newsics.com
ಸಂಬಂಧ ಮುರಿದುಬಿದ್ದಿದ್ದಕ್ಕೆ ಕೋಪಗೊಂಡ ಯುವತಿ ತನ್ನ ಪ್ರಿಯಕರನ ಕೈ ಬೆರಳನ್ನೇ ಕತ್ತರಿಸಿರುವ ಘಟನೆ ಜಪಾನ್‌ನ ಹೊನ್ಶು ದ್ವೀಪದ ಕನ್ಸೈ ಪ್ರದೇಶದ ಒಸಾಕಾದಲ್ಲಿ ನಡೆದಿದೆ.
ಆರೋಪಿ ಯುವತಿ ಪ್ರಿಯಕರನನ್ನು ತುಂಬಾ ಪ್ರೀತಿಸುತ್ತಿದ್ದಳು. ತಾನು ಉಂಗುರು ಹಾಕಬೇಕಿದ್ದ ಬೆರಳಿಗೆ ಮತ್ಯಾರೋ ಹಾಕಬಹುದು ಎನ್ನುವ ಕೋಪದಲ್ಲಿ ಆಕೆಯ ಉಂಗುರದ ಬೆರಳನ್ನೇ ಕತ್ತರಿಸಿ ಫ್ರಿಜ್ನಲ್ಲಿಟ್ಟಿದ್ದಾಳೆ.ಬ್ರೇಕಪ್ ಬಗ್ಗೆ ವಾಗ್ವಾದ ನಡೆದ ನಂತರ ತನ್ನ ಗೆಳತಿ ಸಾಕಿ ಸಾಟೊ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಯುವಕ ಹೇಳಿದ್ದಾನೆ. ಹೇಗೋ ಆ ಯುವಕ ಸಹಾಯಕ್ಕಾಗಿ ಪೊಲೀಸರ ಬಳಿ ಮನವಿ ಮಾಡಿದ. ಇದಾದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿದಾಗ, ಇಬ್ಬರು ಫ್ಲಾಟ್‌ನಲ್ಲಿಯೇ ಪತ್ತೆಯಾಗಿದ್ದಾರೆ.
ಆ ಯುವಕನ ಎಡ ಕೆನ್ನೆ ಮತ್ತು ಮೂಗಿನ ಮೇಲೆ ಗಾಯದ ಗುರುತುಗಳಿದ್ದವು.ಬ್ರೇಕಪ್ ಮಾಡಿಕೊಳ್ಳುವ ಎಂದಿದ್ದಕ್ಕೆ, ಸಾಟೊ ಚಾಕುವಿನಿಂದ ಯುವಕನ ಉಂಗುರದ ಬೆರಳನ್ನು ಕತ್ತರಿಸಿ ಮದ್ಯದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದಳು. ಆದರೆ, ಆರೋಪಿ ಗೆಳತಿ ಹೇಳುವುದೇನೆಂದರೆ, ಆ ಯುವಕನೇ ಇದನ್ನು ಮಾಡಿದ್ದಾನೆ.ಗೆಳತಿ ತುಂಬಾ ಸುಂದರಿಯಾಗಿದ್ದಳು. ಆಕೆಯನ್ನು ಬಿಟ್ಟು ಹೋಗಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವಳ ಕಿರುಕುಳವನ್ನು ಸಹಿಸಿಕೊಂಡೆ ಮತ್ತು ಅವಳ ಬಗ್ಗೆ ಯಾರಿಗೂ ಹೇಳಲಿಲ್ಲ ಎಂದು ಆತ ಹೇಳಿದ್ದಾನೆ. ಪೋಲಿಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.