newsics.com
ಇಸ್ಲಮಾಬಾದ್: ಪಾಕ್ ವಾಯುನೆಲೆಗಳನ್ನು ಗುರಿಯಾಗಿಸಿ ಭಾರತ ಡ್ರೋನ್, ಕ್ಷಿಪಣಿ ದಾಳಿ ನಡೆಸಿತ್ತು.
ಆದರೆ, ಇದರಲ್ಲಿ ಪಾಕ್‌ನ ಅನೇಕ ವಾಯುನೆಲೆಗಳು ಉಡೀಸ್ ಆಗಿದ್ದವು. ಅದಾಗ್ಯೂ ಪಾಕ್ ಇದನ್ನು ಒಪ್ಪಿಕೊಂಡಿರಲಿಲ್ಲ. ತಾನೇ ಭಾರತದ ಹಲವು ಪ್ರದೇಶಗಳನ್ನು ಧ್ವಂಸಗೊಳಿಸಿರುವುದಾಗಿ ಸುಳ್ಳು ಹೇಳುತ್ತಾ ಬಂದಿತ್ತು. ಆದರೆ ಇದೀಗ ಸ್ವತಃ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಈ ದಾಳಿ ನಡೆದಿರುವುದು ನಿಜ ಎಂಬುದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.
ಮೇ 10 ರ ಮುಂಜಾನೆ, ನೂರ್ ಖಾನ್ ವಾಯುನೆಲೆ ಸೇರಿದಂತೆ ಪಾಕಿಸ್ತಾನದ ಭೂಪ್ರದೇಶದ ಮೇಲೆ ಭಾರತೀಯ ಕ್ಷಿಪಣಿ ದಾಳಿಗಳ ಕುರಿತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರಿಂದ ತುರ್ತು ಅಧಿಸೂಚನೆ ಬಂದಿರುವ ಬಗ್ಗೆ ಶಹಬಾಜ್ ಷರೀಫ್ ಮಾಹಿತಿ ಹಂಚಿಕೊಂಡಿದ್ದಾರೆ.
Indian YouTubers arrested ಪಾಕ್ ಪರ ಗೂಢಚಾರಿಕೆ: ಭಾರತದ ಜ್ಯೋತಿ ಮಲ್ಹೋತ್ರಾ ಸೇರಿ 6 ಯೂ ಟ್ಯೂಬರ್‌ಗಳ ಬಂಧನ