newsics.com
ಅಮೆರಿಕಾ : ಭಾರತೀಯರು ಬಳಸುವ ಈ ಬಟ್ಟೆ ಚೀಲ ವಿದೇಶದಲ್ಲಿ ಬಹಳ ದುಬಾರಿಯಾಗಿದೆಯಂತೆ. ಅಮೆರಿಕಾದ ಅಂಗಡಿಯಾದ ನಾರ್ಡ್‌ಸ್ಟ್ರೋಮ್ ನಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
@pitdeshi ಹೆಸರಿನ ಖಾತೆಯಲ್ಲಿ ಬ್ಯಾಗ್ ನ ಸ್ಕ್ರೀನ್ ಶಾರ್ಟ್ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಭಾರತೀಯ ಬಟ್ಟೆ ಚೀಲವು ವಿದೇಶದಲ್ಲಿ ಎಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ನಮ್ಮ ದೇಶದಲ್ಲಿ ಉಚಿತವಾಗಿ ಲಭ್ಯವಿರುವ ಬಟ್ಟೆ ಬ್ಯಾಗನ್ನು ಅಮೇರಿಕಾದಲ್ಲಿ 4100 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ವೊಂದು ಎರಡು ಲಕ್ಷ ಎಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದು ಕೊಂಡಿದ್ದು, ಇದರ ದುಬಾರಿ ಬೆಲೆ ಭಾರತೀಯ ಗ್ರಾಹಕರಲ್ಲಿ ಚರ್ಚೆಗೆ ಕಾರಣವಾಗಿದ್ದು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.
Amala Paul ಮಗನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ ಅಮಲಾ ಪೌಲ್!