newsics.com
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಸಮಯದಲ್ಲೇ ಪಾಣೆಮಂಗಳೂರು ಸಮೀಪ ಅಕ್ಕರಂಗಡಿ ಬಸ್ ನಿಲ್ದಾಣದ ಬಳಿ ಒಂದು ಕೋಮಿನ ಯುವಕನಿಗೆ ನಾಲ್ವರ ತಂಡ ಚಾಕುವಿನಿಂದ ಇರಿದು ಬೈಕ್‌ನಲ್ಲಿ ಪರಾರಿಯಾಗಿದೆ.
ಪೈಂಟರ್ ವೃತ್ತಿ ಮಾಡಿಕೊಂಡಿರುವ ಬಂಟ್ವಾಳದ ಹಮೀದ್ ಯಾನೆ ಅಮ್ಮಿ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ತರಾರಿಯಾಗಿದ್ದಾರೆ. ಹಮೀದ್ ಅವರ ಕೈಗೆ ಗಂಭೀರ ಗಾಯವಾಗಿದೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ ಪೊಲೀಸರು ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಳಿಕ ಮತ್ತೊಂದು ಇರಿತದ ಘಟನೆ ಶುಕ್ರವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದೆ.
Viral ಸಹೋದರನ ವಿರುದ್ಧ ಕೋಪಗೊಂಡ ರೋಹಿತ್ ಶರ್ಮಾ – ಕಾರಣವೇನು? ವೈರಲ್ ವಿಡಿಯೋ ನೋಡಿ
Vijay Devarakonda ನಟ ವಿಜಯ್ ದೇವರಕೊಂಡ ಮತ್ತು ತಾಯಿಯ ವಾಟ್ಸ್ಯಾಪ್ ಚಾಟ್ ವೈರಲ್: ಮೆಸೇಜ್‌ನಲ್ಲಿ ಏನಿದೆ?