newsics.com
ಬೆಂಗಳೂರು : ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಬಿಪಿಎಲ್ ಪಡಿತರ ಚೀಟಿ ಫಲಾನುಭವಿಗಳಿಗೆ ಮೂರು ತಿಂಗಳ ಪಡಿತರವನ್ನು ಮುಂಗಡವಾಗಿ ವಿತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ನ್ಯಾಯಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಪಡಿತರ ವಿತರಿಸಲು ಕೇಂದ್ರ ಸರ್ಕಾರ ಆದೇಶ ನೀಡಿದೆ.
ಈಗಾಗಲೇ ಮೂರು ತಿಂಗಳ ಅವಧಿಗೆ ಆಹಾರ ಧಾನ್ಯಗಳನ್ನು ಮುಂಗಡವಾಗಿ ಭಾರತೀಯ ಆಹಾರ ನಿಗಮದ ಗೋದಾಮುಗಳಿಗೆ ಸಾಗಿಸಲು ಕ್ರಮ ಕೈಗೊಳ್ಳಲಾಗಿದೆ.
ಇದರಿಂದಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡ್ ಪ್ರತಿ ಸದಸ್ಯರಿಗೆ ತಲಾ 15 ಕೆಜಿ ಅಕ್ಕಿ ಸಿಗಲಿದೆ. ಜೂನ್, ಜುಲೈ, ಆಗಸ್ಟ್ ಅವಧಿಗೆ ಆಹಾರ ಭದ್ರತೆ ಕಾಯ್ದೆಯಡಿ ಪಡಿತರ ಹಂಚಿಕೆಗೆ ಸಂಬಂಧಿಸಿದಂತೆ ಭಾರತೀಯ ಆಹಾರ ನಿಗಮ ಆಹಾರ ಪದಾರ್ಥಗಳ ಬೇಡಿಕೆ ವಿವರಗಳನ್ನು ಸಿದ್ಧಪಡಿಸಿದೆ.
RUSSIA – UKRAINE : ಮೇ 15ರಂದು ಉಕ್ರೇನ್ ಜೊತೆ ನೇರ ಮಾತುಕತೆಗೆ ಇಳಿದ ರಷ್ಯಾ