newsics.com
ಇನ್ಮೇಲೆ ನಿಮ್ಮ ಫೋನ್ ಮನುಷ್ಯರಂತೆ ಮಾತಾಡ್ತದೆ. ಇದಕ್ಕಾಗಿ ನೀವು ದುಬಾರಿ ಪ್ರೀಮಿಯಂ ಫೋನ್ ಖರೀದಿಸುವ ಅಗತ್ಯವಿಲ್ಲ. ನಿಮ್ಮ ಮೂಲ ಸ್ಮಾರ್ಟ್‌ಫೋನ್ ಸಾಕು.
ಹೌದು ಗೂಗಲ್ I/O 2025 ರಲ್ಲಿ AIನ ಹೊಸ ಫೀಚರ್ ಬಿಡುಗಡೆ ಮಾಡಿದೆ. ಅದರ ಮೂಲಕ ನೀವು ಫೋನ್‌ನಿಂದ ಸಂಭಾಷಣೆಗಳನ್ನ ನಡೆಸಬಹುದು. ನಿಮ್ಮ ಫೋನ್‌ನ ಕ್ಯಾಮೆರಾ ಆನ್ ಮಾಡಿ ಅದು ನೋಡುವ ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.
ಸ್ಮಾರ್ಟ್‌ಫೋನ್‌ನಲ್ಲಿ ಜೆಮಿನಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಿ, ನಂತರ ಗೂಗಲ್‌ನ ಈ AI ಟೂಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ.
ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ಇನ್ಸ್ಟಾಲ್ ಮಾಡಿ ಒಂದಷ್ಟು ಪ್ರಕ್ರಿಯೆಗಳ ಬಳಿಕ ಅದು ನಿಮ್ಮೊಂದಿಗೆ ಮಾತನಾಡಲು ಸಿದ್ಧವಾಗುತ್ತದೆ.
ನಂತರ ಜೆಮಿನಿ ಅಪ್ಲಿಕೇಶನ್ ಓಪನ್ ಮಾಡಿ. ಮೈಕ್ ಪಕ್ಕದಲ್ಲಿರುವ ಐಕಾನ್ ಮೇಲೆ ಟ್ಯಾಪ್ ಮಾಡಬೇಕು
ನಂತರ ಜೆಮಿನಿ ಲೈವ್ ತೆರೆಯುತ್ತದೆ. ನಿಮ್ಮ ಫೋನ್ ನಿಮ್ಮೊಂದಿಗೆ ಮಾತನಾಡ್ತದೆ.