newsics.com
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಈ ನಗರದಲ್ಲಿ ಹುಟ್ಟಿ ವಿಶ್ವಮಟ್ಟದಲ್ಲಿ ಬೆಳೆದ ಕ್ರಿಕೆಟಿಗ ರೋಹಿತ್ ಶರ್ಮಾ ಅವರಿಗೆ ದೊಡ್ಡ ಗೌರವ ನೀಡಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಅವರ ಹೆಸರಿನ ಸ್ಟ್ಯಾಂಡ್ ಅನ್ನು ಶುಕ್ರವಾರದಂದು ಅನಾವರಣ ಮಾಡಲಾಯಿತು. ಜೊತೆಗೆ ಐಸಿಸಿಯ ಮಾಜಿ ಅಧ್ಯಕ್ಷ ಶರದ್ ಪವಾರ್ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ಅಜಿತ್ ವಾಡೇಕರ್ ಅವರ ಹೆಸರಿನ ಸ್ಟ್ಯಾಂಡ್‌ಗಳನ್ನು ಸಹ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ, ರೋಹಿತ್ ಶರ್ಮಾ ಅವರು ಸಹೋದರ ವಿಶಾಲ್ ಅವರನ್ನು ತರಾಟೆಗೆ ತೆಗೆದುಕೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ, ರೋಹಿತ್ ಶರ್ಮಾ ವಿಶಾಲ್ ಗೆ ತನ್ನ ಕಾರಿನ ಕಡೆಗೆ ಬೆರಳು ತೋರಿಸುತ್ತಾ, ಏನು ಇದು ಎಂದು ಡೆಂಟ್ ಆಗಿರುವುದನ್ನು ಪ್ರಶ್ನಿಸಿದ್ದಾರೆ. ಈ ವೇಳೆ ವಿಶಾಲ್ ರಿವರ್ಸ್ ತೆಗೆಯುವಾಗ ತಾಗಿದೆ ಎಂದು ಉತ್ತರಿಸಿದ್ದಾರೆ.
ಯಾರಿಂದ? ನಿನ್ನಿಂದನಾ? ಎಂದು ರೋಹಿತ್ ಶರ್ಮಾ ಮರು ಪ್ರಶ್ನಿಸಿದರು. ಅತ್ತ ವಿಶಾಲ್ ಕಡೆಯಿಂದ ಉತ್ತರ ಬರುತ್ತಿದ್ದಂತೆ, ಹಿಟ್ಮ್ಯಾನ್, ನಿನಗೇನು ಬುದ್ದಿ ಇಲ್ವಾ? ಎಂದು ಕೋಪಗೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.