newsics.com
ಸಾಮಾನ್ಯವಾಗಿ ರೆಸ್ಟೋರೆಂಟ್‌ಗಳಲ್ಲಿ ವೇಟರ್‌ಗಳು ಮನುಷ್ಯರಾಗಿರುತ್ತಾರೆ. ಆದರೆ, ಇತ್ತೀಚೆಗೆ ರೊಬೊಟ್‌ಗಳು ಸಹ ವೇಟರ್‌ಗಳ ಕೆಲಸ ಮಾಡುತ್ತಿವೆ.
ಆದರೆ ಜಪಾನ್‌ನ ರೆಸ್ಟೋರೆಂಟ್‌ನಲ್ಲಿ ಮನುಷ್ಯರ ಬದಲಿಗೆ ಕೋತಿಗಳೇ ಅತಿಥಿಗಳಿಗೆ ಆಹಾರ ಬಡಿಸುತ್ತವೆ. ಈ ರೆಸ್ಟೋರೆಂಟ್‌ನ ಮಾಲೀಕರು ಕೋತಿಗಳಿಗೆ ಸಂಬಳವನ್ನೂ ನೀಡುತ್ತಾರೆ.
ಜಪಾನ್‌ನಲ್ಲಿ ಜನರು ಮಾತ್ರವಲ್ಲ, ಪ್ರಾಣಿಗಳೂ ಕಷ್ಟಪಟ್ಟು ಕೆಲಸ ಮಾಡುತ್ತವೆ. ರೆಸ್ಟೋರೆಂಟ್‌ಗಳಲ್ಲಿ ವೇಟರ್‌ಗಳಾಗಿ ಕೆಲಸ ಮಾಡುವ ಕೋತಿಗಳು ಇಲ್ಲಿ ಸಂಬಳವನ್ನು ಪಡೆಯುತ್ತವೆ.

ಜಪಾನ್‌ನ ‘ಕಯಾಬುಕಿಯಾ’ ಎಂಬ ರೆಸ್ಟೋರೆಂಟ್‌ನಲ್ಲಿ ಎರಡು ಕೋತಿಗಳನ್ನು ವೇಟರ್‌ಗಳಾಗಿ ನೇಮಿಸಲಾಗಿದೆ. ಈ ಕೋತಿಗಳು ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗೆ ಆಹಾರ ಬಡಿಸುವ ಕೆಲಸ ಮಾಡುತ್ತವೆ. ಈ ಕೋತಿಗಳನ್ನು ನೋಡಲು ಜನರು ದೂರದಿಂದ ಬರುತ್ತಾರೆ. ಜತೆಗೆ ಕೋತಿಗಳು ಬಡಿಸಿದ ಆಹಾರವನ್ನು ತಿನ್ನಲು ಸಹ ತುಂಬಾ ಇಷ್ಟಪಡುತ್ತಾರೆ.
ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಎರಡು ಕೋತಿಗಳ ಹೆಸರು ಯಾಚಾನ್ ಮತ್ತು ಫುಕು-ಚಾನ್. ಈ ಕೋತಿಗಳು ಸಾಂಪ್ರದಾಯಿಕ ಜಪಾನೀಸ್ ಉಡುಗೆ (ಯುಕಾಟಾ) ಧರಿಸುತ್ತವೆ. ಇದು ಗ್ರಾಹಕರಿಗೆ ಇನ್ನಷ್ಟು ಮನರಂಜನೆಯ ಅನುಭವ ನೀಡುತ್ತದೆ.

ಈ ಮೂಲಕ ಟೋಕಿಯೋದ ಕಯಾಬುಕಿಯಾ ರೆಸ್ಟೋರೆಂಟ್‌ನ ಮಾಲೀಕರು ಕೋತಿಗಳು ಎಷ್ಟು ಬುದ್ಧಿವಂತವಾಗಿವೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಜಪಾನ್‌ನಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಂತಹವರನ್ನು ಕಠಿಣವಾಗಿ ಶಿಕ್ಷಿಸುವ ವ್ಯವಸ್ಥೆಯಿದೆ
ರೆಸ್ಟೋರೆಂಟ್‌ನ ಮಾಲೀಕರು ಸರ್ಕಾರದಿಂದ ಅನುಮತಿ ಪಡೆದು, ಮನುಷ್ಯರ ಬದಲಿಗೆ ಕೋತಿಗಳನ್ನು ನೇಮಿಸಿದ್ದಾರೆ. ಕೋತಿಗಳು ವಾರಕ್ಕೆ ಎರಡು ದಿನ ಮಾತ್ರ ಕೆಲಸ ಮಾಡುತ್ತವೆ.

ರೆಸ್ಟೋರೆಂಟ್ ಮಾಲೀಕರು ಕೋತಿಗಳಿಗೆ ಉತ್ತಮ ಆರೈಕೆ, ಆಹಾರ, ಮತ್ತು ಪ್ರೀತಿಯನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ. ಇನ್ನೊಂದೆಡೆ, ಈ ಕೋತಿಗಳು ಗ್ರಾಹಕರಿಗೆ ಸಂತೋಷವನ್ನು ತಂದುಕೊಡುತ್ತವೆ ಮತ್ತು ರೆಸ್ಟೋರೆಂಟ್‌ಗೆ ವಿಶಿಷ್ಟ ಗುರುತನ್ನು ನೀಡಿವೆ ಎಂದು ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಯಾಬುಕಿಯಾ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಕೋತಿಗಳಿಗೆ ಸಂಬಳವಾಗಿ ತಾಜಾ ಬಾಳೆಹಣ್ಣುಗಳು ಮತ್ತು ಬೇಯಿಸಿದ ಸೋಯಾ ಬೀನ್ಸ್ (ಗ್ರಾಹಕರಿಂದ ಟಿಪ್ ಆಗಿ) ನೀಡಲಾಗುತ್ತದೆ.
ಜಪಾನ್‌ನ ಕಾನೂನಿನ ಪ್ರಕಾರ, ಪ್ರಾಣಿಗಳಿಗೆ ನಗದು ಸಂಬಳ ನೀಡುವುದಕ್ಕೆ ಬದಲಾಗಿ ಆಹಾರವನ್ನೇ ಪ್ರತಿಫಲವಾಗಿ ನೀಡಲಾಗುತ್ತಿದೆ.
News: ನಮಗೆ ಪುರುಷರ ಅಗತ್ಯವಿಲ್ಲವೆಂದು ಮದುವೆಯಾದ ಇಬ್ಬರು ಸ್ನೇಹಿತೆಯರು
Gang rape ಮಾತುಬಾರದ, ಕಿವಿ ಕೇಳದ ಮಹಿಳೆಯ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರ!