲು ಸರ್ಕಾರ ಆದೇಶ